Advertisement

ಕೊರೊನಾ ಕಳವಳ: ಅರುಣಾಚಲ ಪ್ರದೇಶಕ್ಕೆ ವಿದೇಶಿಯರ ಭೇಟಿಗೆ ನಿಷೇಧ

11:45 PM Mar 20, 2020 | Hari Prasad |

ಇಟಾನಗರ: ವಿಶ್ವವನ್ನೇ ಕಳವಳಕ್ಕೀಡುಮಾಡಿರುವ ಕೊರೊನಾ ವೈರಸ್ ಭಾರತದಲ್ಲೂ ಆತಂಕ ಸೃಷ್ಟಿಸುತ್ತಿರುವಂತೆ ಈಶಾನ್ಯ ರಾಜ್ಯಗಳಲ್ಲಿ ಒಂದಾದ ಪ್ರವಾಸಿ ಪ್ರಿಯರ ನೆಚ್ಚಿನ ತಾಣ ಅರುಣಾಚಲ ಪ್ರದೇಶ ತನ್ನ ರಾಜ್ಯಕ್ಕೆ ವಿದೇಶಿ ಪ್ರವಾಸಿಗರ ಭೇಟಿಯನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.

Advertisement

ಈ ನಿಟ್ಟಿನಲ್ಲಿ ರಾಜ್ಯಕ್ಕೆ ಪ್ರವೇಸಿಸುವ ವಿದೇಶಿಯರಿಗೆ ಅಗತ್ಯವಿದ್ದ ಸಂರಕ್ಷಿತ ಪ್ರದೇಶ ಅನುಮತಿಯನ್ನು (PAP) ವಿತರಿಸದೇ ಇರಲು ನಿರ್ಧರಿಸಿದೆ. ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಭಾರತದ ಈ ರಾಜ್ಯಕ್ಕೆ ವಿದೇಶಿ ಪ್ರವಾಸಿಗರು ಪ್ರವೇಶಿಸಬೆಕಾದರೆ ಪಿ.ಎ.ಪಿ. ಅಗತ್ಯವಾಗಿದೆ.

ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹಾಗೂ ವಿವಿಧ ದೇಶಗಳಿಗೆ ಭೇಟಿ ನೀಡಿ ಭಾರತಕ್ಕೆ ಭೇಟಿ ಕೊಡುತ್ತಿರುವ ಪ್ರವಾಸಿಗರ ಮೂಲಕ ನಮ್ಮಲ್ಲಿ ಈ ವೈರಸ್ ಪ್ರಕರಣಗಳು ಹರಡುತ್ತಿರುವುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ರಾಜ್ಯ ಸರಕಾರವು ಈ ಕ್ರಮವನ್ನು ಕೈಗೊಂಡಿದೆ ಎಂದು ಅರುಣಾಚಲ ಸರಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈಶಾನ್ಯ ರಾಜ್ಯಗಳಲ್ಲಿ ಒಂದಾಗಿರುವ ಸಿಕ್ಕಿಂ ಸಹ ವಿದೇಶಿ ಪ್ರವಾಸಿಗರ ಮೇಲೆ ಇದೇ ರೀತಿಯ ನಿಷೇಧವನ್ನು ಹೇರಿದ ಒಂದು ದಿನದ ಬಳಿಕ ಇದೀಗ ಅರುಣಾಚಲ ಸರಕಾರವೂ ಸಹ ತನ್ನ ನಿರ್ಧಾರವನ್ನು ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next