ನವದೆಹಲಿ:ಉತ್ತರ ಭಾರತದಾದ್ಯಂತ ಭಾರೀ ಶೀತಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ದೆಹಲಿ-ಎನ್ ಸಿಆರ್ ಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಹಾಗೂ ಪಂಜಾಬ್ ಗೆ ರೆಡ್ ಅಲರ್ಟ್ ಘೋಷಿಸಿದೆ.
ಡಿಸೆಂಬರ್ 31 ಹಾಗೂ ಜನವರಿ 1ರಂದು ರಕ್ತಹೆಪ್ಪುಗಟ್ಟಿಸುವಂತಹ ಶೀತ ಗಾಳಿ ಬೀಸಲಿರುವ ನಿಟ್ಟಿನಲ್ಲಿ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ಅನ್ನು ಕೂಡಾ ಜಾರಿಗೊಳಿಸಿರುವುದಾಗಿ ವರದಿ ವಿವರಿಸಿದೆ.
ಮುಂದಿನ ನಾಲ್ಕೈದು ದಿನಗಳ ಕಾಲ ಪಂಜಾಬ್, ಹರ್ಯಾಣ, ಚಂಡೀಗಢ್, ದೆಹಲಿ ಹಾಗೂ ಉತ್ತರಾಖಂಡ್ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಪ್ರಮಾಣದ ದಟ್ಟ ಮಂಜಿನ ವಾತಾವರಣ ಇರಲಿದೆ. ಮುಂದಿನ ಮೂರು ದಿನಗಳ ಕಾಲ ಉತ್ತರಪ್ರದೇಶದಲ್ಲಿ ಹಾಗೂ ಎರಡು ದಿನಗಳ ಕಾಲ ರಾಜಸ್ಥಾನದಲ್ಲಿ ದಟ್ಟ ಮಂಜಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ವಿವರಿಸಿದೆ.
ಇದನ್ನೂ ಓದಿ:ಚಿಗರಿಗೆ ಗುಂಡು ಹಾರಿಸಿದ ಇಬ್ಬರ ಸೆರೆ : ಬಂಧಿತರಿಂದ 28 ಜೀವಂತ ಗುಂಡುಗಳು ವಶಕ್ಕೆ
ಗ್ಗೆ 8.30ಕ್ಕೆ ಸಫ್ದರ್ ಜಂಗ್ ನಲ್ಲಿ ದಾಖಲೆಯ 3.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಮುಂದಿನ 24 ಗಂಟೆಗಳ ಕಾಲ ಮತ್ತೆ ಎರಡು ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆಯಾಗುವ ಸಾಧ್ಯತೆ ಇದ್ದಿರುವುದಾಗಿ ಐಎಂಡಿ ತಿಳಿಸಿದೆ.ಮುಂದಿನ ನಾಲ್ಕು ದಿನಗಳ ಕಾಲ ದೆಹಲಿಯ ವಿವಿಧೆಡೆ ಭರ್ಜರಿ ಚಳಿ ಗಾಳಿ ಬೀಸಲದೆ ಎಂದು ಹವಾಮಾನ ಇಲಾಖೆ ವಿವರಿಸಿದೆ.