Advertisement

“ಕಾರಂತರ ಬದುಕೇ ಸತ್ಯ ದರ್ಶನವಿದ್ದಂತೆ’

06:00 AM Oct 02, 2018 | |

ಕೋಟ: ಡಾ| ಶಿವರಾಮ ಕಾರಂತರ ವಿಚಾರಧಾರೆಗಳು ಸಮಾಜದಲ್ಲಿ  ಸಾರ್ವಕಾಲಿಕ ಸತ್ಯಗಳಾಗಿದೆ ಹಾಗೂ ಅವರ ಜೀವನ ಅಧ್ಯಯನದಿಂದ ಬದುಕಿನ ಸತ್ಯದರ್ಶನವಾಗುತ್ತದೆ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ್‌ ಪೂಜಾರಿ ಹೇಳಿದರು.

Advertisement

ಅವರು  ಕೋಟತಟ್ಟು ಗ್ರಾ.ಪಂ., ಡಾ| ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಕೋಟ ಸಾರಥ್ಯದಲ್ಲಿ, ಡಾ|ಶಿವರಾಮ ಕಾರಂತ ಟ್ರಸ್ಟ್‌ ಉಡುಪಿ ಸಹಯೋಗದೊಂದಿಗೆ ಕೋಟ ಕಾರಂತ ಕಲಾಭವನದಲ್ಲಿ  ನಡೆಯುವ  ಹತ್ತುದಿನಗಳ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ  ಅ.1ರಂದು ಚಾಲನೆ ನೀಡಿ ಮಾತನಾಡಿದರು.

ಕಾರಂತರು ನಡೆದಾಡಿದ ಕೋಟದ ಮಣ್ಣಿನಲ್ಲಿ ಅವರ ಹೆಸರಿನಲ್ಲಿ ಈ ಕಾರ್ಯಕ್ರಮ ಆಯೋಜಿಸುವುದು ನಮ್ಮೆಲ್ಲರಿಗೂ ಪುಣ್ಯದ ಕೆಲಸವಾಗಿದೆ ಎಂದರು.

ಮಕ್ಕಳಿಗೆ ಬದುಕುವ ಕಲೆ ಕಲಿಸಿ:
ಶಿಕ್ಷಕ ವಿಠಲ್  ನಾಯಕ್‌ದಿಕ್ಸೂಚಿ ಭಾಷಣ ಮಾಡಿ,  ಇಂದು ಶಾಲೆ-ಕಾಲೇಜು, ಮನೆ ಎಲ್ಲಾ ಕಡೆ ಮಕ್ಕಳಿಗೆ ಕೇವಲ ಓದುವುದನ್ನು ಮಾತ್ರ ಹೇಳಿಕೊಡುತ್ತಿದ್ದೇವೆ. ಆದರೆ ಅವರಿಗೆ ಜೀವನಕ್ಕೆ ಎನು ಬೇಕು. ಹೇಗೆ ಬದುಕಬೇಕು  ಎನ್ನುವುದನ್ನು ಹೇಳಿಕೊಡುತ್ತಿಲ್ಲ. ಜೀವನದಲ್ಲಿ ಮಾರ್ಕ್‌ ಪಡೆಯುವುದು ದೊಡ್ಡ ಕೆಲಸವಲ್ಲ, ಆದರೆ ರಿಮಾರ್ಕ್‌ ಬಾರದ ಹಾಗೆ ಜೀವಿಸುವುದೇ ದೊಡ್ಡ ಸಾಧನೆಯಾಗಿದೆ. ಮನೆಯ ವಾತವರಣ ಸಂಸ್ಕೃತಿಯಿಂದ ಕೂಡಿದ್ದರೆ ಯುವ ಜನಾಂಗ ಸಂಸ್ಕಾರವಂತರಾಗಿ ಬಾಳು¤ತಾರೆ ಎಂದರು.

ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ರಘು ತಿಂಗಳಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪಡುಕರೆ ಕಾಲೇಜು ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆಯ ತಾಂತ್ರಿಕ ವಿಭಾಗದ ಮೇಲ್ವಿಚಾರಕಿ ಪೂರ್ಣಿಮ, ಉಪನ್ಯಾಸಕ ಸಂಜೀವ ಸಿ.ಗುಂಡ್ಮಿ, ಗ್ರಾ.ಪಂ. ಪಿಡಿಒ ಸುಜಾತ ಲಕ್ಕಪ್ಪ, ಕಾರ್ಯದರ್ಶಿ ಮೀರಾ ಉಪಸ್ಥಿತರಿದ್ದರು.

Advertisement

ಪ್ರತಿಷ್ಠಾನದ ಗೌರವಾಧ್ಯಕ್ಷ ಆನಂದ್‌ ಸಿ.ಕುಂದರ್‌ ಸ್ವಾಗತಿಸಿ, ಕಾರ್ಯದರ್ಶಿ ನರೇಂದ್ರ ಕುಮಾರ್‌ ಕೋಟ ಪ್ರಾಸ್ತಾವಿಕ ಮಾತನಾಡಿ, ಪ್ರಸಾದ್‌ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next