Advertisement

ಯುಕೆಜಿ ಮಕ್ಕಳಿಗೆ ಪದವೀಧರರಂತೆ ಘಟಿಕೋತ್ಸವ!

11:54 AM Mar 31, 2017 | Team Udayavani |

ಯಲಹಂಕ: “ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ನಮ್ಮ ನೆಲದ ಸಂಸ್ಕೃತಿ, ಜೀವನವಿಧಾನ, ಮೌಲ್ಯಗಳು ಹಾಗೂ ಜೀವನ ಪ್ರೀತಿಯನ್ನು ಕಲಿಸದಿದ್ದರೆ ನಾಳಿನ ಸವಾಲುಗಳನ್ನು ಎದುರಿಸಲು ಸಾದ್ಯವಿಲ್ಲ,” ಎಂದು  ಶಿಕ್ಷಣ ತಜ್ಞ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪೊ›. ಎನ್‌.ಆರ್‌.ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. 

Advertisement

ಯಲಹಂಕದ ನಿಟ್ಟೆ ಇಂಟರ್‌ ನ್ಯಾಶನಲ್‌ ಸ್ಕೂಲ್‌ನಲ್ಲಿ ನಡೆದ ಯುಕೆಜಿ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, “ಜಗತ್ತಿನ ಅತ್ಯಂತ ಬಲಾಡ್ಯ ಆರ್ಥಿಕ ರಾಷ್ಟ್ರವಾಗಿ ಭಾರತ ಹೊರಹೊಮ್ಮುತ್ತಿದೆ. ಈ ಸಂದರ್ಭದಲ್ಲಿ ನಾವು ಮಕ್ಕಳನ್ನು ಕೇವಲ ನಮ್ಮ ರಾಷ್ಟ್ರದ ಉತ್ತಮ ಪ್ರಜೆಗಳನ್ನಾಗಿಸಿದರೆ ಸಾಲದು,

ಇಡೀ ಜಗತ್ತಿನ ಜವಾಬ್ದಾರಿಯುತ ಪ್ರಜೆಗಳನ್ನಾಗಿಸಬೇಕು. ಮೂಲ ತಳಹದಿ ಸದೃಢವಾಗಿರಬೇಕೆಂದರೆ ನೈತಿಕತೆಯ ಅಳವಡಿಕೆ ಅಗತ್ಯ,” ಎಂದರು.  ಗೌನ್‌ ಹಾಗೂ ಟೊಪ್ಪಿಗಳನ್ನು ಧರಿಸಿದ ಎಳೆ ಮಕ್ಕಳು ‘ಯುಕೆಜಿ’ ಪದವಿ ಸ್ವೀಕರಿಸಿದರು.ಶಾಲೆಯ ಒಟ್ಟು ಐವತ್ತು ಮಕ್ಕಳು ‘ಯುಕೆಜಿ’ ಪದವಿ ಸ್ವೀಕರಿಸಿ ಒಂದನೇ ತರಗತಿಗೆ ಪದಾರ್ಪಣೆ ಮಾಡಿದರು.
 
“ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಈ ಕಾರ್ಯಕ್ರಮ ಗಳು ಸಹಕಾರಿಯಾಗುತ್ತವೆ,” ಎಂದು ಸಂಸ್ಥೆಯ ಪ್ರಾಂಶುಪಾಲ ಡಾ.ಹೆಚ್‌.ಸಿ. ನಾಗರಾಜ್‌ ಹೇಳಿದರು. ನಿಟ್ಟೆ ಇಂಟರ್‌ ನ್ಯಾಶನಲ್‌ ಸ್ಕೂಲ್‌ನ ಪ್ರಾಂಶುಪಾಲೆ ಡಾ.ಸಂಧ್ಯಾ ಸಿಂಗ್‌ ಹಾಗೂ ಕಿಂಡರ್‌ ಗಾರ್ಡನ್‌ ಮುಖ್ಯೋಪಾಧ್ಯಾಯಿನಿ ಕಲಾರಾಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next