Advertisement

ಬಾಲ್ಯದಲ್ಲಿ ಮನೆಯ ಜವಾಬ್ದಾರಿ ಈಗ ದೇಶ ರಕ್ಷಣೆಗೆ ಹೆಗಲು

12:30 AM Feb 10, 2019 | |

ಕೋಟ: ನಾಲ್ಕು ಮಕ್ಕಳ ಬಡ ಕುಟುಂಬದಲ್ಲಿ ಇವನೊಬ್ಬನೇ ಪುತ್ರ. ಹೀಗಾಗಿ ಸವಾಲು- ಜವಾಬ್ದಾರಿಗಳಿಗೆ ಹೆಗಲು ಕೊಡುವುದು ಬಾಲ್ಯದಿಂದಲೇ ರಕ್ತಗತವಾಗಿತ್ತು. 11ನೆಯ ವಯಸ್ಸಿನಿಂದಲೇ ಬಿಡುವಿ ನಲ್ಲಿ ದುಡಿಮೆ ಮಾಡುತ್ತಿದ್ದ. ಆತ ಇಂದು ಯೋಧನಾಗಿ ದೇಶ ಕಾಯುವ ಕಾಯಕದಲ್ಲಿದ್ದಾನೆ.

Advertisement

ಇದು ಕೋಟ ಸಮೀಪ ಅಚ್ಲಾಡಿ ಗ್ರಾಮದ ಗುಲಾಬಿ ಪೂಜಾರಿ, ವಿಟಲ ಪೂಜಾರಿ ದಂಪತಿಯ ಪುತ್ರ ಮಂಜುನಾಥ ಪೂಜಾರಿ ಅವರ ಜೀವನಗಾಥೆ.

ಭಾರತೀಯ ಸೇನೆಗೆ 2006ರಲ್ಲಿ ಸಾಮಾನ್ಯ ಸೈನಿಕನಾಗಿ ಸೇರ್ಪಡೆಗೊಂಡ ಇವರು ಈಗ ದಿಲ್ಲಿಯಲ್ಲಿದ್ದಾರೆ. ಪ್ರಸ್ತುತ ಅವರು ದೇಶದ ಹೆಮ್ಮೆಯ ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ)ದ ಬ್ಲಾ ಕ್‌ ಕ್ಯಾಟ್‌ ಕಮಾಂಡೋ. ಮಂಜುನಾಥ ಅವರು ಸೇನೆಯಲ್ಲಿ 13 ವರ್ಷಗಳ ವೃತ್ತಿ ಜೀವನವನ್ನು ಪೂರೈಸಿದ್ದಾರೆ. ಸೇವೆಯ ಬಗ್ಗೆ ಸಂತೃಪ್ತಿ, ಹೆಮ್ಮೆ ಅವರಿಗಿದೆ. ಜತೆಗೆ ಮನೆಯ ಜವಾಬ್ದಾರಿಗೆ ಈಗಲೂ ಹೆಗಲೊಡ್ಡಿದ್ದಾರೆ, ಮೂವರು ಸಹೋದರಿಯರಿಗೆ ಮದುವೆ ಮಾಡಿಸಿದ್ದಾರೆ.

ಬಡತನ ಕಲಿಸಿದ ಜೀವನ ಪಾಠ
ಕೊಕ್ಕರ್ಣೆ ವಿಟuಲ ಪೂಜಾರಿ ಮತ್ತು ಗುಲಾಬಿ ದಂಪತಿಯ ನಾಲ್ವರು ಮಕ್ಕಳಲ್ಲಿ ಮಂಜುನಾಥ ಎರಡನೆಯವರು. ಮತ್ತುಳಿದ ಮೂವರು ಹೆಣ್ಣುಮಕ್ಕಳು. ಅಪ್ಪ- ಅಮ್ಮ ಕೃಷಿ, ಕೂಲಿ ಮುಂತಾದ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಹೀಗಾಗಿ ಮಕ್ಕಳ ಶಿಕ್ಷಣ, ಮನೆಯ ಖರ್ಚುಗಳ ನಿಭಾವಣೆ ತ್ರಾಸದಾಯಕವಾಗಿತ್ತು. ಮಂಜುನಾಥ ಬಾಲ್ಯದಿಂದಲೇ ಮನೆಯ ಜವಾಬ್ದಾರಿಗಳ ಜತೆಗೆ ಸ್ಥಳೀಯ ಅಚ್ಲಾಡಿ ಮೂಡುಕೇರಿ ಹಿ.ಪ್ರಾ. ಶಾಲೆಯಲ್ಲಿ 4ನೇ ತರಗತಿ ತನಕ ವಿದ್ಯಾಭ್ಯಾಸ ಪೂರೈಸಿದ. ಮುಂದಿನ ಶಿಕ್ಷಣಕ್ಕಾಗಿ ಮಧುವನ ವಿವೇಕಾನಂದ ಹಿ.ಪ್ರಾ. ಶಾಲೆಯನ್ನು ಸೇರುವ ಸಂದರ್ಭ ಶಾಲೆ ಫೀಸು ಇತ್ಯಾದಿಗಾಗಿ ಸ್ಥಳೀಯ ಸೆಂಟ್ರಿಂಗ್‌ ಗುತ್ತಿಗೆದಾರರೊಬ್ಬರ ಬಳಿ ಹಠ ಹಿಡಿದು ರಜಾದಿನಗಳಲ್ಲಿ ಎರಡು ತಿಂಗಳು ಕೆಲಸ ಮಾಡಿದ್ದ. ಎಳೆಯ ಮಂಜುನಾಥನ ಚುರುಕಿನ ಕೆಲಸ ಗಮನಿಸಿ ಆ ಗುತ್ತಿಗೆದಾರರು ಅನಂತರ ಪ್ರತಿ ವರ್ಷ ಹುಡುಗನನ್ನು ತಾನೇ ಕರೆದು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದರಂತೆ.

ಅನಂತರ ಸಾೖಬ್ರಕಟ್ಟೆ ಮಹಾತ್ಮಾ ಗಾಂಧಿ ಪ್ರೌಢಶಾಲೆ ಯಲ್ಲಿ ಪ್ರೌಢಶಿಕ್ಷಣ, ಕೊಕ್ಕರ್ಣೆ ಪ. ಪೂರ್ವ ಕಾಲೇಜಿನಲ್ಲಿ ಪ.ಪೂ. ಶಿಕ್ಷಣವನ್ನು ಮುಗಿಸಿದರು. ಆ ಸಂದರ್ಭ ಜೀವನ ನಿರ್ವಹಣೆಗೆ ನೆರವಾಗಿದ್ದು ಶ್ಯಾಮಿಯಾನ, ಇಲೆಕ್ಟ್ರೀಶಿಯನ್‌ ಮುಂತಾದ ಉದ್ಯೋಗಗಳು.

Advertisement

ಸೈನಿಕನಾದ
ಮಂಜುನಾಥ ಅವರಿಗೆ ಬಾಲ್ಯದಿಂದಲೂ ಪೊಲೀಸ್‌ ಅಧಿಕಾರಿ ಆಗಬೇಕು ಎನ್ನುವ ಹಂಬಲವಿತ್ತು. ಹೀಗಾಗಿ 2004ರಲ್ಲಿ ಬ್ರಹ್ಮಾವರದಲ್ಲಿ ಹೋಮ್‌ಗಾರ್ಡ್‌ ಸೇವೆಗೆ ಸೇರಿ 3 ವರ್ಷ ಸೇವೆ ಸಲ್ಲಿಸಿದರು. ಬಳ 2005ರಲ್ಲಿ ಪೊಲೀಸ್‌ ಪೇದೆ ಪರೀಕ್ಷೆ ಬರೆದು ಉತೀರ್ಣರಾದರು. ಕಾರಣಾಂತರಗಳಿಂದ ಪೊಲೀಸ್‌ ಕನಸು ಬಿಟ್ಟು ಮತ್ತೆ ಶಾಮಿಯಾನ ಉದ್ಯೋಗದ ಕಡೆ ಮುಖ ಮಾಡಿದರು.

2006ರಲ್ಲಿ ಒಂದು ದಿನ ಪತ್ರಿಕೆಯ ಉದ್ಯೋಗ ಅಂಕಣದ ಕಡೆ ಕಣ್ಣಾಡಿಸುತ್ತಿದ್ದಾಗ ಶಿರಸಿ ಮಾರಿಕಾಂಬ ಕ್ರೀಡಾಂಗಣದಲ್ಲಿ ಸೈನಿಕರ ನೇಮಕಾತಿ ರ್ಯಾಲಿ ನಡೆಯುತ್ತಿರುವ ವಿಚಾರ ತಿಳಿಯಿತು. ನೇರವಾಗಿ ಅರ್ಜಿ ಹಾಕಿ ರ್ಯಾಲಿಯಲ್ಲಿ ಭಾಗವಹಿಸಿದರು. 

ಆಗ ಹೋಮ್‌ಗಾರ್ಡ್‌ನಲ್ಲಿ ಪಡೆದ ತರಬೇತಿ ಕೈ ಹಿಡಿಯಿತು, ಪ್ರಥಮ ಪ್ರಯತ್ನದಲ್ಲೇ ಎಲ್ಲ ಪರೀಕ್ಷೆಗಳಲ್ಲೂ ಉತ್ತೀರ್ಣನಾಗಿ ಸೇನೆಗೆ ನೇಮಕಗೊಂಡರು.

ಸರ್ಜಿಕಲ್‌ ಸ್ಟ್ರೈಕ್‌ ಮರೆಯಲಾಗದ ಕ್ಷಣ
ಪಾಕಿಸ್ಥಾನ ವಿರುದ್ಧ  ಸರ್ಜಿಕಲ್‌ ಸ್ಟ್ರೈಕ್‌ ನಡೆಯುವ ಸಂದರ್ಭ ಮಂಜುನಾಥ  ಅವರು ಜಮ್ಮುಕಾಶ್ಮೀರದಲ್ಲಿ  ಸೇವೆಯಲ್ಲಿದ್ದರು. ದಾಳಿಗಾಗಿ  ಶಸ್ತ್ರಾಸ್ತ್ರ ಒದಗಿಸುವ ಕಾರ್ಯವನ್ನು ಮಾಡಿದ್ದಾರೆ. ಅದು ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ನೆನಪಿಸಿಕೊಳ್ಳುತ್ತಾರೆ.

ದುರ್ಗಮ ಸ್ಥಳಗಳಲ್ಲಿ ಸೇವೆ
2006ರಲ್ಲಿ ಹೈದರಾಬಾದ್‌ನಲ್ಲಿ 1 ವರ್ಷ ತರಬೇತಿ ಮುಗಿಸಿ, 2007-08ರಲ್ಲಿ ಜಮ್ಮು ಕಾಶ್ಮೀರದ ರಜೌರಿಯಲ್ಲಿ ಸೇವೆಗೆ ಸೇರ್ಪಡೆಗೊಂಡರು. ಅನಂತರ ಕಾಶ್ಮೀರ, ಲೇಹ್‌ಲಢಾಕ್‌, ಪ. ಬಂಗಾಲ, ಭೂತಾನ್‌, ಡೆಹ್ರಾಡೂನ್‌ ಮುಂತಾದ ಅತ್ಯಂತ ದುರ್ಗಮ ಸ್ಥಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2018ರಿಂದ ಎನ್‌ಎಸ್‌ಜಿ ಕಮಾಂಡೋ ಪಡೆಯಲ್ಲಿದ್ದಾರೆ.

ವಿದೇಶ ಸೇವಾ ಪದಕ ಪುರಸ್ಕಾರ
2011ರಲ್ಲಿ ಭೂತಾನ್‌-ಇಂಡೋ ಜಂಟಿ ಟ್ರೈನಿಂಗ್‌ ಕ್ಯಾಂಪ್‌ನಲ್ಲಿ ಮಂಜು ನಾಥ ಪೂಜಾರಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ವಿದೇಶ ಸೇವಾ ಪದಕ ನೀಡಿ ಗೌರವಿಸಲಾಗಿದೆ. 

ಜತೆಗೆ 2018ರಲ್ಲಿ ನಡೆದ ಸೇನೆಯ 21.1 ಕಿಲೊಮೀಟರ್‌ ಆಲ್‌ ಇಂಡಿಯನ್‌ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.

ಹಲವರ ಸಹಾಯ ಮರೆಯಲಾಗದು
ಬಾಲ್ಯದಿಂದ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕು ಎನ್ನುವ ಹಂಬಲದಲ್ಲಿದ್ದೆ. ಆದರೆ ಈಗ ಅದಕ್ಕಿಂತ ದೊಡ್ಡ ಗೌರವದ ಹುದ್ದೆ ಸಿಕ್ಕಿದೆ. ಚಿಕ್ಕವನಿದ್ದಾಗ ನನಗೆ ಕೆಲಸ ನೀಡಿದ ಅಚಾÉಡಿಯ ಗೋಪಾಲ ಗಾಣಿಗ ಹಾಗೂ ಶಿಕ್ಷಣಕ್ಕೆ ನಿರಂತರ ನೆರವು ನೀಡಿದ ಕೃಷ್ಣ ಪೂಜಾರಿ ಗರಿಕೆಮಠ ಮತ್ತು ಸುಮುಖ ಶ್ಯಾಮಿಯಾನ್‌ನ ಪ್ರಕಾಶ್‌ ಪೂಜಾರಿ ಇವರೆಲ್ಲರ ಸಹಕಾರ ಬಹಳಷ್ಟಿದೆ. ಜತೆಗೆ ತಂದೆ-ತಾಯಿ, ಕುಟುಂಬದವರು ಗೆಳೆಯರು, ಗುರುಗಳು, ಬ್ರಹ್ಮಾವರ ಹೋಮ್‌ಗಾರ್ಡನಲ್ಲಿ ತರಬೇತಿ ನೀಡಿದವರ ಸಹಾಯ ಮರೆಯಲಾಗದು.
– ಮಂಜುನಾಥ ಪೂಜಾರಿ

ತಮ್ಮನ ಬಗ್ಗೆ ಹೆಮ್ಮೆ
ಮಂಜುನಾಥ ಬಾಲ್ಯದಿಂದ ಮನೆಯ ಜವಾಬ್ದಾರಿಗಳಿಗೆ ಹೆಗಲು ಕೊಟ್ಟು ನಮ್ಮ ಕಷ್ಟಸುಖಗಳಿಗೆ ಭಾಗಿಯಾದವ. ಇವತ್ತು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ ಎನ್ನುವುದು ನಮಗೆ ಅತ್ಯಂತ ಖುಷಿಯ ಸಂಗತಿ. ಆತನಲ್ಲಿ ಹಲವಾರು ಕನಸುಗಳಿದ್ದು ಅದೆಲ್ಲವೂ ಕೈಗೂಡಲಿ.
– ಶ್ಯಾಮಲಾ, ಸಹೋದರಿ

ಸಮಾಜ ಸೇವಾಸಕ್ತ
ಬಾಲ್ಯದಿಂದಲೂ ಸಮಾಜಸೇವೆ ಯಲ್ಲಿ ಆಸಕ್ತಿ ಹೊಂದಿದ್ದ ಮಂಜು ನಾಥ ಈಗಲೂ ಸ್ಥಳೀಯ ಸನ್‌ಶೈನ್‌ ಗೆಳೆಯರ ಬಳಗದ ಸಕ್ರಿಯ ಸದಸ್ಯರಾಗಿದ್ದಾರೆ. ಅದರ ವಾರ್ಷಿಕೋ ತ್ಸವ ಸಂದರ್ಭ ಊರಿಗೆ ಆಗಮಿಸಿ ಭಾಗವಹಿಸಿ ಖುಷಿಪಡುತ್ತಾರೆ.

–  ರಾಜೇಶ ಗಾಣಿಗ ಅಚ್ಲಾಡಿ
 

Advertisement

Udayavani is now on Telegram. Click here to join our channel and stay updated with the latest news.

Next