Advertisement

ವುಹಾನ್‌ ಓಪನ್‌: ಸಬಲೆಂಕಾ ಚಾಂಪಿಯನ್‌

06:00 AM Sep 30, 2018 | Team Udayavani |

ವುಹಾನ್‌ (ಚೀನ): ಎಸ್ತೋನಿಯಾದ ಅನೆಟ್‌ ಕೊಂಟವೀಟ್‌ ಅವರನ್ನು 6-3, 6-3 ಅಂತರದಿಂದ ಪರಾಭವಗೊಳಿಸಿದ ಬೆಲರೂಸ್‌ನ ಅರಿನಾ ಸಬಲೆಂಕಾ “ವುಹಾನ್‌ ಓಪನ್‌ ಟೆನಿಸ್‌’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದು ಕೊಂಟವೀಟ್‌ ಪಾಲಾದ 2ನೇ ಡಬ್ಲ್ಯುಟಿಎ ಪ್ರಶಸ್ತಿ. ಅವರಿಗೆ ಮೊದಲ ಡಬ್ಲ್ಯುಟಿಎ ಪ್ರಶಸ್ತಿ ಕೂಡ “ಕನೆಕ್ಟಿಕಟ್‌ ಓಪನ್‌’ನಲ್ಲಿ ಇದೇ ವರ್ಷ ಒಲಿದಿತ್ತು. ವುಹಾನ್‌ ಜಯದೊಂದಿಗೆ ಡಬ್ಲ್ಯುಟಿಎ ರ್‍ಯಾಂಕಿಂಗ್‌ನಲ್ಲಿ 4 ಸ್ಥಾನ ಮೇಲೇರಲಿರುವ ಸಬಲೆಂಕಾ, ಜೀವನಶ್ರೇಷ್ಠ 16ನೇ ಸ್ಥಾನ ತಲುಪುವರು.

Advertisement

ಇದೇ ವೇಳೆ ರಶ್ಯದ ಮಾರ್ಗರಿಟಾ ಗಾಸ್ಪರಿಯಾನ್‌ “ಟಾಷೆRಂಟ್‌ ಓಪನ್‌ ಟೆನಿಸ್‌’ ಚಾಂಪಿಯನ್‌ ಆಗಿದ್ದಾರೆ. ಫೈನಲ್‌ನಲ್ಲಿ ಅವರು ಅನಾಸ್ತಾಸಿಯಾ ಪೊಟಪೋವಾ ವಿರುದ್ಧ 6-2, 6-1 ಅಂತರದ ಜಯ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next