Advertisement

ದೇಶದ ಆರ್ಥಿಕತೆಗೆ ಆರ್ಯವೈಶ್ಯರ ಕೊಡುಗೆ ಅಪಾರ: ಸಂಸದ ತೇಜಸ್ವಿ ಸೂರ್ಯ

10:02 AM Jan 13, 2020 | sudhir |

ಬೆಂಗಳೂರು: ಆರ್ಯವೈಶ್ಯರಿಗೆ ವ್ಯಾಪಾರ- ವ್ಯವಹಾರ ನಡೆಸುವುದು ರಕ್ತಗತವಾಗಿ ಬಂದಿರುವಂತ ಕಲೆಯಾಗಿದ್ದು, ಈ ಸಮಾಜ ದೇಶದ ಆರ್ಥಿಕತೆಗೆ ಮತ್ತು ಸಂಪನ್ಮೂಲ ಸೃಷ್ಟಿಗೆ ಬಹಳ ದೊಡ್ಡ ಕೊಡುಗೆ ನೀಡುತ್ತಿರುವ ಸಮಾಜವಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟರು.

Advertisement

“ಬಿ ಶಿಪ್‌’ ಆರ್ಯ ವೈಶ್ಯ ಸಂಘದಿಂದ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ 3ನೇ ವರ್ಷದ “5ಕೆ ವಾಕಥಾನ್‌’ನಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಬಿ ಶಿಪ್‌’ ಎಂಬ ಸಂಸ್ಥೆ ಮುಖಾಂತರ ಹೊಸ ಪೀಳಿಗೆಯ ಯುವಕರಿಗೆ ಹೊಸ ಉದ್ಯಮ ಆರಂಭಿಸುವ ಅವಕಾಶಗಳು, ಸಾಮಾಜಿಕ ಹೊಣೆಗಾರಿಕೆ ಮತ್ತು ನಾಯಕತ್ವದ ಗುಣದ ಬಗ್ಗೆ ಮಾಹಿತಿ ಸಿಗುತ್ತಿವೆ. ರಾಷ್ಟ್ರೀಯ ಯುವ ದಿನದ ಪ್ರಯುಕ್ತ ವಾಕಥಾನ್‌ ಆಯೋಜಿಸಿರುವುದು ಸೂಕ್ತವಾಗಿದೆ. ಈ ರೀತಿಯ ಕಾರ್ಯಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.

ಜಾಥಾ ವೇಳೆ ಪರಿಸರ ಜಾಗೃತಿ ಜತೆಗೆ ಅನ್ನದ ಮಹತ್ವದ ಬಗ್ಗೆಯೂ ಅರಿವು ಮೂಡಿಸಲಾಯಿತು. ಜಾಥಾದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಿಂದ ಆರಂಭವಾಗಿ ಸೌತ್‌ ಎಂಡ್‌ ಮಾರ್ಗವಾಗಿ ಹಳೆಯ ನಂದ ಚಿತ್ರಮಂದಿರದ ಬಳಿ ಮುಕ್ತಾಯವಾಯಿತು. ಜಾಥಾದಲ್ಲಿ ಪಾಲ್ಗೊಂಡಿದ್ದವರಿಗೆ ಪದಕ, ಸಸಿ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next