Advertisement

Arrest ವಿರುದ್ಧಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಜಾ; ಪಿತೂರಿ ಇದೆ ಎಂದ ಕೋರ್ಟ್

05:40 PM Apr 09, 2024 | Team Udayavani |

ಹೊಸದಿಲ್ಲಿ: ಆಪಾದಿತ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ನಾಳೆ ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ ಆಮ್ ಆದ್ಮಿ ಪಕ್ಷ ಹೇಳಿದೆ.

Advertisement

ಹೈಕೋರ್ಟ್ ಆದೇಶದ ನಂತರ, ಜಾರಿ ನಿರ್ದೇಶನಾಲಯವು ಎಎಪಿ ಮುಖ್ಯಸ್ಥ ಕೇಜ್ರಿವಾಲ್ ಮದ್ಯ ನೀತಿ ಪ್ರಕರಣದ ‘ಕಿಂಗ್‌ಪಿನ್’ ಎಂದು ಕರೆದಿದೆ ದೆಹಲಿ ರೂಸ್ ಅವೆನ್ಯೂ ನ್ಯಾಯಾಲಯದ ಹಿಂದಿನ ಆದೇಶದ ಪ್ರಕಾರ ಏಪ್ರಿಲ್ 15 ರವರೆಗೆ ತಿಹಾರ್ ಜೈಲಿನಲ್ಲಿ ಇರಬೇಕಾಗಿದೆ.

ತನ್ನ ತೀರ್ಪನ್ನು ಪ್ರಕಟಿಸುವಾಗ, ಜಾರಿ ನಿರ್ದೇಶನಾಲಯವು ಹಂಚಿಕೊಂಡ ವಿಷಯದ ಪ್ರಕಾರ, ಅರವಿಂದ್ ಕೇಜ್ರಿವಾಲ್ ಅವರು “ಇತರರೊಂದಿಗೆ ಪಿತೂರಿ ನಡೆಸಿದ್ದಾರೆ” ಮತ್ತು “ಅಪರಾಧದ ಆದಾಯವನ್ನು ಬಳಸಿಕೊಳ್ಳುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ” ಎಂದು ಹೈಕೋರ್ಟ್ ಗಮನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next