Advertisement

ಬಿಜೆಪಿಯವರು ದುರಹಂಕಾರಿಗಳು; ನಮಗೆ ಒಂದು ಅವಕಾಶ ನೀಡಿ: ಗುಜರಾತ್ ನಲ್ಲಿ ಕೇಜ್ರಿವಾಲ್

08:28 AM Apr 03, 2022 | Team Udayavani |

ಅಹಮದಾಬಾದ್: ಪಂಜಾಬ್ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಲವಲವಿಕೆಯಿಂದಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ಗುಜರಾತ್‌ನತ್ತ ತನ್ನ ಗಮನವನ್ನು ಹರಿಸಿದೆ.

Advertisement

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ, ಅರವಿಂದ ಕೇಜ್ರಿವಾಲ್ ಶನಿವಾರ ಅಹಮದಾಬಾದ್‌ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ಆಪ್ ತಿರಂಗ ಯಾತ್ರೆ ಎಂದು ರೋಡ್‌ ಶೋನಲ್ಲಿ ಭಾಗವಹಿಸಿದರು.

ರೋಡ್‌ ಶೋ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, “ಗುಜರಾತ್‌ನಲ್ಲಿ ಬಿಜೆಪಿ 25 ವರ್ಷಗಳಿಂದ ಅಧಿಕಾರದಲ್ಲಿದೆ ಆದರೆ ಭ್ರಷ್ಟಾಚಾರವನ್ನು ಕೊನೆಗೊಳಿಸಲು ಸಾಧ್ಯವಾಗಲಿಲ್ಲ” ಎಂದರು.

“ನಾನು ಯಾವುದೇ ಪಕ್ಷವನ್ನು ಟೀಕಿಸಲು ಬಂದಿಲ್ಲ, ಬಿಜೆಪಿಯನ್ನು ಸೋಲಿಸಲು ಬಂದಿಲ್ಲ ಅಥವಾ ಕಾಂಗ್ರೆಸ್ ಸೋಲಿಸಲು ಬಂದಿಲ್ಲ. ನಾನು ಗುಜರಾತನ್ನು ಗೆಲ್ಲಿಸಲು ಬಂದಿದ್ದೇನೆ, ಗುಜರಾತ್ ಮತ್ತು ಗುಜರಾತಿಗಳನ್ನು ಗೆಲ್ಲಿಸಬೇಕು, ಗುಜರಾತ್‌ ನಲ್ಲಿ ಭ್ರಷ್ಟಾಚಾರ ಕೊನೆಗಾಣಬೇಕು” ಎಂದು ಕೇಜ್ರಿವಾಲ್ ಹೇಳಿದರು.

ಇದನ್ನೂ ಓದಿ:ಅವಧಿಪೂರ್ವ ಚುನಾವಣೆಗೆ ನೋ ಎಂದ ಅಮಿತ್ ಶಾ

Advertisement

“25 ವರ್ಷಗಳ ಅಧಿಕಾರದಲ್ಲಿರುವ ಬಿಜೆಪಿಯವರು ಈಗ ದುರಹಂಕಾರಿಯಾಗಿದ್ದಾರೆ, ಅವರು ಇನ್ನು ಮುಂದೆ ಜನರ ಮಾತು ಕೇಳುವುದಿಲ್ಲ, ಪಂಜಾಬ್‌ ನ ಜನರು ಮಾಡಿದಂತೆ ಆಮ್ ಆದ್ಮಿ ಪಕ್ಷಕ್ಕೂ ಒಂದು ಅವಕಾಶ ನೀಡಿ, ದೆಹಲಿಯ ಜನರು ನೀಡಿದಂತೆ ಆಮ್ ಆದ್ಮಿಗೆ ಒಂದು ಅವಕಾಶ ನೀಡಿ. ಒಂದು ವೇಳೆ ನಮ್ಮ ಆಡಳಿತ ನಿಮಗೆ ಇಷ್ಟವಾಗದಿದ್ದರೆ ಮುಂದಿನ ಬಾರಿ ನಮ್ಮನ್ನು ಬದಲಾಯಿಸಿ. ಆದರೆ ಆಮ್ ಆದ್ಮಿ ಪಕ್ಷಕ್ಕೆ ಒಂದು ಬಾರಿ ಅವಕಾಶ ನೀಡಿದರೆ ನೀವು ಎಲ್ಲಾ ಪಕ್ಷಗಳನ್ನು ಮರೆತುಬಿಡುತ್ತೀರಿ”ಎಂದು ಅವರು ರೋಡ್ ಶೋನಲ್ಲಿ ಹೇಳಿದರು.

ಗುಜರಾತ್ ನಲ್ಲಿ ಈ ವರ್ಷದ ಅಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next