Advertisement

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

09:46 AM Apr 23, 2024 | Team Udayavani |

ನವದೆಹಲಿ: ಮದ್ಯ ಹಗರಣ ಪ್ರಕರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅನಾರೋಗ್ಯ ಮತ್ತು ಇನ್ಸುಲಿನ್ ವಿವಾದ ಶಮನವಾಗುತ್ತಿಲ್ಲ. ಇನ್ಸುಲಿನ್ ಬಗ್ಗೆ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ತೀವ್ರ ಮಾತಿನ ಚಕಮಕಿ ನಡೆಯುತ್ತಿದ್ದು ಇದರ ನಡುವೆ ತಿಹಾರ್‌ನಲ್ಲಿ ಕೇಜ್ರಿವಾಲ್‌ಗೆ ಮೊದಲ ಬಾರಿಗೆ ಇನ್ಸುಲಿನ್ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

Advertisement

ಮೂಲಗಳ ಪ್ರಕಾರ, ಜೈಲಿನಲ್ಲಿ ಕೇಜ್ರಿವಾಲ್ ಅವರ ಶುಗರ್ ಲೆವೆಲ್ ನಿರಂತರವಾಗಿ ಹೆಚ್ಚುತ್ತಿದೆ. ಅದರಂತೆ ಶುಗರ್ ಲೆವೆಲ್ 320ಕ್ಕೆ ತಲುಪಿತ್ತು. ಇದಾದ ನಂತರ ಅವರಿಗೆ ಇನ್ಸುಲಿನ್ ನೀಡಲಾಯಿತು. ಮದ್ಯದ ಹಗರಣ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ, ಅವರಿಗೆ ಮೊದಲ ಬಾರಿಗೆ ಇನ್ಸುಲಿನ್ ನೀಡಲಾಗಿದೆ ಎಂದು ಹೇಳಲಾಗಿದೆ.

ಈ ಹಿಂದೆ, ಕೇಜ್ರಿವಾಲ್‌ಗೆ ಇನ್ಸುಲಿನ್ ನೀಡದ ವಿಷಯದ ಕುರಿತು ನೂರಾರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ತಿಹಾರ್ ಜೈಲಿನಲ್ಲಿ ಪ್ರತಿಭಟನೆ ನಡೆಸಿದ್ದರು. ಪಕ್ಷದ ಕಾರ್ಯಕರ್ತರು ತಿಹಾರ್ ಹೊರಗೆ ಜಮಾಯಿಸಿ ಇನ್ಸುಲಿನ್ ಡೋಸ್ ಹಿಡಿದು ಜೈಲು ಆಡಳಿತದ ವಿರುದ್ಧ ಸಾಂಕೇತಿಕ ಪ್ರತಿಭಟನೆ ನಡೆಸಿ ಕೇಜ್ರಿವಾಲ್‌ಗೆ ಇನ್ಸುಲಿನ್ ನೀಡುವಂತೆ ಎಎಪಿ ನಾಯಕರು ತಿಹಾರ್ ಜೈಲು ಅಧಿಕಾರಿಗಳನ್ನು ಒತ್ತಾಯಿಸಿದ್ದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಲ್ಲಿ ‘ನಿಧಾನ ಸಾವಿನ’ತ್ತ ತಳ್ಳಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿತ್ತು. ಅವರಿಗೆ ಇನ್ಸುಲಿನ್ ನೀಡಲು ಅಧಿಕಾರಿಗಳು ಏಕೆ ನಿರಾಕರಿಸುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಪಕ್ಷ ಎತ್ತಿತ್ತು. ಆದರೆ ಈ ಎಲ್ಲ ಹೇಳಿಕೆಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ತಿರಸ್ಕರಿಸಿದ್ದಾರೆ. ಕೇಜ್ರಿವಾಲ್ ಅವರ ಆಹಾರ ಮತ್ತು ಇನ್ಸುಲಿನ್ ಅಗತ್ಯತೆಯ ಬಗ್ಗೆ ಜೈಲು ಅಧಿಕಾರಿಗಳ ವರದಿಯನ್ನು ಅವರು ಉಲ್ಲೇಖಿಸಿದ್ದರು.

ಇದನ್ನೂ ಓದಿ: Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Advertisement

 

Advertisement

Udayavani is now on Telegram. Click here to join our channel and stay updated with the latest news.

Next