Advertisement

CBI ಕಸ್ಟಡಿಯಲ್ಲಿರುವ ಕೇಜ್ರಿವಾಲ್ ಗೆ ಮನೆ ಅಡುಗೆ ಸೇರಿದಂತೆ ಹಲವು ವಿನಾಯಿತಿ ನೀಡಿದ ಕೋರ್ಟ್

12:43 PM Jun 27, 2024 | Team Udayavani |

ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ಮೂರೂ ದಿನಗಳ ಕಾಲ ಸಿಬಿಐ ಕಸ್ಟಡಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಕೆಲವೊಂದು ವಿನಾಯಿತಿಯನ್ನು ಕೋರ್ಟ್ ನೀಡಿದೆ.

Advertisement

ಮೂರೂ ದಿನಗಳ ಕಾಲ ಸಿಬಿಐ ಕಸ್ಟಡಿಯಲ್ಲಿರುವ ವೇಳೆ ಕೇಜ್ರಿವಾಲ್ ಅವರಿಗೆ ಮನೆಯಲ್ಲೇ ತಯಾರಿಸಿದ ಅಡುಗೆ, ಜೊತೆಗೆ ರಾತ್ರಿ ಹೊತ್ತು ಓದಲು ಭಗವದ್ಗೀತೆ ಪುಸ್ತಕ, ಜೊತೆಗೆ ಕುಟುಂಬದವರನ್ನು ಭೇಟಿಯಾಗಲು ಅವಕಾಶ ನೀಡಿದೆ.

ಅಬಕಾರಿ ನೀತಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಈಗಾಗಲೇ ತಿಹಾರ್ ಜೈಲಿನಲ್ಲಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಮೂರೂ ದಿನಗಳ ಕಾಲ ತನಿಖಾ ಸಂಸ್ಥೆಯ ವಶಕ್ಕೆ ರೌಸ್ ಅವೆನ್ಯೂ ನ್ಯಾಯಾಲಯ ಒಪ್ಪಿಸಿದೆ ಈ ವೇಳೆ ಕೇಜ್ರಿವಾಲ್ ಸಲ್ಲಿಸಿದ ಮನವಿಯಲ್ಲಿ ಕೆಲವೊಂದನ್ನು ಪುರಸ್ಕರಿಸಿದ ನ್ಯಾಯಾಲಯ ಸಿಬಿಐ ಕಸ್ಟಡಿಯಲ್ಲಿರುವ ಸಮಯದಲ್ಲಿ ಕೇಜ್ರಿವಾಲ್ ಮನೆಯ ಆಹಾರ ಸೇವಿಸಬಹುದು, ಜೊತೆಗೆ ಪ್ರತಿ ದಿನ ಒಂದು ಗಂಟೆ ಕುಟುಂಬದೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಿದೆ, ಜೊತೆಗೆ ಈ ಹಿಂದೆ ವೈದ್ಯರು ನೀಡಿರುವ ಔಷಧಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಿದ್ದು ಜೊತೆಗೆ ಕೇಜ್ರಿವಾಲ್ ಅವರು ಭಗವದ್ಗೀತೆ ಓದಲು ಅವಕಾಶ ಕಲ್ಪಿಸಲಾಗಿದೆ ಎನ್ನಲಾಗಿದೆ ಈ ಹಿಂದೆ ಕೇಜ್ರಿವಾಲ್ ಮಲಗುವ ಮುನ್ನ ಭಗವದ್ಗೀತೆ ಓದುವ ಹವ್ಯಾಸ ಹೊಂದಿದ್ದರು ಎನ್ನಲಾಗಿದೆ. ಈ ಕುರಿತು ಅನುಮತಿ ನೀಡಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಇದನ್ನೂ ಓದಿ: Stock Market: ಸಾರ್ವಕಾಲಿಕ ಹೊಸ ದಾಖಲೆ-79,000 ಅಂಕ ದಾಟಿದ ಸಂವೇದಿ ಸೂಚ್ಯಂಕ

Advertisement

Udayavani is now on Telegram. Click here to join our channel and stay updated with the latest news.

Next