Advertisement
ಡಿ. 1 ರಂದು ದಾದರ್ ಪಶ್ಚಿಮದ ವೀರ ಸಾವರ್ಕರ್ ಸ್ಮಾರಕ ಸಭಾಗೃಹದಲ್ಲಿ ಜರಗಿದ ಅರುಣೋದಯ ಕಲಾನಿಕೇತನ ಮುಂಬಯಿ ಇದರ 59 ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಇಲ್ಲಿ ಕಲಿತ ಮಕ್ಕಳು ಅಂತಾರಾಷ್ಟ್ರೀಯ ಮಟ್ಟನಲ್ಲಿ ಪ್ರದರ್ಶನವನ್ನು ನೀಡುತ್ತಿರುವುದು ಅಭಿನಂದನೀಯವಾಗಿದೆ. ಗುರು ಡಾ| ಮೀನಾಕ್ಷೀ ರಾಜು ಶ್ರೀಯಾನ್ ಅವರು ದೇಶ-ವಿದೇಶಗಳ ಪ್ರತಿಷ್ಠಿತ ವೇದಿಕೆಗಳನ್ನು ಒದಗಿಸಿಕೊಟ್ಟು ಪ್ರತಿಭಾನ್ವೇಷಣೆಗೆ ಸಹಕರಿಸುತ್ತಿದ್ದಾರೆ. ಇಂತಹ ಉಧಾತ್ತ ಭಾವನೆಯನ್ನು ಹೊಂದಿರುವ ಅರುಣೋದಯ ಕಲಾನಿಕೇತನ ಸಂಸ್ಥೆಯು ಭರತನಾಟ್ಯ ರಂಗದಲ್ಲಿ ಇನ್ನಷ್ಟು ಬೆಳೆದು ಸಾಧನೆಯನ್ನು ಮಾಡುವಂತಾಗಲಿ. ಸಂಸ್ಥೆಯ ಕಲಾಸೇವೆಗೆ ನಮ್ಮ ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದರು.
Related Articles
Advertisement
ಸಮಾರಂಭದಲ್ಲಿ ಅನಿವಾಸಿ ಭಾರತೀಯ, ಸಮಾಜ ಸೇವಕ ಬೆಹರೇನ್ ಸಾಧಕ ಲೀಲಾಧರ ಬೈಕಂಪಾಡಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯೊಂದಿಗೆ ಸಮ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಸಂಸ್ಥೆಯ ಬೆಸ್ಟ್ ಸ್ಟೂಡೆಂಟ್ ಅವಾರ್ಡ್‌ನ್ನು ಕು| ಚೈತ್ರಾ ಪಿ. ಶೆಟ್ಟಿ ಅವರಿಗೆ ಗಣ್ಯರು ಪ್ರದಾನಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಸಮಾಜ ಸೇವಕಿ ಯಶೋದಾ ಎನ್. ಪೂಜಾರಿ, ಅರುಣೋದಯ ಕಲಾನಿಕೇತನದ ಟ್ರಸ್ಟಿಗಳಾದ ಸುರೇಶ್ ಕಾಂಚನ್, ಸಂಜೀವ ಸಾಲ್ಯಾನ್, ಗುರು ಡಾ| ಮೀನಾಕ್ಷೀ ರಾಜು ಶ್ರೀಯಾನ್ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕಿ ಗುರು ಡಾ| ಮೀನಾಕ್ಷೀ ರಾಜು ಶ್ರೀಯಾನ್ ಅವರು ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ಸಂಯೋಜಕ ರಾಜು ಶ್ರೀಯಾನ್ ಅವರು ಸಹಕರಿಸಿದರು. ಅತಿಥಿ-ಗಣ್ಯರುಗಳನ್ನು ಶಾಲು ಹೊದೆಸಿ, ಪುಷ್ಪಗುಚ್ಚ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಅರುಣೋದಯ ಕಲಾನಿಕೇತನ ಸಂಸ್ಥೆಯ ವಿವಿಧ ಶಾಖೆಗಳ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯಗಳು ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ನಟುವಗಂನಲ್ಲಿ ಡಾ| ಗುರು ಮೀನಾಕ್ಷೀ ರಾಜು ಶ್ರೀಯಾನ್, ಹಾಡುಗಾರಿಕೆಯಲ್ಲಿ ಶಿವ ಪ್ರಸಾದ್, ಮೃದಂಗದಲ್ಲಿ ಕವಿರಾಜ ಸುವರ್ಣ, ವಾಯೊಲೀನ್‌ನಲ್ಲಿ ಸತೀಶ್ ಶೇಷಾದ್ರಿ ಅವರು ಸಹಕರಿಸಿದರು.
ಪ್ರತಿಷ್ಠಿತ ಅರುಣೋದಯ ಕಲಾನಿಕೇತನದ ಸಮ್ಮಾನವನ್ನು ಸ್ವೀಕರಿಸಲು ಹೆಮ್ಮೆಯಾಗುತ್ತಿದೆ. ಸಾವಿರಾರು ಮಕ್ಕಳಿಗೆ ಭರತನಾಟ್ಯ ಹಾಗೂ ಇನ್ನಿತರ ನೃತ್ಯಪ್ರಕಾರಗಳನ್ನು ಧಾರೆ ಎರೆದು ಕಲಾಸೇವೆಯಲ್ಲಿ ತೊಡಗಿರುವ ಅರುಣೋದಯ ಕಲಾನಿಕೇತನವು ವಿಶ್ವಕಲಾನಿಕೇತನವಾಗಿ ಬೆಳಗಲಿ. ಗುರು ಮೀನಾಕ್ಷೀ ರಾಜು ಶ್ರೀಯಾನ್ ಅವರೋರ್ವೆ ಅಪ್ರತಿಮ ಕಲಾವಿದೆಯಾಗಿದ್ದು, ಇಂದು ದೇಶ-ವಿದೇಶಗಳಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರ ಹಲವು ಮಂದಿ ಶಿಷ್ಯೆಯಂದಿರು ವಿದೇಶಗಳಲ್ಲಿ ಭರತನಾಟ್ಯವನ್ನು ಅಲ್ಲಿನ ಮಕ್ಕಳಿಗೆ ಧಾರೆ ಎರೆಯುವ ಮಹತ್ತರ ಕಾರ್ಯವನ್ನು ಮಾಡುತ್ತಿದ್ದಾರೆ. ಇದು ಅರುಣೋದಯ ಕಲಾನಿಕೇತನದ ಹೆಗ್ಗಳಿಕೆಯಾಗಿದೆ. ಗುರು ಎಂ. ಎನ್. ಸುವರ್ಣ ಅವರು ಬಿತ್ತಿದ ಬೀಜವಿಂದು ಬೃಹತ್ ಮರವಾಗಿ ಬೆಳೆದು ಸಾವಿರಾರು ಮಕ್ಕಳಿಗೆ ನೆರಳು ನೀಡುತ್ತಿರುವುದು ಅಭಿಮಾನ ಸಂಗತಿ. ನಿಮ್ಮ ಕಲಾಸೇವೆಗೆ ನನ್ನ ಸಂಪೂರ್ಣ ಸಹಕಾರವಿದೆ – ಲೀಲಾಧರ ಬೈಕಂಪಾಡಿ (ಸಮ್ಮಾನಿತರು). ಸಂಸ್ಥೆಯ ವಿವಿಧ ಶಾಖೆಗಳ ಮಕ್ಕಳಿಂದ ಪುಷ್ಪಾಂಜಲಿ, ಗಣೇಶ ಕೌತುಕಂ, ಸುಬ್ರಹ್ಮಣ್ಯ ಕೌತುಕಂ, ಅಲರಿಪು, ಜತಿಸ್ವರಂ, ಡಮರು, ದಶಾವತಾರ್, ಕೃತಿ, ನಟನಮದಿನಾರ್, ವರ್ಣ ಇನ್ನಿತರ ಭರತನಾಟ್ಯ ಪ್ರಕಾರಗಳ ನೃತ್ಯಗಳು, ವಿವಿಧ ರಾಜ್ಯಗಳ ಸಂಸ್ಕೃತಿ-ಸಂಸ್ಕಾರಗಳನ್ನು ಬಿಂಬಿಸುವ ನೃತ್ಯಗಳು ಪ್ರದರ್ಶನಗೊಂಡು, ಸಭಾಗೃಹದಲ್ಲಿ ತುಂಬಿದ್ದ ನೂರಾರು ಕಲಾಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಪ್ರತಿಭಾವಂತ ಮಕ್ಕಳನ್ನು ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.