ಮಂಡ್ಯ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಮಹಿಳೆಯರು ಮಹಿಳೆಯರ ಸಬಲೀ ಕರಣಕ್ಕಾಗಿ ದುಡಿಯುತ್ತಿದ್ದಾರೆ. ಇದ ರಲ್ಲಿ ಸಾಕ್ಷರತಾ ಆಂದೋಲನದ ಜಿಲ್ಲಾ ಸಂಯೋಜಕಿ ಯಾಗಿ ಸ್ವಯಂಸೇವಕರಾಗಿ ಮಹಿಳೆಯರ ಶಿಕ್ಷಣ, ಸಾಕ್ಷರತೆ ಹಾಗೂ ಸಬಲೀಕರಣಕ್ಕಾಗಿ ಕೆ.ಪಿ.ಅರುಣಾಕುಮಾರಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಯಾವುದೇ ಪ್ರಚಾರದ ಗೀಳಿಗೆ ಬೀಳದೆ ಮಹಿಳೆಯರ ಸಾಕ್ಷರತೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇವರ ಸೇವೆ, ಮಹಿಳೆಯರ ಮೇಲಿನ ಕಾಳಜಿಗೆ ರಾಜ್ಯ ಸರ್ಕಾರ ರಾಜ್ಯ ಸಂಪನ್ಮೂಲ ವ್ಯಕ್ತಿಯನ್ನಾಗಿ, ಜಿಲ್ಲಾ ಸಂಯೋಜಕಿಯಾಗಿ, ಜಿಲ್ಲಾ ಪ್ರೇರಕರನ್ನಾಗಿ ಮಾಡಿದೆ. ಇವರ ಸೇವೆಗೆ ರಾಜ್ಯ ಸರ್ಕಾರದಿಂದ 5 ಪ್ರಶಸ್ತಿಗಳೂ ಒಲಿದು ಬಂದಿವೆ.
ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಮಹಿಳಾ ಸಬಲೀಕರಣ ಪ್ರಶಸ್ತಿ, ಲೋಕ ಶಿಕ್ಷಣ ಪ್ರೇರಕ ಪ್ರಶಸ್ತಿ, ಮಹಿಳೆಯರ ಸಾಕ್ಷರತೆ ಆಂದೋಲನದ ಉತ್ತಮ ಜಿಲ್ಲಾ ಸಂಯೋಜಕಿ ಹಾಗೂ ಪ್ರೇರಕ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ, ಯುವ ಸಬಲೀಕರಣ ರಾಜ್ಯ ಮಟ್ಟದ ಪ್ರಶಸ್ತಿ ಜತೆಗೆವಿವಿಧ ಸಂಘ-ಸಂಸ್ಥೆಗಳು ಇವರಸೇವೆ ಗುರುತಿಸಿ ಗೌರವಿಸಿದೆ.
ನಿತ್ಯ ದಾಸೋಹ: ನಗರದ ಮಿಮ್ಸ್‌ನ ಹೆರಿಗೆ ವಾರ್ಡ್‌ನ ವಿಭಾಗದಲ್ಲಿ “ಮಮತೆಯ ಮಡಿಲು’ ಎಂಬ ಹೆಸರಿನಲ್ಲಿ ಆಸ್ಪತ್ರೆಯಲ್ಲಿ ದಾಖಲಾಗುವ ಬಾಣಂತಿ, ಗರ್ಭೀಣಿಯರಿಗೆ ಹಾಗೂಅವರ ಪೋಷಕರು, ನಿರ್ಗತಿಕ ಮಹಿಳೆಯರಿಗೆ ನೆರವಾಗಿದ್ದಾರೆ. ಪ್ರತಿನಿತ್ಯ ಬೆಳಗ್ಗೆ ಹಾಗೂ ಮಧ್ಯಾಹ್ನ ದಾಸೋಹ ನಡೆಸುತ್ತಿದ್ದಾರೆ. ಸುಮಾರು ಒಂದೂವರೆ ವರ್ಷದಿಂದ ಈ ಕಾಯಕದಲ್ಲಿ ತೊಡಗಿದ್ದಾರೆ. ಜತೆಗೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ ಮಹಿಳಾ ವಿಭಾಗದ ಸದಸ್ಯರಾಗಿದ್ದಾರೆ. ಇವರ ಸೇವೆಗೆ ಪತಿ ಯೋಗೀಶ್ ಕೂಡ ಬೆಂಬಲ ನೀಡಿದ್ದಾರೆ.
ಇವರ ನಿಸ್ವಾರ್ಥ ಸೇವೆ ಸದಾ ಮುಂದುವರೆಯಲಿ ಎಂದು ಹಾರೈಸುತ್ತಾ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಅವರಿಗೆ ಶುಭಾಶಯಗಳು.