Advertisement

ಅರುಣಾಚಲದಲ್ಲಿ ಹಿಮ ವರ್ಷ:650 ಪ್ರವಾಸಿಗರ ರಕ್ಷಿಸಿದ ಸೇನೆ

02:15 PM Mar 14, 2018 | Team Udayavani |

ಇಟಾನಗರ:  ಅರುಣಾಚಲದ ಇಂಡೋ- ಟಿಬೆಟಿಯನ್‌ ಗಡಿಯಲ್ಲಿನ ಸೇಲಾ ಪಾಸ್‌ನಲ್ಲಿ ಭಾರೀ ಹಿಮವರ್ಷಕ್ಕೆ ಸಿಲುಕಿ ಅತಂತ್ರರಾಗಿದ್ದ 650 ಮಂದಿ ಪ್ರವಾಸಿಗರನ್ನು ಭಾರತೀಯ ಸೇನೆ ಸೋಮವಾರ ರಾತ್ರಿ ರಕ್ಷಿಸಿದೆ. 

Advertisement

ಈ ಪೈಕಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 18 ತಿಂಗಳ ಶಿಶು ಹಾಗೂ ರಕ್ತದೊತ್ತಡ 250 ಮೀರಿದ್ದ 70ರ ವೃದ್ಧೆಯೂ ಸೇರಿದ್ದಾರೆ. ಸೋಮವಾರ ಮಧ್ಯಾಹ್ನದಿಂದ ಭಾರೀ ಹಾಗೂ ಅನಿರೀಕ್ಷಿತ ಹಿಮ ವರ್ಷ ಆರಂಭವಾಗಿತ್ತು. ವಿಚಾರ ತಿಳಿಯುತ್ತಿದ್ದಂತೆ ಬೈಸಾಕಿ ಸೇನಾನೆಲೆಯಿಂದ ಸೇನೆಯ 2 ತಂಡಗಳು ಸ್ಥಳಕ್ಕೆ ಧಾವಿಸಿದವು. ಶೂನ್ಯಕ್ಕಿಂತ ಕೆಳಮಟ್ಟದ ತಾಪಮಾನದಲ್ಲಿ ರಾತ್ರಿಯಿಡೀ 7 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ, 650 ಪ್ರವಾಸಿಗರನ್ನು ರಕ್ಷಿಸುವಲ್ಲಿ ಈ ತಂಡ ಯಶಸ್ವಿಯಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next