Advertisement

ಕೋವಿಡ್ ಲಾಕ್ ಡೌನ್: ಏ.30ರವರೆಗೆ ಮುಂದುವರಿಕೆ: ಈಗ ಅರುಣಾಚಲ, ಮಿಜೋರಾಂ ಸರದಿ

09:05 AM Apr 14, 2020 | Nagendra Trasi |

ನವದೆಹಲಿ:ಕೋವಿಡ್ 19 ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದೀಗ ಅರುಣಾಚಲ ಪ್ರದೇಶ ಲಾಕ್ ಡೌನ್ ಅನ್ನು ಏಪ್ರಿಲ್ 30ರವರೆಗೆ ಮುಂದುವರಿಸುವುದಾಗಿ ಸೋಮವಾರ ಘೋಷಿಸಿದೆ. ಇದರೊಂದಿಗೆ ದೇಶದಲ್ಲಿ ಲಾಕ್ ಡೌನ್ ಮುಂದುವರಿಸುವುದಾಗಿ ಘೋಷಿಸಿದ 8ನೇ ರಾಜ್ಯ ಇದಾಗಿದೆ.

Advertisement

ಕೋವಿಡ್ 19 ಸೋಂಕು ತಡೆಯುವ ನಿಟ್ಟಿನಲ್ಲಿ ಏಪ್ರಿಲ್ 24ರಂದು ದೇಶಾದ್ಯಂತ ಘೋಷಿಸಿದ್ದ ಲಾಕ್ ಡೌನ್ ಏ.14ರಂದು ಅಂತ್ಯಗೊಳ್ಳಲಿದ್ದು, ಇದಕ್ಕೂ ಮುನ್ನವೇ ಅರುಣಾಚಲಪ್ರದೇಶ ಮುಂದುವರಿಕೆ ಘೋಷಣೆ ಹೊರಡಿಸಿದೆ ಎಂದು ವರದಿ ತಿಳಿಸಿದೆ.

ಏ.30ರವರೆಗೆ ಲಾಕ್ ಡೌನ್ ಮುಂದುವರಿಯಲಿದೆ ಎಂದು ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ತಿಳಿಸಿದ್ದು, ಈಶಾನ್ಯ ರಾಜ್ಯಗಳಲ್ಲಿ ಈವರೆಗೆ ಒಂದು ಕೋವಿಡ್ 19 ಸೋಂಕು ಪ್ರಕರಣ ವರದಿಯಾಗಿದೆ. ಜತೆಗೆ ಮಿಜೋರಾಂ, ಪಾಂಡಿಚೇರಿ ಕೂಡಾ ಏ.30ರವರೆಗೆ ಲಾಕ್ ಡೌನ್ ಮುಂದುವರಿಸುವುದಾಗಿ ಘೋಷಿಸಿವೆ.

ಈಗಾಗಲೇ ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್, ಒಡಿಶಾ, ಪಶ್ಚಿಮಬಂಗಾಳ, ತೆಲಂಗಾಣ ಹಾಗೂ ಕರ್ನಾಟಕ ರಾಜ್ಯ ಲಾಕ್ ಡೌನ್ ಏ.30ರವರೆಗೆ ಮುಂದುವರಿಸುವುದಾಗಿ ಘೋಷಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next