Advertisement

ಭ್ರಷ್ಟಾಚಾರ, ಹಗರಣಗಳು ಅತೀ ಹೆಚ್ಚು ನಡೆದಿರುವುದೇ ಸಿದ್ದರಾಮಯ್ಯ ಸರಕಾರದಲ್ಲಿ : ಅರುಣ್ ಸಿಂಗ್

11:56 AM Sep 28, 2022 | Team Udayavani |

ಕಲಬುರಗಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಅವಧಿಯಲ್ಲೇ ಅತೀ ಹೆಚ್ಚಿನ ಹಗರಣ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆರೋಪಿಸಿದರು.

Advertisement

ಪಕ್ಷದ ಸಂಘಟನೆಗೆ ಆಗಮಿಸಿದ ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರು, ಸಿದ್ದರಾಮಯ್ಯ ಅವರ ಸಕಾ೯ರದಲ್ಲಿ ಬಡವರ ಆಹಾರ ಧಾನ್ಯ ಹಂಚಿಕೆ ಹಗರಣ,ಶಿಕ್ಷಕರ ನೇಮಕಾತಿ ಹಗರಣ ಸೇರಿದಂತೆ ಹಲವು ಹಗರಣಗಳ ಭ್ರಷ್ಟಾಚಾರ ನಡೆದುಹೋಗಿದೆ ಎಂದು ವಾಗ್ದಾಳಿ ನಡೆಸಿದರು.

ನೂರು ಇಲಿ ತಿಂದ ಬೆಕ್ಕು ಹಜ್,ಗೆ ಹೋದಂಗೆ ಎಂಬಂತಾಗಿದೆ ಸಿದ್ದರಾಮಯ್ಯ ಅವರ ಬಿಜೆಪಿ ಮೇಲಿನ ಆರೋಪ ಎಂದ ಅವರು, ಸಿದ್ದರಾಮಯ್ಯ ಅವರ ಕಾಲದ ಸಕಾ೯ರ ಸಾಕಷ್ಟು ಹಗರಣಗಳ ಸಕಾ೯ರವಾಗಿತ್ತು ಎಂದು ಟೀಕಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಒಬ್ಬ ಸಿಂಪಲ್ (ಕಾಮನ್ ಮ್ಯಾನ್) ಆಗಿದ್ದು,ಅವರು ಸಾಮಾನ್ಯ ವ್ಯಕ್ತಿಗಳನ್ನು ಪ್ರತಿನಿಧಿಸುತ್ತಿದ್ದಾರೆ.ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಮತ್ತು ರಾಜ್ಯದ ಗೌರವವನ್ನು ಹಾಳು ಮಾಡುವ ಕೆಲಸ ಮಾಡುತ್ತಿದೆ. ದೇಶದ ವಿವಿಧೆಡೆ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಜಗಳಗಳು ನಡೆಯುತ್ತಿವೆ . ಅದೇ ರೀತಿ ಕನಾ೯ಟಕದಲ್ಲೂ ಸಹ ಕಾಂಗ್ರೆಸ್ ನಾಯಕರ ನಡುವೆ ಒಳ ಗುದ್ದಾಟ ನಡೆದಿವೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಪಿ.ಎಫ್.ಐ.ನಿಷೇಧ ಸ್ವಾಗತಾರ್ಹ: ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ಮಾತನಾಡಿ, ದೇಶಾದ್ಯಂತ ದೇಶದ್ರೋಹಿ ಚಟುವಟಿಕೆಗಳು ನಡೆಸುವಂತಹ ಪಿ.ಎಫ್.ಐ.ಸಂಘಟನೆಯನ್ನು ಐದು ವರ್ಷಗಳ ಕಾಲ ನಿಷೇಧಿಸಿದ್ದು,ಕೇಂದ್ರ ಸರ್ಕಾರದ ತೀಮಾ೯ನ ಸ್ವಾಗತಾರ್ಹಕರ ಎಂದರು.
ಪಿಎಫಐ ಸಂಘಟನೆಯನ್ನು ನಿಷೇಧ ಮಾಡಲು ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಪಿಎಫ.ಐ ಒಂದು ಟೆರರಿಸ್ಟ್ ಸಂಘಟನೆ, ದೇಶದಲ್ಲಿ ವಿದ್ವಂಸಕ ಕೃತ್ಯಗಳನ್ನು ಎಸಗಲು ಮುಂದಾಗಿತ್ತು ಎಂದರು.

Advertisement

ಪಿ.ಎಫ್.ಐ.ನಿಷೇಧ ಮಾಡಲು ಸಕಾ೯ರಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿದ್ದು,ಸಮಾಜದಲ್ಲಿ ಈ ಸಂಘಟನೆಯಿಂದ ಶಾಂತಿ ಕದಡುವ ಕೆಲಸ,ದ್ವೇಷ ಹುಟ್ಟಿಸುವ ಕಾಯ೯ ನಡೆದಿತ್ತು.ಆದರೆ, ಎಸ್.ಡಿ.ಪಿ.ಐ ಒಂದು ರಾಜಕೀಯ ಪಕ್ಷ, ಅದು ರಾಜಕೀಯ ಕಾಯ೯ದಲ್ಲಿ ಮಗ್ನವಾಗಿದೆ. ಆದರೆ ಆರ್.ಎಸ್.ಎಸ್.ಬ್ಯಾನ್ ಮಾಡಬೇಕು ಎನ್ನುವ ವ್ಯಕ್ತಿಗಳು ಅಜ್ಞಾನದ ಅಂದಕಾರದಲ್ಲಿ ಇದ್ದಾರೆ. ಆರ್.ಎಸ್.ಎಸ್.ನಂತಹ ಸಂಘಟನೆ ಕಟ್ಟಬೇಕೆಂದು ಜಗತ್ತಿನ ಹಲವು ರಾಷ್ಟ್ರಗಳು ಮುಂದಾಗಿವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ : ವಿಶ್ವ ಕೆಡೆಟ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಸಾಧನೆ: ಚಾರ್ವಿಗೆ 5 ಲಕ್ಷ ನಗದು ಬಹುಮಾನ ಘೋಷಣೆ

Advertisement

Udayavani is now on Telegram. Click here to join our channel and stay updated with the latest news.

Next