Advertisement

ಗೊಂದಲ ದಿಲ್ಲಿಗೆ ವರ್ಗ : ವರಿಷ್ಠರಿಗೆ ವಾಸ್ತವ ವರದಿ ಸಲ್ಲಿಸಲಿರುವ ಅರುಣ್‌ ಸಿಂಗ್‌

04:17 AM Jun 19, 2021 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯ ನಾಯ ಕತ್ವ ಗೊಂದಲಗಳು ಮತ್ತೆ ದಿಲ್ಲಿಗೆ ವರ್ಗಾವಣೆಗೊಂಡಿವೆ. ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ತಮ್ಮ ಮೂರು ದಿನಗಳ ರಾಜ್ಯ ಪ್ರವಾಸ ಸಂದರ್ಭದಲ್ಲಿ ಸಚಿವ ರೊಂದಿಗಿನ ಸಂವಾದ, ಶಾಸಕರ ಅಭಿ ಪ್ರಾಯ, ಶಾಸಕರ ಭಿನ್ನಾಭಿ ಪ್ರಾಯದ ಹೇಳಿಕೆಗಳು, ನಾಯ ಕತ್ವದ ಬಗ್ಗೆ ಇರುವ ಆರೋಪ- ಪ್ರತ್ಯಾ ರೋಪಗಳ ಸಂಪೂರ್ಣ ವಿವರ ಸಂಗ್ರಹಿ ಸಿದ್ದು, ಪಕ್ಷದ ವರಿಷ್ಠರಿಗೆ ವಾಸ್ತವ ವರದಿ ನೀಡಲಿದ್ದಾರೆ.

Advertisement

ಅರುಣ್‌ ಸಿಂಗ್‌ ಭೇಟಿ ಸಂದರ್ಭ ದಲ್ಲಿ ಪ್ರಮುಖವಾಗಿ ನಾಯಕತ್ವದ ಬದಲಾವಣೆಯ ಕುರಿತು ಅಧಿಕೃತ ಚರ್ಚೆ ಆಗದಿದ್ದರೂ ಆ ಲೆಕ್ಕಾಚಾರ ದಲ್ಲಿಯೇ ಎಲ್ಲ ಬೆಳವಣಿಗೆಗಳು ನಡೆ ದಿವೆ. ಶಾಸಕರ ಅಭಿಪ್ರಾಯ ಸಂಗ್ರಹ ಸಂದರ್ಭದಲ್ಲಿ ಬಹುತೇಕರು ಸಿಎಂ ಯಡಿಯೂರಪ್ಪ ಅವರ ನಾಯಕತ್ವವೇ ಮುಂದುವರಿಯಲಿ ಎಂದಿದ್ದಾರೆ.

ಅಲ್ಲದೆ ನಾಯಕತ್ವದ ಬದಲಾವಣೆ ಕುರಿತು ಅನಗತ್ಯ ಹೇಳಿಕೆ ನೀಡುವ ಹಾಗೂ ಪಕ್ಷ ಮತ್ತು ಸರಕಾರದಲ್ಲಿ ಗೊಂದಲ ಸೃಷ್ಟಿಸುವವರ ವಿರುದ್ಧ ಪಕ್ಷದ ವರಿಷ್ಠರು ಕಠಿನ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಯಡಿಯೂರಪ್ಪ ಪರ ಶಾಸಕರು ಒಗ್ಗಟ್ಟಿನಿಂದ ಅರುಣ್‌ ಸಿಂಗ್‌ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.

ಈ ನಡುವೆ ಕೆಲವು ಶಾಸಕರು ವರಿ ಷ್ಠರು ನಾಯಕತ್ವದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ
ಬದ್ಧರಾಗಿರುವುದಾಗಿ ಹೇಳಿದ್ದಾರೆ.

ಜತೆಗೆ ಪಕ್ಷದಲ್ಲಿ ಅನಗತ್ಯ ಗೊಂದಲ ಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ವರಿಷ್ಠರು ಮಾಡಬೇಕೆಂಬ ಮನವಿ ಮಾಡಿದ್ದಾರೆ. ಇನ್ನು ಕೆಲವರು ಹೊಸ ನಾಯಕತ್ವಕ್ಕೆ ಅವಕಾಶ ನೀಡಬೇಕೆಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.

Advertisement

ಮೂರು ದಿನ ನಡೆದ ಎಲ್ಲ ಬೆಳವಣಿಗೆಗಳ ಕುರಿತು ಅರುಣ್‌ ಸಿಂಗ್‌ ಪಕ್ಷದ ಹಿರಿಯ ನಾಯಕರ ಜತೆ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿದ್ದಾರೆ. ಆದರೆ ಯಾವುದೇ ವಿಷಯದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳದೆ ಶುಕ್ರವಾರ ಸಂಜೆ ದಿಲ್ಲಿಗೆ ವಾಪಸಾಗಿದ್ದಾರೆ.

ಇಲಾಖೆ ಚುರುಕುಗೊಳಿಸಲು ಅರುಣ್‌ ಸಿಂಗ್‌ ಸೂಚನೆ
ಸಚಿವರು ತಮ್ಮ ಇಲಾಖೆಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸುವಂತೆ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಅರುಣ್‌ ಸಿಂಗ್‌ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ಇಲಾಖೆಗಳ ಚಟುವಟಿಕೆಗಳ ಕುರಿತು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದ್ದು, ಆಯಾ ಇಲಾಖೆಗಳಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನು ನೈಜ ಫ‌ಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಸರಕಾರ ಮತ್ತು ಪಕ್ಷದ ಕಾರ್ಯಕರ್ತರ ಮೂಲಕ ನಡೆಸುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಗೊಂದಲಕ್ಕೆ ಬ್ರೇಕ್‌?
ರಾಜ್ಯದಲ್ಲಿ ಉಂಟಾಗಿದ್ದ ನಾಯಕತ್ವ ಬದಲಾವಣೆಯ ಗೊಂದಲದ ಕುರಿತು ವರಿಷ್ಠರು ಸದ್ಯ ಚರ್ಚಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಪಕ್ಷ ಮತ್ತು ಸರಕಾರದ ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಜನಪ್ರಿಯ ಯೋಜನೆಗಳನ್ನು ಜನರಿಗೆ ತಲುಪಿಸಿ ಎರಡೂ ಸರಕಾರಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ಮಾಡಲು ಹೆಚ್ಚಿನ ಆದ್ಯತೆ ನೀಡಲು ಬಿಜೆಪಿ ರಾಷ್ಟ್ರೀಯ ನಾಯಕರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ವರಿಷ್ಠರು ನಾಯಕತ್ವ ಗೊಂದಲಕ್ಕೂ ಶೀಘ್ರ ದಿಲ್ಲಿಯಿಂದಲೇ ತೆರೆ ಎಳೆಯುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next