ಇದು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಭೆಯಲ್ಲಿ ನಿರ್ಧರಿತವಾದ ಪ್ರಮುಖಾಂಶಗಳು. “ದೇಶಕ್ಕೊಂದೇ ತೆರಿಗೆ’ ನೀತಿಯನ್ನು ಜುಲೈ 1ರಿಂದಲೇ ಜಾರಿಗೊಳಿಸಲು ತುದಿಗಾಲಲ್ಲಿ ನಿಂತಿರುವ ಕೇಂದ್ರ ಸರ್ಕಾರ ಗುರುವಾರ ಬಹುತೇಕ ಸರಕುಗಳ ತೆರಿಗೆ ದರವನ್ನು ನಿಗದಿಪಡಿಸಿದೆ.
Advertisement
ಶ್ರೀನಗರದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಎಲ್ಲ ರಾಜ್ಯಗಳ ಪ್ರತಿನಿಧಿಗಳ ಸಭೆಯಲ್ಲಿ 1,211 ವಸ್ತುಗಳ ಪೈಕಿ 1205ಕ್ಕೆ ತೆರಿಗೆ ದರವನ್ನು ನಿಗದಿಪಡಿಸಲಾಗಿದೆ. ನಿಗದಿಯಾದ ಸರಕುಗಳಲ್ಲಿ ಬಹುತೇಕವನ್ನು ಶೇ.18ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಚಿನ್ನ, ಬೀಡಿ ಸೇರಿದಂತೆ 6 ಸರಕುಗಳ ತೆರಿಗೆ ದರವನ್ನು ಇನ್ನೂ ನಿಗದಿಪಡಿಸಿಲ್ಲ.
Related Articles
ಶೇ.81ರಷ್ಟು ಉತ್ಪನ್ನಗಳು ಶೇ.18 ಅಥವಾ ಅದಕ್ಕಿಂತ ಕಡಿಮೆ ತೆರಿಗೆ ಸ್ಲಾéಬ್‌ಗ ಒಳಪಡಲಿದೆ. ಕೇವಲ ಶೇ.19ರಷ್ಟು ಸರಕುಗಳಿಗೆ ಮಾತ್ರವೇ ಶೇ.28 ತೆರಿಗೆ ವಿಧಿಸಲಾಗಿದೆ ಎಂದು ಕಂದಾಯ ಕಾರ್ಯದರ್ಶಿ ಹಸು¾ಖ್ ಅಧಿಯಾ ತಿಳಿಸಿದ್ದಾರೆ. ಒಟ್ಟಾರೆಯಾಗಿ ಶೇ.80-90ರಷ್ಟು ಸರಕುಗಳನ್ನು ಶೇ.5, ಶೇ.12, ಶೇ.18 ಅಥವಾ ಶೇ.28ರ ಸ್ಲಾಬ್‌ಗಳಲ್ಲಿ ನಿಗದಿಪಡಿಸಲಾಗಿದೆ. ಶುಕ್ರವಾರದ ಸಭೆಯ ಬಳಿಕ ಅಧಿಕೃತವಾಗಿ ತೆರಿಗೆ ದರದ ಮಾಹಿತಿ ಹೊರಬೀಳಲಿದೆ. ಹಲವು ರಾಜ್ಯಗಳು ರೇಷ್ಮೆ ನೂಲು, ಪೂಜಾ ಸಾಮಗ್ರಿಗಳು ಹಾಗೂ ಕರಕುಶಲ ವಸ್ತುಗಳಿಗೆ ತೆರಿಗೆಯಿಂದ ವಿನಾಯ್ತಿ ನೀಡುವಂತೆ ಕೋರಿಕೆ ಸಲ್ಲಿಸಿದ್ದವು.
Advertisement
ಯಾವುದಕ್ಕೆ ಎಷ್ಟು ತೆರಿಗೆ?– ಹಾಲಿಗೆ ಜಿಎಸ್‌ಟಿಯಿಂದ ವಿನಾಯ್ತಿ
– ಆಹಾರ ಧಾನ್ಯಗಳಿಗೆ ಈವರೆಗೆ ಶೇ.5 ತೆರಿಗೆಯಿತ್ತು. ಇನ್ನು ಇವುಗಳಿಗೂ ತೆರಿಗೆಯಿಲ್ಲ
– ಕೇಶ ತೈಲ, ಸೋಪು, ಟೂಥ್‌ಪೇಸ್ಟ್‌ಗೆ ಶೇ.18 ತೆರಿಗೆ
– ಕಲ್ಲಿದ್ದಲಿಗೆ ಶೇ.5 ತೆರಿಗೆ. ಈವರೆಗೆ ಇದು ಶೇ.11.69 ಇತ್ತು
– ಸಕ್ಕರೆ, ಟೀ, ಕಾಫಿ, ಖಾದ್ಯ ತೈಲಕ್ಕೆ ಶೇ.5 ತೆರಿಗೆ ಗುರುವಾರದ ಸಭೆಯಲ್ಲಿ ಯಾವುದೇ ಸರಕುಗಳ ತೆರಿಗೆಯಲ್ಲಿ ಹೆಚ್ಚಳ ಮಾಡಿಲ್ಲ. ನಿಜ ಹೇಳಬೇಕೆಂದರೆ, ಬಹುತೇಕ ವಸ್ತುಗಳ ತೆರಿಗೆಯನ್ನು ಇಳಿಸಲಾಗಿದೆ.
– ಅರುಣ್ ಜೇಟ್ಲಿ, ಕೇಂದ್ರ ವಿತ್ತ ಸಚಿವ