Advertisement
ನ. 25ರಂದು ಚೆಂಬೂರಿನ ಚೆಂಬೂರು ಫೈನ್ ಆರ್ಟ್ಸ್ ಸೊಸೈಟಿಯ ಶಿವಸ್ವಾಮಿ ಅಡಿಟೋರಿಯಂನಲ್ಲಿ ನಡೆದ ನಗರದ ಕಲಾ ಸಂಸ್ಥೆ ಅರುಣೋದಯ ಕಲಾನಿಕೇತನ ಮುಂಬಯಿ ಇದರ ವಜ್ರ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಅನೇಕ ಪ್ರತಿಭಾವಂತರನ್ನು ಸಮಾಜಕ್ಕೆ ನೀಡಿದ ಕೀರ್ತಿ ಅರುಣೋದಯ ಕಲಾನಿಕೇತನ ಸಂಸ್ಥೆಗೆ ಸಲ್ಲುತ್ತದೆ. ಮಾತ್ರವಲ್ಲ ಕಲಾಕ್ಷೇತ್ರದ ದಿಗ್ಗಜರನ್ನು ಕರೆಸಿ, ಅವರನ್ನು ಗೌರವಿಸುವಂತಹ ಮಹಾನ್ ಕಾರ್ಯ ಅಸಾಧಾರಣೀಯವಾಗಿದೆ. ಕಲೆಯನ್ನು ಕೇವಲ ಹೊಟ್ಟೆ ಪಾಡಿಗಾಗಿ ಬಳಸದೆ, ಅದನ್ನು ಶ್ರೀಮಂತಗೊಳಿಸಿದ ಶ್ರೇಯಸ್ಸು ಸಂಸ್ಥೆಯದ್ದಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಯನ್ ಇಂಟರ್‌ನ್ಯಾಷನಲ್ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಅವರು ಮಾತನಾಡಿ, ದೇವರು ಕೊಟ್ಟ ಕಲೆಯನ್ನು ಕಲಿತು ತಮ್ಮ ಪ್ರತಿಭೆಯನ್ನು ತೋರಿಸಲು ಮಕ್ಕಳಿಗೆ ಅವಕಾಶ ಮಾಡಿಕೊಟ್ಟ ಸಂಸ್ಥೆಯ ಕಾರ್ಯ ಅಭಿನಂದನೀಯ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನನಗೆ ಹೆಮ್ಮೆಯಾಗುತ್ತಿದೆ. ಸಂಗೀತ ಕಲಾಕ್ಷೇತ್ರದ ಗಣ್ಯರನ್ನು ಸಮ್ಮಾನಿಸಲು ಸಂತೋಷವಾಗುತ್ತಿದೆ. ಸಂಸ್ಥೆಯಿಂದ ಅರ್ಥಪೂರ್ಣ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ. ನಾಡಿನ ಸಂಸ್ಕೃತಿ, ಸಂಸ್ಕಾರಗಳು ಇಂತಹ ಕಲಾ ಸಂಸ್ಥೆಗಳಿಂದ ಮಾತ್ರ ಉಳಿಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಅರುಣೋದಯ ಕಲಾನಿಕೇತನ ಸಂಸ್ಥೆಯ ಕಾರ್ಯ ಅಭಿನಂದನೀಯವಾಗಿದೆ ಎಂದರು. ಭಂಡಾರಿ ಆ್ಯಂಡ್ ಭಂಡಾರಿ ಅಸೋಸಿಯೇಟ್ಸ್‌ನ ನ್ಯಾಯವಾದಿ ಸುಂದರ ಭಂಡಾರಿ ಅವರು ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸಂಸ್ಥೆಯ ವಜ್ರಮಹೋತ್ಸವಕ್ಕೆ ಶುಭಹಾರೈಸಿದರು.
Related Articles
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಸಮಾಜ ಸೇವಕ ರಾಮಚಂದ್ರ ಬೈಕಂಪಾಡಿ, ಕೈಗಾರಿಕೋದ್ಯಮಿ, ಕುಂಭಾಶಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಪ್ರಮುಖ ದೇವರಾಯ ಮಂಜುನಾಥ ಶೇರಿಗಾರ್, ಸಮಾಜ ಸೇವಕಿ ಶಶಿಕಲಾ ವಿ. ಕವಾಲಿ, ಸಿಎ ಕಮಲೇಶ್ ದಾವೆ, ಸಮಾಜ ಸೇವಕಿ ಎನ್. ಕೆ. ಪ್ರತಾಪನ್ ಅವರನ್ನು ವಿಶೇಷ ಸಮ್ಮಾವನ್ನಿತ್ತು ಗೌರವಿಸಲಾಯಿತು.
Advertisement
ಅರುಣೋದಯ ಕಲಾನಿಕೇತನದ ಸುಶೀಲಾ ಎಂ. ಸುವರ್ಣ, ನೃತ್ಯಗುರುಗಳಾದ ಆಶಾ ನಂಬಿಯಾರ್, ಗುರು ಟೀನಾ ತಾಂಬೆ, ರಮ್ಯಾ ವರ್ಮ ಜಗದೀಶ್, ರಮೇಶ್ ಲಕ್ಷ್ಮಣ್ ಕೊಹ್ಲಿ, ಲಸ್ತಾನಾ ದೇವಿ ಅವರನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟಿಗಳಾದ ಸಂಜೀವ ಕೆ. ಸಾಲ್ಯಾನ್, ಗೋಪಾಲ್ ಪುತ್ರನ್, ಸುರೇಶ್ ಕಾಂಚನ್ ಉಪಸ್ಥಿತರಿದ್ದರು.
ಡಾ| ಮೀನಾಕ್ಷೀ ರಾಜು ಶ್ರೀಯಾನ್ ಅವರು ಸಂಭ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಪತ್ರಕರ್ತ ದಯಾ ಸಾಗರ್ ಚೌಟ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ಗಣ್ಯರ ಸಮ್ಮುಖದಲ್ಲಿ ಸುವರ್ಣ ಭಾರತ ರತ್ನ ಪ್ರಶಸ್ತಿಯನ್ನಿತ್ತು ಅಭಿನಂದಿಸಲಾಯಿತು. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತೆ, ಪ್ರಸಿದ್ಧ ಕೂಚುಪುಡಿ ನೃತ್ಯ ಕಲಾವಿದೆ ಗುರು ವೈಜಯಂತಿ ಕಾಶಿ ಅವರಿಗೆ ‘ಸುವರ್ಣ ಭರತರತ್ನ -ಭಾವ’ ಪ್ರಶಸ್ತಿಯನ್ನು, ಪ್ರಸಿದ್ಧ ಸಂಗೀತ ಕಲಾವಿದ ಸುರೇಶ್ ವಾಡ್ಕರ್ ಅವರಿಗೆ ಸಂಸ್ಥೆಯ ‘ಸುವರ್ಣ ಭರತರತ್ನ-ರಾಗ’ ಪ್ರಶಸ್ತಿಯನ್ನು ಹಾಗೂ ಪ್ರಸಿದ್ಧ ಡ್ರಮ್ಮಿಸ್ಟ್ ಶಿವಮಣಿ ಅವರಿಗೆ “ಸುವರ್ಣ ಭರತರತ್ನ-ತಾಳ’ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು. ಈ ಮೂರು ಪ್ರಶಸ್ತಿಗಳು ತಲಾ ಒಂದು ಲಕ್ಷ ರೂ. ನಗದು, ಶಾಲು, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರಗಳನ್ನು ಒಳಗೊಂಡಿತ್ತು.
ಸಂಸ್ಥೆಯು ತುಳು-ಕನ್ನಡಿಗರ, ಕಲಾಭಿಮಾನಿಗಳ ಸಹಕಾರದಿಂದ ವಜ್ರಮಹೋತ್ಸವವನ್ನು ಇಷ್ಟೊಂದು ಸಂಭ್ರಮದಿಂದ ಆಚರಿಸಲು ಸಾಧ್ಯವಾಗುತ್ತಿದೆ. ಸಂಸ್ಥೆಯ ಎಲ್ಲ ಶಾಖೆಗಳ ವಿದ್ಯಾರ್ಥಿಗಳು, ಪಾಲಕ-ಪೋಷಕರು ಇಂದಿನ ಸಮಾರಂಭದ ಯಶಸ್ಸಿನ ರೂವಾರಿಗಳು ಎಂದರೆ ತಪ್ಪಾಗಲಾರದು. ನನ್ನ ಎಲ್ಲ ಸಾಧನೆಗಳ ಹಿಂದೆ ಬೆನ್ನೆಲುಬಾಗಿ ನಿಂತಿರುವ ಪತಿ ರಾಜು ಶ್ರೀಯಾನ್ ಅವರು ಕಳೆದೆರಡು ತಿಂಗಳಿನಿಂದ ಸಂಭ್ರಮದ ಯಶಸ್ಸಿಗೆ ಹಗಲಿರುಳು ಶ್ರಮಿಸಿದ್ದರು. ಸಹಕರಿಸಿದ ದಾನಿಗಳಿಗೆ, ಕಲಾಭಿಮಾನಿಗಳೆಲ್ಲರಿಗೂ ಹೃದಯ ತುಂಬಿದ ನಮನಗಳನ್ನು ಸಲ್ಲಿಸುತ್ತಿದ್ದೇನೆ. ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ನೃತ್ಯಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನನಗೆ ಈ ಸೇವೆಯಲ್ಲಿ ಆತ್ಮತೃಪ್ತಿಯಿದೆ. ಹಲವಾರು ಪ್ರತಿಭಾವಂತ ಕಲಾವಿದರನ್ನು ಸೃಷ್ಟಿಸಿದ ಹೆಗ್ಗಳಿಕೆ ಸಂಸ್ಥೆಗಿದೆ. ತಂದೆಯವರು ಸ್ಥಾಪಿಸಿದ ಈ ಸಂಸ್ಥೆಯನ್ನು ಅವರು ಹಾಕಿಕೊಟ್ಟ ಮಾರ್ಗದರ್ಶನದ ಮುಖಾಂತರ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಭವಿಷ್ಯದಲ್ಲೂ ಸಂಸ್ಥೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಸದಾಯಿರಲಿ.ಡಾ| ಮೀನಾಕ್ಷೀ ರಾಜು ಶ್ರೀಯಾನ್ , ನಿರ್ದೇಶಕಿ, ಅರುಣೋದಯ ಕಲಾನಿಕೇತನ ಸಂಸ್ಥೆ ಚಿತ್ರ-ವರದಿ : ಸುಭಾಷ್ ಶಿರಿಯಾ