Advertisement

ಕಲಾವಿದರು ಸಮಾಜದ ಜವಾಬ್ದಾರಿ ಅರಿಯಬೇಕು: ಡಾ|ಭವಾನಿ

05:39 PM Dec 02, 2019 | Suhan S |

ಮುಂಬಯಿ, ಡಿ. 1: ಒಬ್ಬ ಮೇರುನಟನಾದ ಮೋಹನ್‌ ಅವರಿಗೆಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಲಭಿಸಿದ್ದು, ಮುಂಬಯಿ ಕರ್ನಾಟಕ ಸಂಘಕ್ಕೆ ಅಪಾರ ಅಭಿಮಾನ ಎನಿಸುತ್ತಿದೆ. ಇದು ಅರ್ಹಕಲಾವಿದನಿಗೆ ಸಂದ ಗೌರವವಾಗಿದೆ.

Advertisement

ಕಲಾವಿದರು ಸಮಾಜದ ಜವಾಬ್ದಾರಿ ಅರಿತು ಬೆಳೆಯಬೇಕು. ಮೋಹನ್‌ ಮಾರ್ನಾಡ್‌ ಅವರೋರ್ವ ಮುಂಬಯಿಯ ಅಪರೂಪದಲ್ಲಿ ಅಪರೂಪದ ಕಲಾವಿದ. ಅವರ ಪ್ರತಿಭೆ ಎಲ್ಲರಿಗೂ ಬರುವಂಥದ್ದಲ್ಲ. ಇದು ಪ್ರದರ್ಶನಗೊಂಡ ಸಾಕ್ಷ್ಯಚಿತ್ರಕರ್ನಾಟಕ ಸಂಘದ ಕಲಾಭಾರತಿ ಸಮಗ್ರ ಸಾಕ್ಷ್ಯಚಿತ್ರವಾಗಿದೆ ಎಂದು ಕರ್ನಾಟಕ ಸಂಘ ಮುಂಬಯಿಉಪಾಧ್ಯಕ್ಷ ಡಾ| ಎಸ್‌. ಕೆ. ಭವಾನಿ ಅಭಿಪ್ರಾಯಿಸಿದರು.

. 30 ರಂದು ಸಂಜೆ ಸಾಂತಾಕ್ರೂಜ್‌ ಪೂರ್ವದ ಕಲೀನಾ ಕ್ಯಾಂಪಸ್‌ನ ವಿದ್ಯಾನಗರಿಯ ಕವಿವರ್ಯ ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಕರ್ನಾಟಕ ನಾಟಕ ಅಕಾಡಮಿ ಬೆಂಗಳೂರು, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊರನಾಡ ಸಂಸ್ಥೆ ಕರ್ನಾಟಕಸಂಘ ಮುಂಬಯಿ ಜೊತೆಗೂಡಿ ಆಯೋಜಿಸಿದ್ದ ಮೋಹನ್‌ ಮಾರ್ನಾಡ್‌  ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಮತ್ತು ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೊಂದು ಅಪೂರ್ವ ಸಮಾರಂಭ. ಮೋಹನ್‌ ಮಾರ್ನಾಡ್‌ಅವರು ಮುಂಬಯಿ ತುಳುಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಅವರಿಗೆ ಇನ್ನಷ್ಟು ಪ್ರಶಸ್ತಿಪುರಸ್ಕಾರಗಳು ಒಲಿದು ಬರಲಿಎಂದು ನುಡಿದು ಶುಭ ಹಾರೈಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ನಾಟಕ ಅಕಾಡೆಮಿಯ ಪೂರ್ವಾಧ್ಯಕ್ಷ, ಹಿರಿಯ ರಂಗತಜ್ಞ ಜೆ. ಲೋಕೇಶ್‌ ಅವರುಉಪಸ್ಥಿತರಿದ್ದು ಮಾತನಾಡಿ, ಮೋಹನ್‌ ರಂಗಭೂಮಿಯ ಯಶಸ್ಸಿನ ಕನಸ್ಸನ್ನು ಕಂಡಿದ್ದಾರೆ ಮತ್ತು ನಿಷ್ಠೆಯೊಂದಿಗೆ ಅದನ್ನು ನನಸಾಗಿಸಿದ್ದಾರೆ. ಕರ್ನಾಟಕದ ಕಲಾವಿದರ ಪರವಾಗಿ ಅವರನ್ನು ಅಭಿನಂದಿಸುವೆ ಎಂದು ನುಡಿದು ಶುಭ ಹಾರೈಸಿದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಹಾಗೂ ಜವಾಬ್‌ ಸಂಸ್ಥೆಗಳ ಮಾಜಿ ಅಧ್ಯಕ್ಷ ಎನ್‌.ಸಿ ಶೆಟ್ಟಿ ಅವರು ಮಾತನಾಡಿ, ಮುಂಬಯಿ ಕನ್ನಡತುಳು ರಂಗಭೂಮಿಯ ಕಂಡ ಮಹಾನ್‌ ಕಲಾವಿದ ಮೋಹನ್‌ ಮಾರ್ನಾಡ್‌. ಇಂತಹ ಸಿದ್ಧಿ ಸಾಧನೆಗಳನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೊಂದಿಗೆ ಅಭಿನಂದಿಸಿದ್ದು ನಮ್ಮೆಲ್ಲರಿಗೂ ಅಭಿಮಾನದ ಸಂಗತಿಯಾಗಿದೆ ಎಂದರು.

Advertisement

ಚಲನಚಿತ್ರ ನಿರ್ಮಾಪಕ ಮಹೇಶ್‌ ತಲಕಾಡ್‌ ಅವರು ಮಾತನಾಡಿ, ಟೆಲಿ ವಿಷನ್‌ ಪ್ರಾರಂಭದ ಬಳಿಕ ನಾವುದೂರವಾದೆವು. ಆದರೆ ಇನ್ನು ಮುಂದಾದರೂ ದೊಡ್ಡ ಚಿತ್ರದಲ್ಲಿ ನಾವು ಜೊತೆಯಾಗಿ ಅಭಿನಯಿಸುವ ಎಂದು ಆಶಯ ವ್ಯಕ್ತಪಡಿಸಿದರು. ನೀನಾಸಂ ಸಂಸ್ಥೆಯ ರಂಗ ನಿರ್ದೇ ಶಕ ಎಂ. ಗಣೇಶ್‌, ಮುಂಬಯಿ ವಿವಿಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್‌. ಉಪಾಧ್ಯ ಉಪಸ್ಥಿತರಿದ್ದರು.

ರಂಗನಟ ಮೋಹನ್‌ ಮಾರ್ನಾಡ್‌ ಅವರಿಗೆ ಪತ್ನಿ ಸೀಮಾ ಮೋಹನ್‌,ಪುತ್ರಿ ಕು| ಮಾನವಿ ಮೋಹನ್‌ ಅವರನ್ನೊಳಗೊಂಡು 25,000ರೂ. ನಗದು, ಪ್ರಶಸ್ತಿಪತ್ರ, ಪದಕ, ಸ್ಮರಣಿಕೆಯೊಂದಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ-2018′ ಪ್ರದಾನಿಸಿಗಣ್ಯರ ಸಮ್ಮುಖದಲ್ಲಿ ಅಭಿನಂದಿಸಿ ಗೌರವಿಸಲಾಯಿತು.

ರ್ನಾಟಕ ಸಂಘ ಕಲಾ ಭಾರತಿಕಲಾವಿದರು, ಬಾಲಿವುಡ್‌ನ‌ ಹೆಸರಾಂತ ಗಾಯಕ ವಿಜಯ ಪ್ರಕಾಶ್‌ ಮತ್ತು ಮಹತಿ ವಿಜಯ್‌ ಹಾಗೂ ಮಾರ್ನಾಡ್‌ ಯುವಕ ಮಂಡಲದಅಡ್ಕರೆ ಸುರೇಶ್‌ ಪೂಜಾರಿ ಮತ್ತು ರಮೇಶ್‌ ಶೆಟ್ಟಿ, ಶಾಲಾ ಕಾಲೇಜುಗೆಳೆಯರು, ಕಲಾ ಮೋಹನ್‌ ಮಾರ್ನಾಡ್‌ ಅವರನ್ನು ಗೌರವಿಸಿದರು. ಸಮಾರಂಭದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಕಾರ್ಯಕಾರಿ ಸಮಿತಿ ಸದಸ್ಯೆ,ಲೇಖಕಿ, ಕವಯತ್ರಿ ಅನಿತಾ ಪಿ.ಪೂಜಾರಿ ತಾಕೋಡೆ ರಚಿತ 5ನೇ ಕೃತಿ ಮೋಹನ್‌ ಮಾರ್ನಾಡ್‌ ಅವರ ಜೀವನ ಕಥನ ಮೋಹನ ತರಂಗಕೃತಿಯನ್ನು ರಂಗತಜ್ಞ ಡಾ| ಬಿ. ಆರ್‌. ಮಂಜುನಾಥ್‌ಬಿಡುಗಡೆಗೊಳಿಸಿದರು. ರಂಗ ಕಲಾವಿದ ಅವಿನಾಶ್‌ ಕಾಮತ್‌ ಕೃತಿ ಪರಿಚಯಿಸಿ ಈ ಕೃತಿಯು ಮೋಹನ್‌ ಅವರ ಅಂತರಂಗದ ಪರಿಚಯ ಅನಾವರಣ ಮಾಡಿದೆ ಎಂದರುಡಾ| ಮಂಜುನಾಥ ಮಾತನಾಡಿ, ಕರ್ನಾಟಕ ಮತ್ತು ಮಹಾರಾಷ್ಟ್ರದ ಅನ್ಯೋನತೆಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.

ಡಾ| ಜಿ. ಎನ್‌. ಉಪಾಧ್ಯ ಅವರು ಮಾತನಾಡಿ, ನಟನೆ ಮತ್ತು ತಮ್ಮ ಮಾನವೀಯ ಸೇವೆಗಳ ಮೂಲಕನಮ್ಮನ್ನು ಮೋಡಿ ಮಾಡಿದ ಮೋಹನ್‌ ಓರ್ವ ಅತ್ಯದ್ಭುತ ಕಲಾವಿದ. ಸೊಗಸಾದ ಮೋಹನ ತರಂಗಕೃತಿಯೂ ಅಭಿಮಾನದ ರಚನೆಯಾಗಿದೆ. ಮೋಹನ್‌ ಅವರಿಗೆ ಎಲ್ಲ ಬಗೆಯಯಶಸ್ಸು ದೊರೆಯಲಿ ಎಂದರು. ಕೃತಿಕರ್ತೆ ಅನಿತಾ ಪೂಜಾರಿ ಮಾತನಾಡಿ, ಈ ವರೆಗಿನ ಎಲ್ಲ ಕೃತಿಗಳ ಪೈಕಿಇದು ನನಗೆ ಅತ್ಯಂತ ಖುಷಿ ಕೊಟ್ಟ ಕೃತಿಯಾಗಿದೆ. ಈ ಕೃತಿಗೆ ಸಹಕರಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ನುಡಿದರು.

ಕಾರ್ಯಕ್ರಮದಲ್ಲಿಡಾ| ಭರತ್‌ಕುಮಾರ್‌ ಪೊಲಿಪು ನಿರ್ದೇಶನದಲ್ಲಿ ನಿರ್ಮಿತ ಮೋಹನ್‌ ಮಾರ್ನಾಡ್‌ ಜೀವನ ನಡೆಯ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೋಹನ ಸಹೋದರ ಮತ್ತು ಬಳಗದವರಿಂದ ತಾಳಮದ್ದಳೆ ನಡೆಯಿತು. ಕಾರ್ಯಕ್ರಮದಲ್ಲಿ ವೈ. ಎಲ್‌. ಶೆಟ್ಟಿ, ಭವಾನಿ ವೈ. ಶೆಟ್ಟಿ, ಸುರೇಂದ್ರ ಮಾರ್ನಾಡ್‌, ಮಾರ್ನಾಡ್‌ ಪರಿವಾರ ಉಪಸ್ಥಿತರಿದ್ದರು. ಮಾ| ಸುವಿಧ್‌ಸೂರಿ ಮಾರ್ನಾಡ್‌ ಪ್ರಾರ್ಥನೆಗೈದರು. ಕರ್ನಾಟಕ ಸಂಘದ ಮಾಜಿ ಉಪಾಧ್ಯಕ್ಷ ಡಾ| ಭರತ್‌ಕುಮಾರ್‌ ಪೊಲಿಪು ಅತಿಥಿಗಳನ್ನು ಪರಿಚಯಿಸಿದರು.

ರಾಜೀವ ನಾಯ್ಕ ಅಭಿನಂದನಾ ಭಾಷಣಗೈದರು. ಶ್ಯಾಮಲಾ ಪ್ರಕಾಶ್‌ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಓಂದಾಸ್‌ ಕಣ್ಣಂಗಾರ್‌ ಸ್ವಾಗತಿಸಿ, ಪ್ರಸ್ತಾವನೆಗೈದರು. ನಳಿನಿ ಪ್ರಸಾದ್‌ ವಂದಿಸಿದರುಸಾಹಿತ್ಯಾಭಿಮಾನಿಗಳು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

 

ಚಿತ್ರವರದಿ:ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next