Advertisement
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಕರ್ನಾಟಕ ಲಲಿತಕಲಾ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರು ಪ್ರಶಸ್ತಿ ನೀಡಿ ಗೌರವಿಸಿದರು.
ಚಂದ್ರಶೇಖರ ಕಂಬಾರ, ಚಿತ್ರಗಳು ಅಂತರಂಗವನ್ನು ಪ್ರವೇಶಿಸಿ ನಮಗೆ ಗೊತ್ತಿಲ್ಲದೆ ಸಂಭಾಷಣೆ ಮಾಡುತ್ತವೆ. ಏನನ್ನೋ
ಹೇಳಹೋಗುತ್ತವೆ. ಇಂತಹ ಶಬ್ದರಹಿತವಾದ ಬಾಂಧವ್ಯವನ್ನು ಕಲಾಕಾರರು ಕೃತಿಗಳಲ್ಲಿ ಅಭಿವ್ಯಕ್ತಿಸುವುದು ಜಾಣ್ಮೆಯೇ ಸರಿ ಎಂದು ಬಣ್ಣಿಸಿದರು. ಪ್ರಶಸ್ತಿ ವಿಜೇತರ ಕಲಾ ಪ್ರೌಢಿಮೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕಲಾವಿದರ ಚಿತ್ರಗಳನ್ನು ನೋಡಿದಾಗ ಹೊಸದೊಂದು ಭಾವ ಲೋಕ ಕಣ್ಮುಂದೆ ಬರುತ್ತದೆ. ಚಿತ್ರದ ಮೂಲಕವೇ ಪ್ರಕೃತಿ ಸೇರಿದಂತೆ ಇನ್ನಿತರ ಅನುಪಮ ಅಂಶಗಳನ್ನು ಪೊಣಿಸಿಟ್ಟಿದ್ದಾರೆ. ಎಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿವೆ. ವಿದೇಶದಲ್ಲಿ ನಡೆಯುವ ಕಲಾಕೃತಿ ಪ್ರದರ್ಶನದಲ್ಲಿ ಚಿತ್ರ ವಿವರಣೆಕಾರರನ್ನು ನೇಮಿಸುತ್ತಾರೆ. ಅದೇ ರೀತಿ ನಮ್ಮಲ್ಲಿಯೂ ಕಲಾವಿದರ ಒಳ ಮನಸ್ಸಿನಿಂದ ಕಲೆಯಲ್ಲಿ ಅಭಿವ್ಯಕ್ತಿಗೊಂಡ ಸಂದೇಶಗಳನ್ನು ಬಿಡಿಸಿ ಹೇಳುವವರ ನೇಮಕ ಮಾಡುವ ಅಗತ್ಯವಿದೆ ಎಂದರು.
Related Articles
Advertisement
ಇದೇ ವೇಳೆ, 47ನೇ ವಾರ್ಷಿಕ ಕಲಾಪ್ರದರ್ಶನ ಬಹುಮಾನವನ್ನು ಬಾಗಲಕೋಟೆಯ ಇಂದ್ರಕುಮಾರ.ಬಿ.ದಸ್ತೇನವರ, ಹಾವೇರಿಯ ಕರಿಯಪ್ಪ ಹಂಚಿನಮನಿ, ಬೆಳಗಾವಿಯ ಶಂಕರ ಬಿ.ಲೋಹಾರ, ಬೆಂಗಳೂರಿನ ಆರ್.ವೆಂಕಟ ರಾಮನ್, ಬಾಗೂರು ಮಾರ್ಕಾಂಡೇಯ,ಶಿವಮೊಗ್ಗದ ಕೋಟೆಗದ್ದೆ ಎಸ್.ರವಿ, ಕಲಬುರಗಿಯ ಡಾ.ಸುಬ್ಬಯ್ಯ ಎಂ.ನೀಲಾ,ಶ್ರೀಶೈಲ ಗುಡೇದ, ಮಂಡ್ಯದ ವಿ.ಇ.ಅಕ್ಷಯ್ ಕುಮಾರ್, ಹುಬ್ಬಳ್ಳಿಯ ಗಣೇಶ ಎಸ್.ಸಾಬೋಜಿ ಅವರಿಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿ 25 ಸಾವಿರ ರೂ.ನಗದು ಮತ್ತು ನೆನಪಿನ ಕಾಣಿಕೆ ಒಳಗೊಂಡಿದೆ.