Advertisement

ಕಲಾವಿದರು ಸಂಘಟಿತರಾದರೆ ಕಲೆಗೆ ಪ್ರೇರಣೆ: ಆಲಗೂಡಕರ್‌

11:46 AM Dec 30, 2017 | |

ಕಲಬುರಗಿ: ಜಾನಪದ ಗೀತೆ, ಶರಣರ ವಚನಗಳು, ದಾಸವಾಣಿ, ಭಾವಗೀತೆಗಳು ಉಳಿದು ಬೆಳೆದು ಬರುವಲ್ಲಿ
ಕಲಾವಿದರ ಆಸಕ್ತಿ ಹಾಗೂ ಸತತ ಪ್ರಯತ್ನವೇ ಕಾರಣವಾಗಿದೆ. ಅಲ್ಲದೇ ಕಲಾವಿದರು ಸಂಘಟಿತರಾಗಿ ಸವಲತ್ತು ಪಡೆದಲ್ಲಿ ಕಲೆಗೂ ಪ್ರೇರಣೆ ದೊರಕಿದಂತಾಗುತ್ತದೆ ಎಂದು ಪಂಚಪೀಠದ ವಾರ್ತಾ ಪ್ರತಿನಿಧಿ ಸಿದ್ರಾಮಪ್ಪ ಆಲಗೂಡಕರ್‌ ಹೇಳಿದರು.

Advertisement

ನಗರದ ಮೌನೇಶ್ವರ ದೇವಸ್ಥಾನ ಸರಸ್ವತಿಪುರದಲ್ಲಿ ಕರ್ನಾಟಕ ಕಲಾ ಸಾಹಿತ್ಯ ಸಂಸ್ಕೃತಿ ಸೇವಾ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ ಸಂಗೀತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಲಾವಿದರ ಪ್ರತಿಭೆ ಗುರುತಿಸಿ ಸಮಾಜ ಸರಕಾರ ಗೌರವಿಸಬೇಕು. ಕಲೆಯಿಂದ ಸಾಕ್ಷಾತ್ಕಾರ ಪಡೆಯುವಂತೆ ಆಗಬೇಕು. ಕಲಾಸಕ್ತರು ಕಲೆಯಲ್ಲಿ ಇನ್ನು ಹೆಚ್ಚಿನ ಸಂಶೋಧನೆ ಮಾಡಬೇಕು. ಅದನ್ನು ಸಮಾಜಕ್ಕೆ ಪರಿಚಯಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ರಾಜೆ ಶಿವಶರಣಪ್ಪ ವಕೀಲರು ಮಾತನಾಡಿ, ಅನೇಕ ಸಂಗೀತ ಉಪಾಸಕರು ಸಾಧನೆ ಮಾಡಿ, ಗಾನಗಂಧರ್ವರಾಗಿ ಗಾನ ಪಂಡೀತರಾಗಿ, ಸಂಗೀತ ದಿಗ್ಗಜರೆನಿಸಿಕೊಂಡು ಹೋಗಿದ್ದಾರೆ ಎಂದರು. ಸಂಸ್ಥೆಯ ಅಧ್ಯಕ್ಷ ಬಾಬುರಾವ ಕೋಬಾಳ, ಕಲಾವಿದರ ಬದುಕು ಅನುಕರಣೀಯ ಆಗಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಗುರುನಾಥ ಶಾಸ್ತ್ರೀ ನೆಲೋಗಿ, ಪಶುಪಕ್ಷಿಗಳು ತಮ್ಮ ಭಾಷೆಯಲ್ಲಿ ಸುಂದರವಾಗಿ ಹಾಡಿ ಆನಂದಿಸುತ್ತಿವೆ. ಸಂಗೀತದಲ್ಲಿ ಅಪಾರವಾದ ಶಕ್ತಿ ಅಡಗಿದೆ. ಸಂಗೀತ ಕಲಿಯುವುದರಿಂದ, ಹಾಡುವುದರಿಂದ, ಕೇಳುವುದರಿಂದ ಮನುಷ್ಯರಿಗೆ ಆಯುಷ್ಯ, ಆನಂದ, ಆರೋಗ್ಯ ತಂದುಕೊಡುತ್ತದೆ ಎಂದು ಹೇಳಿದರು.

ಹಿರಿಯ ಶಿಲ್ಪಿ ಕಲಾವಿದರಾದ ಈರಣ್ಣಾ ಕಂಬಾರ, ಇಸ್ಮಾಯಿಲ್‌ಸಾಬ್‌ ಲದಾಫ್‌, ಕೃಷ್ಣಯ್ಯ, ಮಡಿಕಟ್ಟು, ಚಂದ್ರಕಲಾ ಟೆಂಗಳಿ ಮುಂತಾದವರಿದ್ದರು. ನಂತರ ನಡೆದ ಸಂಗೀತ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದರಾದ ಗುರುಶಾಂತಯ್ಯ ಸ್ಥಾವರಮಠ, ಕಾಳಪ್ಪ ಭಂಟನಳ್ಳಿ ವಾಣಿಶ್ರೀ ವಾಲಿಕಾರ, ದತ್ತರಾಜ ಕಲಶೆಟ್ಟಿ, ಕಸ್ತೂರಿ ಡಿ, ಘಟ್ಟಿಕಾರ್‌, ರಾಚಯ್ಯಸ್ವಾಮಿ ಮಠಪತಿ, ಗಂಗಾಧರ ಎಚ್‌. ಪಾಟೀಲ, ರೇವಣಯ್ಯ ಸ್ವಾಮಿ ಸುಂಟನೂರ, ಸೋಮಯ್ಯ ಸಿಧನೂರ, ಸುಮಂಗಲಾ ಕೋರಿ, ಚೇತನ ಬಿ.ಕೆ., ಗುರುಲಿಂಗಯ್ನಾ ಬಸವಂತವಾಡಿ, ಪ್ರಶಾಂತ ಗೋಲ್ಡಸ್ಮಿತ್‌ ವೀರಭದ್ರಯ್ಯ ಸ್ಥಾವರಮಠ, ಶ್ರೀಮಂತ ಚಿಂಚನಸೂರ, ಪ್ರಶಾಂತ ಕಲಬುರಗಿ ಸುಗಮ ಸಂಗೀತ, ತತ್ವಪದ ಜಾನಪದ ಗೀತೆ ದಾಸವಾಣಿ, ವಚನ ಗಾಯನ ಹಾಡಿ, ಜನಮನ ಸೆಳೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next