ಜೀಯು
ಹೊನ್ನಾವರ: ವಿದ್ಯಾರ್ಥಿಗಳನ್ನು ಶಾಲೆಗೆ ಕರೆತಂದು ಮರಳಿ ಮನೆಗೆ ಮುಟ್ಟಿಸುತ್ತಿದ್ದ ಕರ್ಕಿಯ ವಿವೇಕ ಕೇಶವ ದಿಂಡೆ ಕೆಲಸವನ್ನು ಕೋವಿಡ್ ಕಸಿದುಕೊಂಡಿತು. ಬಿಡುವಿನ ಸಮಯವಾದ್ದರಿಂದ ತಲೆಬಿಸಿ ಮಾಡಿಕೊಳ್ಳದೇ ಯು-ಟ್ಯೂಬ್‌ನಲ್ಲಿ ಕರಟದ ಕಲಾಕೃತಿಯನ್ನು ಮಾಡುವುದನ್ನು ಕರಗತಮಾಡಿಕೊಂಡ ವಿವೇಕ ಹಲವು ಸುಂದರ ಕೃತಿಗಳನ್ನು ಸಿದ್ಧಪಡಿಸಿದ್ದಾರೆ.
ಹಕ್ಕಿಗಳು, ಚಹ ಕಪ್, ಕಿಟಲಿ, ಕರಂಡಕ, ಗಡಿಯಾರ, ಕಮಂಡಲ, ಬಡಿಸುವ ಪಾತ್ರೆ ಮೊದಲಾದವು ಮೂಡಿ ಬಂದಿದ್ದಲ್ಲದೇ ತೆಂಗಿನಕಾಯಿ ಸಿಪ್ಪೆಯಿಂದ ಬುದ್ಧನನ್ನು ರೂಪಿಸಿದ್ದಾರೆ. ಇಂತಹ ಕೃತಿಗಳು ಸಾವಿರಾರು ರೂಪಾಯಿಗಳಿಗೆ ಆನ್‌ಲೈನ್‌ನಲ್ಲಿ ಮಾರಾಟವಾಗುತ್ತದೆ. ಕೇರಳ ಸರಕಾರ ಅದಕ್ಕೆ ಪೇಟೆ ಮಾಡಿಕೊಟ್ಟಿದೆ. ಇಲ್ಲಿ ಕೇಳಲು ಹೋದರೆ ಬೆಲೆಯೇ ಇಲ್ಲ. ಆದ್ದರಿಂದ ಮಾಡಿದ್ದನ್ನು ಸ್ನೇಹಿತರನ್ನು ಕೊಡುತ್ತಿದ್ದೇನೆ ಎನ್ನುತಾರೆ ಮರ್ಯಾದಸ್ಥ ವಿವೇಕ ದಿಂಡೆ.
ಇದನ್ನು ಖರೀದಿಸುವ ಅಥವಾ ಮಾರಾಟ ಮಾಡಿಕೊಡುವವರು ಇದ್ದರೆ ಒಂದಿಷ್ಟು ಉದ್ಯೋಗ ಸೃಷ್ಟಿಯಾಗಬಲ್ಲದು . ಕರಟವನ್ನು ಉರುವಲಿಗೆ ಅಲ್ಲದೇ ಬೇರೆ ಕೆಲಸಕ್ಕೆ ಬಳಸಿ ನಮಗೆ ಗೊತ್ತಿಲ್ಲ. ಕೋವಿಡ್ ಇಂತಹ ಹಲವಾರು ಕಲಾವಿದರನ್ನು ವಿವಿಧ ವಿಭಾಗದಲ್ಲಿ ರೂಪಿಸಿದೆ. ಲಕ್ಷಾಂತರ ಕೋಟಿ ರೂಪಾಯಿ ಆಟಿಕೆಗೆ ದೇಶದಲ್ಲಿ ಹಣ ಖರ್ಚಾಗುತ್ತದೆ. ದೇಶೀಯ ಸ್ಪರ್ಶವಿರುವ ಆಟಿಕೆ-ಅಲಂಕಾರದ ವಸ್ತುಗಳನ್ನು ಪ್ರೊತ್ಸಾಹಿಸಬೇಕೆಂದು ಪ್ರಧಾನಮಂತ್ರಿ ಮೋದಿ ಕರೆ ನೀಡಿದ್ದಾರೆ.
ವಿವೇಕ ದಿಂಡೆಗೆ ಇಂತಹ ಪ್ರೋತ್ಸಾಹ ಸಿಕ್ಕರೆ ಇಂತಹ ಹಲವರು ಜಿಲ್ಲೆಯಲ್ಲಿ ವ್ಯರ್ಥವಾಗುವ ಕೃಷಿ ತ್ಯಾಜ್ಯವನ್ನು ಕಲೆಯಾಗಿ ರೂಪಿಸಲು ಸಾಧ್ಯವಿದೆ. ಮೊ. 8073402412.