Advertisement
ಐವತ್ತು ವರ್ಷಗಳ ಇತಿಹಾಸವುಳ್ಳ ಸಾಲಿಗ್ರಾಮ, ಸೌಕೂರು, ಹಿರಿಯಡ್ಕ, ಮಡಾಮಕ್ಕಿ ಮೇಳಗಳ ಯಜಮಾನ ಪಳ್ಳಿ ಕಿಶನ್ ಹೆಗ್ಡೆಯವರು ಹೇಳುವ ಪ್ರಕಾರ ಮೇಳವು ಪಾರಂಪರಿಕ ಕಂಟ್ರಾಕುrದಾರರನ್ನು ಹೊಂದಿದ್ದು, ಆಟಕ್ಕೆ ಕೊರತೆ ಇಲ್ಲ. ಇತ್ತೀಚಿನ ತಿರುಗಾಟದಲ್ಲಿ 100 ರಿಂದ 120 ಬಯಲಾಟಗಳ ಕಾಂಟ್ರಾಕ್ಟ್ ಇದೆ. ಮೇಳದಲ್ಲಿ ಕಲಾವಿದರ ಅನುಕೂಲಗಳ ಜೊತೆಗೆ ಕಾಂಟ್ರಾಕ್ಟ್ದಾರರ ಅನುಕೂಲಕ್ಕೆ ಆದ್ಯತೆ ಕೊಟ್ಟಿದ್ದು, ಈಗ ಮೇಳದ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಕೆಲಸಗಾರರ ಲಭ್ಯತೆಯೇ ದೊಡ್ಡ ಸಮಸ್ಯೆಯಾಗಿದೆ.
Related Articles
Advertisement
ವೈ. ಕರುಣಾಕರ ಶೆಟ್ಟಿಯವರು 34 ವರ್ಷಗಳಲ್ಲಿ ಯಶಸ್ವಿ ತಿರುಗಾಟ ನಡೆಸಿದವರು. ಸದ್ಯ ಪೆರ್ಡೂರು ಮೇಳದ ಜೊತೆ ಹಾಲಾಡಿ ಉಭಯ ಮೇಳಗಳ ಯಜಮಾನ. ಈ ಸಲದ ಟೆಂಟ್ ಮೇಳ ತಿರುಗಾಟದ ಸ್ಥಿತಿ ಗತಿಯ ಬಗ್ಗೆ ಅವರ ಮಾತಲ್ಲಿ ಕೇಳ್ಳೋದಾದರೆ,”ಮೌಲ್ಯಾಧಾರಿತ ಪ್ರಸಂಗಗಳ ಪ್ರಯೋಗದ ಇತಿಹಾಸ ಹೊಂದಿರುವ ನಮ್ಮ ಮೇಳದಲ್ಲಿ ಒಂದು ವರ್ಷ ಪ್ರಸಂಗ ಗೆದ್ದರೆ ಮರುವರ್ಷ ಆಟ ಕಂಟ್ರಾಕ್ಟ್ ಹೋಗುತ್ತಾ ಮೇಳ ಗೆಲ್ಲುವುದು ರೂಢಿಯಾಗಿದೆ. ಈ ಸಲದ ಆರ್ಥಿಕ ಮುಗ್ಗಟ್ಟಿನ ದೆಸೆಯಿಂದ ಆಟಗಳು ಕಾಂಟ್ರಾಕ್ಟ್ ಹೋಗುವಲ್ಲಿ ಸ್ವಲ್ಪ ಹಿನ್ನಡೆ ಕಂಡಾಗ ಈ ಬಗ್ಗೆ ಖು¨ªಾಗಿ ಕಾರ್ಯ ಪ್ರವೃತ್ತನಾದೆ.
ಆದರೂ ಸೀಮಿತ ಕಾರ್ಯಕ್ಷೇತ್ರ ಪರಿಧಿಯಲ್ಲಿ ಹರಕೆ ಹಾಗೂ ಬಯಲಾಟ ಮೇಳಗಳ ಒತ್ತಡದ ನಡುವೆ ಹೊಸ ಪ್ರೇಕ್ಷಕರನ್ನು ಸೆಳೆಯಲು ಟೆಂಟ್ ಮೇಳಗಳ ಪ್ರದರ್ಶನ ವ್ಯವಸ್ಥೆಯು ಮರು ಪರಿಶೀಲನೆಗೆ ಒಳ ಪಡುವ ಅಗತ್ಯ ಇದೆ.
ಸದ್ಯದ ಪರಿಸ್ಥಿತಿಯಲ್ಲಿ ಕಲಾವಿದರು ಅತಿಥಿ ಕಲಾವಿದರಾಗಿ ದಿನಕ್ಕೆ 3 ಕಡೆ ಪ್ರದರ್ಶನಕ್ಕೆ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಕನಿಷ್ಠ ಒಂದು ಕಾರ್ಯಕ್ರಮಕ್ಕೂ ನ್ಯಾಯ ಒದಗಿಸುವ ಭರವಸೆ ಇಲ್ಲ. ಕಲಾವಿದರ ಮಿತಿಮೀರಿದ ಸಂಬಳ ಟೆಂಟ್ ಮೇಳಗಳ ವೀಳ್ಯದ ಮೇಲೆ ಪ್ರಭಾವ ಬೀರಿದ್ದು ಕಾಂಟ್ರಾಕ್ಟ್ದಾರರಿಗೆ ಕೈಗೆಟಕುವ ವೀಳ್ಯದಲ್ಲಿ ಆಟ ನೀಡಲು ಕಷ್ಟ ಎನ್ನುತ್ತಾರೆ ಮೇಳದ ಯಜಮಾನರೂ ಆಗಿರುವ ಕಲಾವಿದ ವಿದ್ಯಾಧರ ಜಲವಳ್ಳಿ.
ಮುಂದಿನ ದಿನಗಳಲ್ಲಿ ಟೆಂಟ್ ಮೇಳಗಳ ಪ್ರದರ್ಶನಗಳಲ್ಲಿ ಒಂದಷ್ಟು ಬದಲಾವಣೆ ಸಾಧ್ಯತೆಯನ್ನು ನೋಡುವುದಾದರೆ ಸಿನೆಮಾ ಆಧಾರಿತ ಸಾಮಾಜಿಕ ಪ್ರಸಂಗಳ ಯಥಾಪ್ರತಿ ಭಟ್ಟಿ ಇಳಿಸುವುದರ ಬದಲಿಗೆ ಈವರೆಗೂ ರಂಗ ಕಾಣದ ಪೌರಾಣಿಕ ಕತೆಯ ಪ್ರಸಂಗಗಳನ್ನು ಹುಡುಕಿ ನಿರ್ದೇಶಿಸಿ ರಂಗಕ್ಕೆ ಅಳವಡಿಸಬಹುದು. ಹಾಗೆಯೇ ಚಾಲ್ತಿಯಲ್ಲಿದ್ದ ಪೌರಾಣಿಕ ಪ್ರಸಂಗಗಳ ಮೂಲ ಕತೆಯನ್ನು ಹೊಸಕದೆ ಹೊಸ ರೀತಿಯಲ್ಲಿ ಕಟ್ಟಿ ಕೊಡುವ ಚಿಂತನೆಬರಬೇಕು. ಇದಕ್ಕೆ ಹೊಸ ಪೀಳಿಗೆಯ ಕಲಾವಿದರ ಅಧ್ಯಯನಶೀಲಯುಕ್ತ ತೊಡಗಿಸಿಕೊಳ್ಳುವಿಕೆಯ ಅಗತ್ಯ ಇದೆ. ಯಕ್ಷಗಾನ ಕಲೆ ನಿಂತ ನೀರಾಗದೆ ಹುಚ್ಚು ಹೊಳೆಯೂ ಆಗದೆ, ನವ ಮನ್ವಂತರದ ಕಡೆಗೆ ನಡಿಗೆ ಹಾಕುತ್ತಿರುವ ಈ ಪರ್ವ ಕಾಲದಲ್ಲಿ ಹೊಸತನದೊಂದಿಗೆ ಯುವ ಪೀಳಿಗೆಗೆ ನೈಜ ಯಕ್ಷಗಾನದ ಅರಿವು ಮೂಡಿಸಿ ಅವರನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಯೋಚಿಸಬೇಕು. ಮೊಬೈಲ್ ಚಿತ್ರೀಕರಣದ ದೆಸೆಯಿಂದ ಮನೆಯಲ್ಲಿ ಕುಳಿತು ಪುಗಸಟ್ಟೆ ಯಕ್ಷಗಾನ ವೀಕ್ಷಣೆಯ ಮೇಲೆ ಕಡಿವಾಣದ ಅಗತ್ಯ ಇದೆ.
ಸುರೇಂದ್ರ ಪಣಿಯೂರು