ಮುಂದುವರಿದುದು-ಸಕ್ಕರೆ ರಹಿತ ಕ್ಯಾಂಡಿ ಮತ್ತು ಸಿಹಿ ತಿನಿಸುಗಳಲ್ಲಿ ಕೃತಕ ಸಿಹಿಕಾರಕಗಳ ಬದಲಾಗಿ ಸಕ್ಕರೆಯ ಮದ್ಯಸಾರಗಳನ್ನು ಆಗಾಗ ಉಪಯೋಗಿಸುತ್ತಾರೆ. ಇವುಗಳಿಗೆ ಉದಾಹರಣೆಯೆಂದರೆ, ಮಾಲ್ಟಿಟಾಲ್, ಎರಥ್ರಿಟಾಲ್, ಲ್ಯಾಕ್ಟಿಟಾಲ್, ಮ್ಯಾನಿಟಾಲ್, ಸಾರ್ಬಿಟಾಲ್ ಇತ್ಯಾದಿಗಳು. ರಕ್ತದಲ್ಲಿರುವ ಸಕ್ಕರೆಯ ಪ್ರಮಾಣದ ಮೇಲೆ ಸಕ್ಕರೆಯ ಮದ್ಯಸಾರಗಳು ಸಾಮಾನ್ಯವಾಗಿ ಸಕ್ಕರೆಗಿಂತ ಕಡಿಮೆ ಪರಿಣಾಮವನ್ನು ಬೀರುತ್ತವೆ. ಸಕ್ಕರೆಗಿಂತ ಒಂದರಿಂದ ನಾಲ್ಕು ಪಟ್ಟು ಕಡಿಮೆ ಕ್ಯಾಲೊರಿ ಹೊಂದಿರುವುದರಿಂದ ಆಹಾರದ ಕ್ಯಾಲೊರಿ ಮತ್ತು ಕಾಬೊìಹೈಡ್ರೇಟ್ ಕಡಿಮೆಗೊಳಿಸುವುದಕ್ಕೂ ಇವು ಸಹಕಾರಿ. ಆದರೆ ಕೆಲವೊಮ್ಮೆ ಇವುಗಳಿಂದ ಋಣಾತ್ಮಕ ಪರಿಣಾಮಗಳೂ ಉಂಟಾಗಬಹುದು. ಸಕ್ಕರೆಯ ಮದ್ಯಸಾರಗಳನ್ನು ಮಿತ ಪ್ರಮಾಣದಲ್ಲಿ ಉಪಯೋಗಿಸಬೇಕು; ಅತಿಯಾಗಿ ಸೇವಿಸಬಾರದು ಎಂಬುದಾಗಿ ಅಮೆರಿಕನ್ ಡಯಾಬಿಟೀಸ್ ಅಸೋಸಿಯೇಶನ್ ಶಿಫಾರಸು ಮಾಡುತ್ತದೆ. ಹೀಗಾಗಿ ಸಕ್ಕರೆಯ ಮದ್ಯಸಾರ ಗಳನ್ನು ನಾವು ಸೇವಿಸಬಾರದೇ ಸೇವಿಸಬಹುದೇ ಎಂಬುದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದದ್ದು ನಮಗೆ ಅವು ಎಷ್ಟರ ಮಟ್ಟಿಗೆ ಒಗ್ಗುತ್ತದೆ ಎಂಬುದಾಗಿದೆ.
-ಮುಂದುವರಿಯುವುದು