Advertisement
ಅಲ್ಲಲ್ಲಿ ಕೃತಕ ನೆರೆಮಧ್ಯಾಹ್ನದ ಬಳಿಕ ಧಾರಾಕಾರ ಮಳೆ ಸುರಿದಿದ್ದು ನಗರದ ರಸ್ತೆಗಳಲ್ಲಿ ನೀರು ತುಂಬಿ ಸಂಚಾರ ಬಾಧಿತವಾಯಿತು. ಅಂಬೇಡ್ಕರ್ ವೃತ್ತದ ಬಳಿ ಮುಖ್ಯ ರಸ್ತೆಯಲ್ಲಿ ಸುಮಾರು 100 ಮೀಟರ್ ಉದ್ದಕ್ಕೆ ಕೃತಕ ನೆರೆ ಉಂಟಾಗಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಮೊಣ ಕಾಲಿನವರೆಗೆ ನೀರು ತುಂಬಿದ್ದು ಪ್ರಯಾ ಣಿಕರಿಗೆ ಬಸ್ ಹಿಡಿಯಲು ಸಾಧ್ಯ ವಾಗಲಿಲ್ಲ. ಬಸ್ ನಿಲ್ದಾಣಗಳ ಒಳಗೂ ನೀರು ನುಗ್ಗಿತ್ತು. ಕೆಲವು ದ್ವಿಚಕ್ರ ವಾಹನಗಳು ನೀರಿನಲ್ಲಿ ಬಾಕಿ ಯಾಗಿದ್ದು ಅವುಗಳನ್ನು ಅನಂತರ ತೆರವು ಮಾಡಲಾಯಿತು.
ತೊಕ್ಕೊಟ್ಟು ಸರ್ಕಲ್ ಬಳಿಯೂ ಸಂಜೆ ಸುಮಾರು ಒಂದು ಗಂಟೆ ಕಾಲ ಕೃತಕ ನೆರೆ ಸೃಷ್ಟಿಯಾಗಿದ್ದು, ವಾಹನಗಳಿಗೆ ತೀರಾ ಸಮಸ್ಯೆ ಉಂಟಾಯಿತು. ಇಲ್ಲಿ ಹೆದ್ದಾರಿಯಲ್ಲಿ ಫ್ಲೆ „ಓವರ್ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿನಿರತ ಸ್ಥಳದಲ್ಲಿಯೇ ಕೃತಕ ನೆರೆ ಉಂಟಾಗಿದೆ. ರಸ್ತೆಯಲ್ಲೇ ಹರಿದ ನೀರು
ಮಾರ್ನಮಿಕಟ್ಟೆ, ಅತ್ತಾವರ, ಹಂಪನಕಟ್ಟೆ, ಕಂಕನಾಡಿ, ಎಸ್.ಎಲ್. ಮಥಾಯಸ್ ರಸ್ತೆ ಮುಂತಾ ದೆಡೆ ರಸ್ತೆಯಲ್ಲಿ ನೀರು ನಿಂತಿ ದ್ದಲ್ಲದೇ ಪಕ್ಕದಲ್ಲಿದ್ದ ಅಂಗಡಿಗಳ ಒಳಗೂ ನೀರು ನುಗ್ಗಿತು. ನಂತೂರು, ಪಿವಿಎಸ್ ಮುಂತಾದೆಡೆ ರಸ್ತೆ ಮಧ್ಯೆ ಉಂಟಾಗಿರುವ ಹೊಂಡ ಮಳೆ ನೀರಿನಿಂದ ತುಂಬಿದ್ದರಿಂದ ತಿಳಿಯದೇ ವಾಹನಗಳು ಈ ಹೊಂಡಕ್ಕೆ ಇಳಿದ ಘಟನೆಯೂ ನಡೆಯಿತು.
Related Articles
ಕೃತಕ ನೆರೆಯಿಂದಾಗಿ ಹಂಪನಕಟ್ಟೆ ಯಿಂದ ಜ್ಯೋತಿ, ಪಿವಿಎಸ್- ಬಂಟ್ಸ್ ಹಾಸ್ಟೆಲ್-ಜ್ಯೋತಿ, ಕಂಕನಾಡಿ ಪ್ರದೇಶಗಳಲ್ಲಿ ಟ್ರಾಫಿಕ್ ಜಾಂ ಉಂಟಾಯಿತು. ವಾಹನ ಸವಾರರು ಗಂಟೆಗಟ್ಟಲೆ ಮಳೆಯಲ್ಲಿ ರಸ್ತೆ ಮಧ್ಯ ದಲ್ಲಿ ಸಿಕ್ಕಿ ಹಾಕಿ ಕೊಳ್ಳಬೇಕಾದ ಪರಿಸ್ಥಿತಿ ಉಂಟಾಯಿತು.
Advertisement
ಇತರೆಡೆ ಕಡಿಮೆ ಮಳೆಮಂಗಳೂರಿನಲ್ಲಿ ಮಳೆ ಇಷ್ಟೆಲ್ಲ ಅವಾಂತರ ಉಂಟು ಮಾಡಿದ್ದರೂ ಜಿಲ್ಲೆಯ ಇತರ ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆ ಇತ್ತು. ಪುತ್ತೂರಿನಲ್ಲಿ ಉತ್ತಮ ಮಳೆಯಾಗಿದೆ. ಇಲ್ಲಿನ ಮುರದಲ್ಲಿ ಸಂಜೆ ವಿದ್ಯುತ್ ಕಂಬದ ಮೇಲೆ ಮರ ಉರುಳಿ ಬಿದ್ದು, ವಾಹನ ಸಂಚಾರ ಸ್ಥಗಿತಗೊಂಡಿತ್ತು. ಅನಂತರ ಮರ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಬೆಳ್ತಂಗಡಿ ಯಲ್ಲಿ ಸಿಡಿಲು ಸಹಿತ ಮಳೆ ಸುರಿದಿದೆ. ಕಿನ್ನಿಗೋಳಿ, ಮೂಲ್ಕಿ, ಮೂಡಬಿದಿರೆ, ಬಂಟ್ವಾಳದಲ್ಲಿಯೂ ಉತ್ತಮ ಮಳೆ ಬಂದಿದೆ. ಕಾರ್ಕಳ, ಉಡುಪಿ, ಮಣಿಪಾಲ, ಬ್ರಹ್ಮಾವರ, ತೆಕ್ಕಟ್ಟೆ, ಮಲ್ಪೆ, ಪಡುಬಿದ್ರಿಯಲ್ಲಿ ಸಾಧಾರಣ ಮಳೆಯಾದರೆ, ಸುಳ್ಯ, ಸುರತ್ಕಲ್‌ನಲ್ಲಿ ಉತ್ತಮ ಸುರಿದಿದೆ. ಹೆಬ್ರಿಯಲ್ಲಿ ಉತ್ತಮ ಮಳೆ ಯಾ ಯಿತು. ಶಿರ್ವದಲ್ಲಿ ಗುಡುಗು ಸಹಿತ ಭಾರೀ ಮಳೆಯಾಯಿತು.