Advertisement

Gaza ದಾಳಿಗೆ ಇಸ್ರೇಲ್‌ನಿಂದ ಕೃತಕ ಬುದ್ಧಿ ಮತ್ತೆ ಬಳಕೆ?

02:17 PM Apr 13, 2024 | Team Udayavani |

ಮೆಲ್ಬರ್ನ್: ಇಸ್ರೇಲ್‌ ಸೇನಾ ಪಡೆ ಗಳು ಗಾಜಾದಲ್ಲಿ ಹಮಾಸ್‌ ಉಗ್ರರಿರುವ ನಿರ್ದಿಷ್ಟ ಗುರಿಗಳನ್ನು ಖಚಿತಪಡಿಸಿಕೊಂಡು ದಾಳಿ ನಡೆಸಲು ಕೃತಕ ಬುದ್ಧಿಮತ್ತೆ (ಎ.ಐ.) ಆಧಾರಿತ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡಿವೆ ಎನ್ನಲಾಗಿದೆ.  ಈ ಕುರಿತು “ಪ್ಲಸ್‌ 972′ ಎಂಬ ಆನ್‌ಲೈನ್‌ ನಿಯತಕಾಲಿಕದ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಇಸ್ರೇಲ್‌ ಗುಪ್ತಚರ ಸಂಸ್ಥೆಯ ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಗಳ ಹೇಳಿಕೆಗಳನ್ನೂ ವರದಿಯಲ್ಲಿ ಉದ್ಧರಿಸಲಾಗಿದೆ.

Advertisement

ಈ ಎ.ಐ. ತಂತ್ರಜ್ಞಾನಕ್ಕೆ “ಲ್ಯಾವೆಂಡರ್‌’ ಎಂಬ ಹೆಸರಿದೆ. ಉಗ್ರರು ತಮ್ಮ ಅಡಗುತಾಣದಲ್ಲಿ ಅಡಗಿ ದ್ದರೂ ಅವರನ್ನು ಪತ್ತೆಹಚ್ಚಲು ಇದು ಸಹಕರಿಸುತ್ತದೆ. ಉಗ್ರರ ಅಡಗುತಾಣಗಳನ್ನು ಉಡಾಯಿಸಲು ಕೂಡ ಇದರಿಂದ ಸಹಾಯವಾಗುತ್ತದೆ. ಲ್ಯಾವೆಂ ಡರ್‌ ಶೇ. 90ರಷ್ಟು ನಿಖರ ಮಾಹಿತಿ ನೀಡುತ್ತದೆ ಎಂದು ನಂಬಲಾಗಿದೆ. ಆದರೆ ಉಳಿದ ಶೇ. 10ರಷ್ಟು ನಿಖರತೆಯ ಕೊರತೆಯಿರುವ ಕಾರಣ ಅಮಾಯಕರು ಕೂಡ ದಾಳಿಗೆ ಬಲಿಯಾಗುವ ಸಾಧ್ಯತೆ ಇದೆ ಎನ್ನುತ್ತದೆ ವರದಿ.

ಈ ತಂತ್ರಜ್ಞಾನದ ಸಹಾಯದಿಂದ ಹಮಾಸ್‌ ಉಗ್ರರ ಅನೇಕ ಅಡಗುತಾಣಗಳನ್ನು ಗುರುತಿಸ ಲಾಗಿದೆ. ಅದನ್ನು ಗುರಿಯಾಗಿಸಿ ಅನೇಕ ದಾಳಿ ಗಳನ್ನು ಇಸ್ರೇಲ್‌ ಸೇನೆ ನಡೆಸಿದೆ. ಇದರಿಂದ ಸಾವಿ ರಾರು ಉಗ್ರರು ಹತ್ಯೆಗೀಡಾಗಿದ್ದಾರೆ ಎನ್ನಲಾಗಿದೆ.

ಎ.ಐ. ತಂತ್ರಜ್ಞಾನವು ನಮ್ಮ ಕೆಲಸವನ್ನು ಸುಲಭಗೊಳಿಸಿತು. ಇದು ಗುರಿಯನ್ನು ಪತ್ತೆಹಚ್ಚಿ, ಅವುಗಳನ್ನು ಧ್ವಂಸಗೊಳಿಸಲು ಸಹಕಾರಿಯಾಗಿದೆ. ಇದರ ಸಹಾಯದಿಂದ ದೊಡ್ಡ ಸಂಖ್ಯೆಯ ದಾಳಿಗಳನ್ನು ನಡೆಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಇಸ್ರೇಲ್‌ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬ್ರಿಟನ್‌ನ ಆಂಗ್ಲ ಪತ್ರಿಕೆಯೊಂದರಲ್ಲಿ ಪ್ರಕಟ ವಾಗಿರುವ ಮತ್ತೂಂದು ವರದಿಯಲ್ಲೂ ಕೃತಕ ಬುದ್ಧಿಮತ್ತೆ ಬಳಕೆಯಿಂದ ಇಸ್ರೇಲ್‌ಗೆ ಸುಲಭವಾಗಿ ಶತ್ರು ದಮನ ಕಾರ್ಯ ನಡೆಸಲು ಸಾಧ್ಯವಾಗಿದೆ ಎಂದು ಉಲ್ಲೇಖೀಸಲಾಗಿದೆ.

Advertisement

ಈ ಹಿಂದೆ, “ಮೊದಲ ಬಾರಿಗೆ ಯುದ್ಧದಲ್ಲಿ ಎ.ಐ. ತಂತ್ರಜ್ಞಾನ ಬಳಕೆಯ ಸಾಧನೆಯನ್ನು ನಾವು ಮಾಡಿದ್ದೇವೆ’ ಎಂದು ಇಸ್ರೇಲ್‌ ಗುಪ್ತಚರ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖೀಸಿ 2021ರಲ್ಲಿ “ಜೆರುಸಲೇಮ್‌ ಪೋಸ್ಟ್‌’ ವರದಿ ಮಾಡಿತ್ತು.

ಹೇಗೆ ಕಾರ್ಯನಿರ್ವಹಿಸುತ್ತದೆ?

ಇಸ್ರೇಲ್‌ ಸೇನೆ ಕಚ್ಚಾ ದತ್ತಾಂಶಗಳನ್ನು ಲ್ಯಾವೆಂಡರ್‌ ಸಿಸ್ಟಂಗೆ ಒದಗಿಸುತ್ತದೆ.

ಇದರ ಆಧಾರದಲ್ಲಿ ಲ್ಯಾವೆಂಡರ್‌ ಸಿಸ್ಟಂ ಇತರ ಸಂಭಾವ್ಯ ಉಗ್ರರ ಪ್ರೊಫೈಲ್‌ಗಳನ್ನೂ ಸೃಷ್ಟಿಸುತ್ತದೆ.

 ಜತೆಗೆ ಸಂಭಾವ್ಯ ಉಗ್ರರಿರುವ ಪ್ರದೇಶಗಳು ಹಾಗೂ ಮಾನವ ಗುರಿಗಳನ್ನು ಅದು ನಿಗದಿ ಮಾಡುತ್ತದೆ.

ಇದಾದ 20 ಸೆಕೆಂಡುಗಳಲ್ಲೇ ವೈಮಾನಿಕ ದಾಳಿ ನಡೆಯುತ್ತವೆ

ಎಐ ಬಳಸಿಲ್ಲ: ಇಸ್ರೇಲ್‌ ಸ್ಪಷ್ಟನೆ

ವರದಿಯ ಅಂಶಗಳನ್ನು ತಿರಸ್ಕರಿಸಿರುವ ಇಸ್ರೇಲ್‌ ಸೇನಾಪಡೆಯು, “ಲ್ಯಾವೆಂಡರ್‌ ಸಿಸ್ಟಂ ಎನ್ನುವುದು ಉಗ್ರರ ಅಡಗುದಾಣಗಳನ್ನು ಗುರುತು ಹಿಡಿಯುವ ವ್ಯವಸ್ಥೆಯೇ ಅಲ್ಲ. ಇದು ಕೇವಲ ಡೇಟಾಬೇಸ್‌ ಆಗಿದ್ದು, ಇದರ ಮೂಲ ಉದ್ದೇಶವು ಗುಪ್ತಚರ ಮಾಹಿತಿಯ ಪರಾಮರ್ಶನೆಯಷ್ಟೇ ಆಗಿದೆ’ ಎಂದು ಸ್ಪಷ್ಟನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next