Advertisement

Iran ಪ್ರತೀಕಾರಕ್ಕೆ ಮುಂದಾಗಲಿಲ್ಲ: ಇಸ್ರೇಲ್‌ ಬಿಕ್ಕಟ್ಟು ಸದ್ಯಕ್ಕೆ ಶಮನ?

12:23 AM Apr 22, 2024 | Team Udayavani |

ಟೆಹ್ರಾನ್‌/ಜೆರುಸಲೇಂ: ಜಗತ್ತಿನಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಇರಾನ್‌ ಮತ್ತು ಇಸ್ರೇಲ್‌ ನಡುವಿನ ಸಮರ ಪರಿಸ್ಥಿತಿ ಸದ್ಯಕ್ಕೆ ಶಮನವಾಗುವತ್ತ ಸಾಗಿದೆ. ಇರಾನ್‌ನ ಅಣ್ವಸ್ತ್ರ ಸಂಗ್ರಹಾಗಾರವಿದ್ದ ಪ್ರಾಂತಕ್ಕೆ ಇಸ್ರೇಲ್‌ ಡ್ರೋನ್‌ ದಾಳಿ ನಡೆಸಿದ್ದರೂ, ಇರಾನ್‌ ಅದರ ವಿರುದ್ಧ ಪ್ರತೀಕಾರಕ್ಕೆ ಮುಂದಾಗಿಲ್ಲ.

Advertisement

ಇಸ್ರೇಲ್‌ ಕೂಡ ಇರಾನ್‌ ವಿರುದ್ಧ ದಾಳಿಯ ಬಗ್ಗೆ ಮೌನ ವಹಿಸಿದೆ. ಇನ್ನೊಂದೆಡೆ, ಪ್ಯಾಲೆಸ್ತೀನ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪದ ಮೇರೆಗೆ ಇಸ್ರೇಲ್‌ನ ನೆಟಾj ಯಹೂದಾ ಸೇನಾ ತುಕಡಿ ಮೇಲೆ ಅಮೆರಿಕ ನಿಷೇಧ ಹೇರಲಿದೆ ಎಂಬ ವರದಿಗಳ ಬೆನ್ನಲ್ಲೇ ಅಮೆರಿಕದ ವಿರುದ್ಧ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಆಕ್ರೋಶ ವ್ಯಕ್ತಪ ಡಿಸಿದ್ದಾರೆ. “ನಮ್ಮ ಯೋಧರನ್ನು ಕಪ್ಪುಪಟ್ಟಿಗೆ ಸೇರಿಸಿದರೆ, ಅವರ ಸ್ಥೈರ್ಯ ಕುಗ್ಗಿಸಿದಂತೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next