Advertisement

ಕೃತಕ ಕಾಲು ಜೋಡಣೆ ಉಚಿತ ಶಿಬಿರ ಯಶಸ್ವಿ

11:46 AM May 28, 2019 | Suhan S |

ರಾಮನಗರ: ಮೈಸೂರಿನ ರೋಟರಿ ಕ್ಲಬ್‌, ಭಾರತ್‌ ವಿಕಾಸ ಪರಿಷತ್‌ ವಾಲ್ಮೀಖೀ ಶಾಖೆ, ಭಾರತ್‌ ವಿಕಾಸ್‌ ಪರಿಷದ್‌ ಟ್ರಸ್ಟ್‌, ಭಾರತೀಯ ರೆಡ್‌ ಕ್ರಾಸ್‌, ಶಿರಡಿ ಸಾಯಿಬಾಬಾ ಭಕ್ತಮಂಡಳಿ ಟ್ರಸ್ಟ್‌ ಹಾಗೂ ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ನಗರದ ಶಿರಡಿ ಸಾಯಿಬಾಬಾ ಮಂದಿರದ ಸಭಾಂಗಣದಲ್ಲಿ ಅರ್ಹ ಅಂಗವಿಕಲರಿಗೆ ಉಚಿತ ಕೃತಕ ಕಾಲು ಜೋಡಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

Advertisement

ಶಿಬಿರವನ್ನು ಉದ್ಘಾಟಿಸಿದ ಭಾರತ್‌ ವಿಕಾಸ ಪರಿಷತ್‌ ಟ್ರಸ್ಟಿ ಸಿಎನ್‌ಎನ್‌ ರಾಜು ಮಾತನಾಡಿ, ಅಂಗವಿಕಲರು ಸ್ವಾವಲಂಬಿಗಳಾಗಿ ಜೀವನದಲ್ಲಿ ನಿಲ್ಲಬೇಕು. ಸಂಪೂರ್ಣ ಉಚಿತವಾಗಿ ಈ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಈ ಹಿಂದಿನ ಶಿಬಿರಗಳಲ್ಲಿ ಭಾಗವಹಿಸಿದವರು ಕೂಡ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆಯಬಹುದು. ಖಾಸಗಿಯಲ್ಲಿ ಕೃತಕ ಕಾಲು ಅಳವಡಿಸಿಕೊಳ್ಳಬೇಕಾದರೆ 5 ರಿಂದ 6 ಸಾವಿರ ವೆಚ್ಚ ಮಾಡಬೇಕಾಗುತ್ತದೆ. ಶಿಬಿರದಲ್ಲಿ ಉಚಿತ ವಾಗಿ ಅಳವಡಿಸಲಾಗುತ್ತದೆ. ಅಗತ್ಯ ಇರುವ ವರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಭಾರತ್‌ ವಿಕಾಸ ಪರಿಷತ್‌ ಅಧ್ಯಕ್ಷ ಬಿ.ಕೆ. ಕೃಷ್ಣಮೂರ್ತಿ ಮಾತನಾಡಿ ಅನೇಕರು ಹುಟ್ಟಿದಾಗ, ಬೆಳವಣಿಗೆಯಲ್ಲಿ, ಅಪಘಾತದಲ್ಲಿ ಹಾಗೂ ಇತರೆ ಕಾರಣಕ್ಕೆ ತಮ್ಮ ಕಾಲನ್ನು ಕಳೆದುಕೊಂಡಿರುತ್ತಾರೆ. ಮನುಷ್ಯ ಇತರ ಪ್ರಾಣಿಗಳಂತೆ ಇರಲು ಸಾಧ್ಯವಿಲ್ಲ. ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲ ಇರುತ್ತದೆ. ಇಂತಹವರ ನೆರವಿಗಾಗಿ ಶಿಬಿರ ಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಸಂಕಷ್ಟದಲ್ಲಿ ಭಾಗಿಯಾವುದೇ ಜೀವನ ತತ್ವ:

ಎಚ್.ಡಿ. ಕೋಟೆ ರೋಟರಿ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ಜಯಂತ್‌ ಮಾತನಾಡಿ, ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜೀವನ ಪದ್ಧತಿಯನ್ನು ಇದಕ್ಕೆ ಪೂರಕವಾಗಿ ಬದಲಾ ಯಿಸಿಕೊಳ್ಳಬೇಕು. ಮತ್ತೂಬ್ಬರ ಸಂಕಷ್ಟದಲ್ಲಿ ಭಾಗಿಯಾಗುವುದೇ ಧರ್ಮಗಳು ಮತ್ತು ಜೀವನದ ಮೂಲ ತತ್ತ್ವವಾಗಿದೆ ಎಂದರು.

Advertisement

ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಸಭಾ ಪತಿ ಟಿ. ಬಿಳಿಗಿರಿ, ಉಪ ಸಭಾಪತಿ ವಿ. ಬಾಲ ಕೃಷ್ಣ, ಅಧ್ಯಕ್ಷ ಎಚ್.ವಿ. ಶೇಷಾದ್ರಿ ಐಯ್ಯರ್‌, ಕಾರ್ಯದರ್ಶಿ ಎನ್‌.ವಿ. ಲೋಕೇಶ್‌, ಆರೋಗ್ಯ ಸಮಿತಿ ಅಧ್ಯಕ್ಷ ಸುಪ್ರಿಯಾಕುಮಾರ್‌, ಪದಾಧಿಕಾರಿಗಳಾದ ಪಟೇಲ್ ಸಿ.ರಾಜು, ಕೆ.ಎಲ್. ಶೇಷಗಿರಿರಾವ್‌, ಸಿ.ಕೆ. ನಾಗರಾಜು, ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಸುರೇಂದ್ರ, ಸಿದ್ದೇಗೌಡ, ಸರ್ವಸ್ವ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನ ಪ್ರೇಮಾ ಇದ್ದರು.

ಕಾಲಿನ ಅಳತೆ ಪಡೆದು, ಸ್ಥಳದಲ್ಲೇ ಕೃತಕ ಕಾಲು ತಯಾರಿಸಲಾಯಿತು. ಪೋಲಿಯೊ ಸೇರಿದಂತೆ ಇತರೆ ಕಾರಣಗಳಿಂದ ಅಂಗವೈಕಲ್ಯಕ್ಕೆ ಗುರಿಯಾದವರಿಗೆ ಕ್ಯಾಲಿಪರ್ಸ್‌ಗಳನ್ನು ಅಳವಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next