Advertisement

ಎಳೆಯರ ಕೈಗಳಲ್ಲಿ ಅರಳಿದ ಕಲಾಕೃತಿಗಳು

07:32 PM Jul 11, 2019 | mahesh |

ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ರಚಿಸಿದ ಚಿತ್ರಕಲಾಕೃತಿಗಳನ್ನು ಮತ್ತು ಕರಕುಶಲ ಕಲಾಕೃತಿಗಳ ಪ್ರದರ್ಶನವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು. ಜಲವರ್ಣ, ಆಕ್ರಲಿಕ್‌, ಪೆನ್ಸಿಲ್‌ ಶೇಡ್‌, ಆಯಿಲ್‌ ಪೇಸ್ಟಲ್‌ ಮೂಲಕ ರಚಿಸಿದ ಚಿತ್ರಕೃತಿಗಳಲ್ಲಿ ಪೌರಾಣಿಕ ಕಥಾಚಿತ್ರಗಳು, ಭಾಷಾ ಪಾಠಗಳಲ್ಲಿನ ಸಾಂದರ್ಭಿಕ ಚಿತ್ರಗಳು, ದೇಶಭಕ್ತರ ಭಾವಚಿತ್ರಗಳು, ವನ್ಯಜೀವಿಗಳ ಮತ್ತು ಪಕ್ಷಿಲೋಕದ ಚಿತ್ರಗಳು, ಸುಂದರ ಭೂ ದೃಶ್ಯಗಳು, ಯಕ್ಷಗಾನ, ಕಂಬಳ ಮುಂತಾದ ಕೃತಿಗಳ ಜೊತೆಗೆ ಪರಿಸರ ಮಾಲಿನ್ಯ, ಪ್ರವಾಸೋಧ್ಯಮ ಮತ್ತು ಗ್ರಾಹಕ ಚಳುವಳಿಗೆ ಸಂಬಂಧಿಸಿದ ಕೃತಿಗಳೂ ಮನ ಸೆಳೆಯುವಂತಿತ್ತು.

Advertisement

ಕರಕುಶಲ ವಿಭಾಗದಲ್ಲಿ ಕಸದಿಂದ ರಸ ಎನ್ನುವಂತೆ ಅನುಪಯುಕ್ತ ವಸ್ತುಗಳಿಂದ ರಚಿಸಿದ ಗ್ರಹೋಪಯೋಗಿ ಅಲಂಕಾರಿಕ ವಸ್ತುಗಳು ಸುಂದರ ಹೂ ಗುತ್ಛಗಳು, ಫ್ಲವರ್‌ ವಾಝ್, ವಾಲ್‌ ಹ್ಯಾಂಗಿಗ್ಸ್‌, ಸ್ಮರಣಿಕೆಗಳು, ಫೋಟೋ ಪ್ರೇಮ್‌, ರಥದ ಮಾದರಿ, ಗ್ಲಾಸ್‌ ಪೇಂಟಿಗ್‌, ವಿವಿಧ ಮನೆಗಳ ಮಾದರಿಗಳಿದ್ದವು.

ಜೊತೆಗೆ ಇಂದು ಮಹಿಳೆಯರ ಮನ ಸೆಳೆಯುತ್ತಿರುವ ಕ್ವಿಲ್ಲಿಂಗ್‌ ಆಭರಣಗಳೊಂದಿಗೆ ಉಲ್ಲನ್‌ ಸ್ವೆಟ್ಟರ್‌ಗಳು ಮತ್ತು ಶಾಲುಗಳು ಹಾಗೂ ಕಸೂತಿ ವಸ್ತ್ರಗಳು ಹೀಗೆ ಅಸಂಖ್ಯಾತ ಮಾದರಿಗಳು ಇಲ್ಲಿನ ವಿದ್ಯಾರ್ಥಿಗಳ ಸಾಧನೆಗೆ ಸಾಕ್ಷಿಯಾಗಿದ್ದವು. ಇವರಿಗೆ ಪೋ›ತ್ಸಾಹ ನೀಡುತ್ತಿರುವ ಚಿತ್ರಕಲಾ ಶಿಕ್ಷಕರು, ಕ್ರಾಫ್ಟ್ ಟೀಚರ್‌ ಮತ್ತು ಅಧ್ಯಾಪಕ ವೃಂದ ಹಾಗೂ ಮುಖ್ಯೋಪಾಧ್ಯಾಯರು ಅಭಿನಂದನಾರ್ಹರು.

ಕೆ. ದಿನಮಣಿ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next