Advertisement
ಹೆಣ್ಣೆಂಬುದಿಲ್ಲವೆಂದರೆ ಪೂರ್ತಿ ಮಾನವಕುಲವೇ ವ್ಯರ್ಥವೆನಿಸುತ್ತದೆ. ಮಮತೆಯಾ ಕರುಣೆಗೆ ತಾಳ್ಮೆಯೆನ್ನುವ ಸಹನೆಗೆ ಪ್ರೀತಿಯೆಂಬ ವಾತ್ಸಲ್ಯಗೆ ಮತ್ತೊಂದು ರೂಪವೇ ಹೆಣ್ಣು.
Related Articles
Advertisement
ಸಾಧನೆ ಹಾದಿಯಲ್ಲಿ ಹೆಣ್ಣು ಹಿನ್ನೆಡೆಯನ್ನೊ ಮಾತೆಂಬುದಿಲ್ಲ ಸಮಾಜದಲ್ಲಿ ಯಾವ ಹೆಣ್ಣು ಕೆಳಗೆ ಎನ್ನುವ ಭಾವನೆ ಇದೆಯೋ ಅದೇ ಹೆಣ್ಣು ಇವತ್ತು ಎತ್ತರದಲ್ಲಿದ್ದಾಳೆ ಅನ್ನುವ ಹೆಮ್ಮೆಯು ಇದೆ. ಹೆಣ್ಣಿನ ಈ ಛಲ ಹೀಗೆ ಮುಂದುವರಿಯುತ್ತಿರಲಿ. ಸದಾ ಕಣ್ಣೀರು ಸುರಿಸುವ ಹೆಣ್ಣಿಗೆ ಪರರ ಕಣ್ಣೀರು ಒರೆಸುವ ಹೃದಯವಂತಿಕೆ ತುಂಬಿರುವ ಗುಣವಂತಿಕೆಯ ಸಾಕ್ಷತ್ಕಾರ.
ಹೆಣ್ಣುಮಕ್ಕಳೆಂದರೆ ಕಷ್ಟ ಬಂತೆಂಬುದು ಅಲ್ಲ, ಹೆಣ್ಣು ಹುಟ್ಟಿದರೆ ಅದೃಷ್ಟ. ಎಲ್ಲರಲ್ಲಿಯೂ ಕನಸುಗಳಿವೆ, ನನಸಾಗಿಸುವ ಹಂಬಲವಿದೆ, ಸಾಧಿಸುವ ಛಲವಿದೆ, ಯಾವುದೇ ಸಾಧನೆಗೂ ಹೆಣ್ಣು ಗಂಡು ಅನ್ನುವ ಭೇದ ಭಾವವಿಲ್ಲ, ತಾರತಮ್ಯವು ಇಲ್ಲ ಹೀಗಿರುವಾಗ ಹೆಣ್ಣನ್ನು ಪ್ರೋತ್ಸಾಹಿಸಿ ಗೌರವಿಸಿ ಸಂಸ್ಕರಿಸುವ ಗುಣ ನಮ್ಮ ಸಮಾಜದಲ್ಲಿರಲಿ. ದೇಶದ ಭವಿಷ್ಯದಲ್ಲಿ ಹೆಣ್ಣಿನ ಕೊಡುಗೆಯೂ ಜತೆಯಾಗಲಿ. ಇನ್ನಷ್ಟು ಹೆಚ್ಚಿನ ಸಾಧನೆಗೆ ಮುಂದಡಿಯಿಟ್ಟು ನಮ್ಮ ಮಹಿಳೆಯರು ಇತಿಹಾಸವನ್ನೇ ಬರೆಯಲಿ ಎಂಬ ಆಶಯ ನಮ್ಮೆಲ್ಲರದು. ಸಮಸ್ತ ಭಾರತೀಯ ನಾರಿಯರಿಗೆ ನನ್ನದೊಂದು ಸಲಾಮ್.