ಬೆಂಗಳೂರು: ನಮ್ಮ ಮೆಟ್ರೋ ಸುರಂಗದಲ್ಲಿ ಈಗಓಟದ ಸ್ಪರ್ಧೆ ನಡೆದಿದೆ. ಈ ಸ್ಪರ್ಧೆ ಭೂಮಿಯ ಒಳಗೆಸುರಂಗ ಕೊರೆಯುತ್ತಿರುವ ಟನೆಲ್ ಬೋರಿಂಗ್‌ಯಂತ್ರ (ಟಿಬಿಎಂ)ಗಳ ನಡುವೆ ಏರ್ಪಟ್ಟಿದೆ. ಈಚೆಗೆಈ ಸ್ಪರ್ಧೆಗೆ ಮತ್ತೂಂದು ದೈತ್ಯಯಂತ್ರಸೇರ್ಪಡೆಗೊಂಡಿದ್ದು, ಸೌತ್‌ರ್‍ಯಾಂಪ್‌ನಿಂದಡೇರಿವೃತ್ತದ ಕಡೆಗೆ ಸುರಂಗ ಕೊರೆಯಲುಅಣಿಗೊಳಿಸಲಾಗಿದೆ.
ಇದರೊಂದಿಗೆ 9.28 ಕಿ.ಮೀ. ಅಂತರದಲ್ಲಿ ಅಂದರೆಡೇರಿವೃತ್ತ-ಟ್ಯಾನರಿ ರಸ್ತೆ ನಡುವೆ ಆರು ಟಿಬಿಎಂಗಳುಕಾರ್ಯಾಚರಣೆ ಮಾಡುತ್ತಿದ್ದು, ಗರಿಷ್ಠ ಹತ್ತು ತಿಂಗಳಲ್ಲಿಇವೆಲ್ಲವೂ ಸುರಂಗ ಕೊರೆಯುವಕೆಲಸವನ್ನು ಪೂರ್ಣಗೊಳಿಸುವ ಗುರಿಹೊಂದಿವೆ.ಆರೂ ಟಿಬಿಎಂಗಳ ಓಟದ ಸ್ಪರ್ಧೆಯಲ್ಲಿಊರ್ಜಾ ಉಳಿದೆಲ್ಲರನ್ನೂ ಹಿಂದಿಕ್ಕಿದ್ದು,ಮಾರ್ಗದ ಉದ್ದವೂ ಕಡಿಮೆಇರುವುದರಿಂದ ಮೊದಲು ಗುರಿ ತಲುಪುವಸಾಧ್ಯತೆಯೂ ಇದೆ.
ಈಗಾಗಲೇ ಈ ಯಂತ್ರವು 860ಮೀಟರ್‌ನಲ್ಲಿ ಅರ್ಧಕ್ಕರ್ಧ ಅಂದರೆ 450 ಮೀಟರ್‌ಪೂರ್ಣಗೊಳಿಸಿದೆ.ಇದರ ಹಿಂದೆಯೇ ವಿಂದ್ಯಾ 390ಮೀಟರ್ ಸುರಂಗ ಕೊರೆದಿದ್ದು,ಊರ್ಜಾ ಅನ್ನು ಹಿಂದಿಕ್ಕುವಭರದಲ್ಲಿ ಸಾಗುತ್ತಿದೆ. ಇವರೆಡೂಯಂತ್ರಗಳು 2020ರ ಜುಲೈನಲ್ಲಿಕಂಟೋನ್ಮೆಂಟ್‌ನಿಂದ ಶಿವಾಜಿನಗರ ನಡುವಿನಮಾರ್ಗದಲ್ಲಿ ಸ್ಪರ್ಧೆಗಿಳಿದಿದ್ದವು.
ಅದೇ ರೀತಿ, ಈ ಎರಡೂ ಟಿಬಿಎಂಗಳೊಂದಿಗೆಶಿವಾಜಿನಗರ-ಎಂ.ಜಿ. ರಸ್ತೆಯತ್ತ ಅವನಿ ಕೂಡ ರೇಸ್‌ನಲ್ಲಿದ್ದು, 1,100 ಮೀಟರ್ ಪೈಕಿ 375 ಮೀಟರ್‌ಸುರಂಗವನ್ನು ಇದು ಕೊರೆದಿದೆ. ಆರಂಭದಲ್ಲೇ ಗಟ್ಟಿಕಲ್ಲುದೊರೆತಿದ್ದರಿಂದ ನಿರೀಕ್ಷೆ ಮೀರಿ ಸುರಂಗ ಕೊರೆಯಲುಸಾಧ್ಯವಾಯಿತು. ಹೀಗಾಗಿ, ಮೊದಲ ನೂರು ಮೀಟರ್‌ಪಯಣ ಅನಾಯಾಸವಾಗಿ ಪೂರೈಸಿತು.ಮೂರೂ ಟಿಬಿಎಂಗಳು ಕ್ರಮವಾಗಿ ಕನಿಷ್ಠ 7ರಿಂದಗರಿಷ್ಠ 10 ತಿಂಗಳ ಅಂತರದಲ್ಲಿ ಗುರಿ ತಲುಪಲಿವೆ. ಈಮಧ್ಯೆ ಕಲ್ಲುಮಿಶ್ರಿತ ಮಣ್ಣು ಸಿಕ್ಕರೆ, ಸುರಂಗಕೊರೆಯುವ ಕಾಮಗಾರಿಗೆ ತುಸು ಹಿನ್ನಡೆ ಆಗುವಸಾಧ್ಯತೆ ಇದೆ ಎಂದು ಬೆಂಗಳೂರು ಮೆಟ್ರೋ ರೈಲುನಿಗಮ (ಬಿಎಂಆರ್‌ಸಿಎಲ್) ಹಿರಿಯ ಎಂಜಿನಿಯರ್‌ಒಬ್ಬರು ತಿಳಿಸಿದರು.
ಮತ್ತೂಂದು ಯಂತ್ರ ಸೇರ್ಪಡೆ: ಈ ನಡುವೆ ಸೌತ್‌ರ್‍ಯಾಂಪ್‌ನಲ್ಲಿ ಏ.23ರಂದು ಅಣಿಗೊಳಿಸಲಾದಟಿಬಿಎಂ (ಆರ್‌ಟಿ01) ಚೆನ್ನೆçನಲ್ಲಿ ನಿರ್ಮಾಣಗೊಂಡಿದ್ದು, ಅಫಾRನ್ಸ್ ಇನ್‌ಫ್ರಾಸ್ಟ್ರಕರ್ c ಲಿ., ಗುತ್ತಿಗೆ ಪಡೆದಿದೆ.ಶೀಘ್ರದಲ್ಲೇ ಮತ್ತೂಂದು ಯಂತ್ರವು ಸೌತ್‌ರ್‍ಯಾಂಪ್‌ನಲ್ಲಿರುವ ಶಾಫ್ಟ್ನಲ್ಲಿ ಇಳಿಯಲಿದ್ದು, ಇದು ಕೂಡಚೆನ್ನೆçನಲ್ಲಿ ತಯಾರಾಗಿದೆ.
ಅಲ್ಲಿಗೆ ಸುರಂಗ ಕೊರೆಯುವದೈತ್ಯಯಂತ್ರಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಲಿದೆಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಶಿವಾಜಿನಗರ-ಎಂ.ಜಿ. ರಸ್ತೆ ನಡುವೆ ಸುರಂಗಕೊರೆಯುತ್ತಿರುವ ಲವಿ ಹಾಗೂ ವೆಲ್ಲಾರ ಜಂಕ್ಷನ್‌ನಿಂದ ಲ್ಯಾಂಗ್‌ಫೋರ್ಡ್ ನಡುವಿನ ಆರ್‌ಟಿ01ಮಾರ್ಚ್‌ನಲ್ಲಿ ಕಾರ್ಯಾರಂಭ ಮಾಡಿದ್ದರಿಂದಇವೆರಡೂ ಕ್ರಮವಾಗಿ 65 ಮೀ. ಹಾಗೂ 75 ಮೀ.ಕೊರೆಯಲು ಮಾತ್ರ ಸಾಧ್ಯವಾಗಿದೆ.
ವಿಜಯಕುಮಾರ್ ಚಂದರಗಿ