Advertisement
ಕಡೆಗಣನೆ: ಇವನ್ನು ಹೊರತುಪಡಿಸಿದರೆ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್‌ಗಳಲ್ಲಿ ಕೋಲಾರಕ್ಕೆ ಒಂದಷ್ಟು ಯೋಜನೆಗಳನ್ನು ಪ್ರಸ್ತಾಪಿಲಾಗಿತ್ತು. ಆದರೆ ಅವು ಅನುಷ್ಠಾವಾಗಲೇ ಇಲ್ಲ. ಯಡಿ ಯೂರಪ್ಪ ಮಂಡಿಸಿದ ಬಜೆಟ್‌ನಲ್ಲಿ ಕೋಲಾರವನ್ನು ಸಂಪೂರ್ಣ ಕಡೆಗಣಿಸಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ದ್ದಕ್ಕೂ ಯಡಿಯೂರಪ್ಪ ಜಿಲ್ಲೆಯತ್ತ ಕಣ್ಣೆತ್ತಿ ನೋಡಿರಲಿಲ್ಲ.
Related Articles
Advertisement
ಉಸ್ತುವಾರಿ ಮಂತ್ರಿ ಖೋತಾ: ಜಿಲ್ಲೆಯ ಬಜೆಟ್ ನಿರೀಕ್ಷೆ ಗಳನ್ನು ಉಸ್ತುವಾರಿ ಸಚಿವರಾಗಿದ್ದವರು ಸರ್ಕಾರದ ಗಮನಕ್ಕೆ ತರುವ
ಪ್ರಯತ್ನ ಮಾಡುತ್ತಿದ್ದರು. ಈ ಹಿಂದೆ ಸಚಿವ ನಾಗೇಶ್, ಸ್ಪೀಕರ್ ರಮೇಶ್‌ಕುಮಾರ್ ಇತರರು ನೀಡಿದ್ದ ಬಜೆಟ್ ಬೇಡಿಕೆಗಳನ್ನು ಸರ್ಕಾರ ತಿರಸ್ಕರಿಸಿತ್ತು. ಇದೀಗ ಸರ್ಕಾರದಲ್ಲಿ ಪ್ರತಿನಿಧಿಯೇ ಇಲ್ಲದ ಜಿಲ್ಲೆಗೆ ಏನೆಲ್ಲವನ್ನು ಬಜೆಟ್‌ನಲ್ಲಿ ನೀಡಬಹುದು ಎಂಬ ಸಣ್ಣ ಕುತೂಹಲವಷ್ಟೇ ಉಳಿದಿದೆ.
ಈಗಿನ ಬೇಡಿಕೆಗಳೇನು?
ಕೋಲಾರ ಜಿಲ್ಲೆ ವಿಧಾನಸೌಧಕ್ಕೆ ಹತ್ತಿರವಾಗಿದೆ. ಹರಿಯುತ್ತಿರುವ ಕೆ.ಸಿ.ವ್ಯಾಲಿ ನೀರನ್ನು ಮೂರು ಬಾರಿ ಸಂಸ್ಕರಿಸಬೇಕು. ಕೆ.ಸಿ.ವ್ಯಾಲಿಯಲ್ಲಿ ಪೂರ್ಣ 400 ಎಂಎಲ್‌ಡಿ ನೀರು ಜಿಲ್ಲೆಗೆ ಹರಿಸಬೇಕು. ಎರಡನೇ ಹಂತದ ಕೆ.ಸಿ.ವ್ಯಾಲಿ ಯೋಜನೆ ಶೀಘ್ರ ಅನುಷ್ಠಾನ ವಾಗಬೇಕು. ಎತ್ತಿನಹೊಳೆ ಯೋಜನೆ ಕಾಲಮಿತಿ ಯೊಳಗೆ ಪೂರ್ಣಗೊಂಡು ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಬೇಕು. ಬರಪೀಡಿತ ಜಿಲ್ಲೆಯ ರೈತರ ಉತ್ಪನ್ನ ಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕು. ಹೈನೋ ದ್ಯಮಕ್ಕೆ ಪ್ರೋತ್ಸಾಹಕ ಯೋಜನೆಗಳನ್ನು ಘೋಷಿಸಬೇಕು.
ಸುಸಜ್ಜಿತ ಮಾರುಕಟ್ಟೆ
ಕೋಲಾರ ಜಿಲ್ಲೆಗೆ ಸುಸಜ್ಜಿತ, ಅತ್ಯಾಧುನಿಕ ಟೊಮೆ ಟೋ ಹಾಗೂ ಮಾವು ಸಂಸ್ಕರಣ ಘಟಕಗಳನ್ನು ಆರಂಭಿಸ ಬೇಕು. ಎಪಿಎಂಸಿ ಮಾರುಕಟ್ಟೆಗೆ ಅಗತ್ಯವಾದ ಜಮೀನು ನೀಡಬೇಕು.
ರೈಲು ಮಾರ್ಗ
ಕೇಂದ್ರ ಬಜೆಟ್‌ನಲ್ಲಿ ಈಗಾಗಲೇ ಘೋಷಣೆಯಾಗಿ ರುವ ರೈಲ್ವೆ ವರ್ಕ್‌ಶಾಪ್ ಸೇರಿದಂತೆ ಇನ್ನಿತರ ಹೊಸ ರೈಲು ಮಾರ್ಗಗಳ ಅಳವಡಿಕೆಗೆ ಅಗತ್ಯ ಭೂಮಿ ನೀಡಿ ಬಾಕಿ ಕಾಮಗಾರಿಗಳ ಅನುಷ್ಠಾನಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಬೇಕು.
ರಿಂಗ್ ರಸ್ತೆ
ಕಾಡಾನೆಗಳ ಉಪಟಳ ತಡೆಯಲು ಕಾರ್ಯಕ್ರಮ ಘೋಷಿಸಬೇಕು. ಸ್ಥಳೀಯ ಖಾಸಗಿ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಕೆಲಸ ಸಿಗುವಂತೆ ಉದ್ಯೋಗ ನೀತಿ ಘೋಷಿಸಬೇಕು. ಹಳ್ಳಿಯೂ ಅಲ್ಲದೆ ನಗರವೂ ಅಲ್ಲದಂ ತಿರುವ ಕೋಲಾರ ಜಿಲ್ಲಾ ಕೇಂದ್ರಕ್ಕೆ ರಿಂಗ್ ರಸ್ತೆಯನ್ನು ಮಂಜೂರು ಮಾಡಿ ಅನುಷ್ಠಾನಗೊಳಿಸಬೇಕು.
ಪ್ರವಾಸಿ ತಾಣ ಅಭಿವೃದ್ಧಿ
ಕೋಲಾರ ಜಿಲ್ಲೆಯ ಪ್ರಸಿದ್ಧ ಐತಿಹಾಸಿಕ ಪ್ರವಾಸಿ ತಾಣ ಗಳನ್ನು ಅಭಿವೃದ್ಧಿಪಡಿಸಬೇಕು. ಕ್ರೀಡಾಂಗಣ ಗಳನ್ನು ಉನ್ನತೀಕರಿಸಬೇಕು. ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆ ಟಿಕ್ ಟ್ರ್ಯಾಕ್ ಅಳವಡಿಸಿ ಕ್ರೀಡೆಗಳಿಗೆ ಉತ್ತೇಜನ ನೀಡಬೇಕು. ಹೀಗೆ ಪಟ್ಟಿ ದೊಡ್ಡದಾದಷ್ಟು ರಾಜ್ಯ ಸರ್ಕಾರಗಳು ಕೋಲಾರವನ್ನು ಕಡೆಗಣಿಸಿರುವ ಹಿನ್ನೆಲೆ ಯನ್ನು ಈ ಬಾರಿಯಾದರೂ ಕೊನೆಗಾಣಿಸಬೇಕು.
ಕೆ.ಎಸ್.ಗಣೇಶ್