Advertisement

370ನೇ ವಿಧಿ ರದ್ದು: ವಿಚಾರಣೆಗೆ ಒಪ್ಪಿಗೆ; ಸುಪ್ರೀಂ ಕೋರ್ಟ್‌

07:24 PM Dec 14, 2022 | Team Udayavani |

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ತ್ವರಿತ ವಿಚಾರಣೆ ಕುರಿತು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

Advertisement

ಈ ಬಗ್ಗೆ ಪರಿಶೀಲಿಸಿ, ದಿನಾಂಕ ನಿಗದಪಡಿಸುವುದಾಗಿ ಸಿಜೆಐ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ ಹೇಳಿತು.

ಈ ಹಿಂದೆ ಏ.25 ಮತ್ತು ಸೆ.23ರಂದು ಅಂದಿನ ಸಿಜೆಐ ಎನ್‌.ವಿ.ರಮಣ ನೇತೃತ್ವದ ಪೀಠವೂ ಈ ಅರ್ಜಿಯನ್ನು ವಿಚಾರಣೆಗೆ ಲಿಸ್ಟ್‌ ಮಾಡುವುದಾಗಿ ಹೇಳಿತ್ತು. ಅರ್ಜಿಗಳನ್ನು ಆಲಿಸಿದ್ದ ಐವರು ನ್ಯಾಯಮೂರ್ತಿಗಳ ಪೀಠದ ಭಾಗವಾಗಿದ್ದ ನಿವೃತ್ತ ಸಿಜೆಐ ರಮಣ ಅವರು ನಿವೃತ್ತರಾಗಿರುವ ಕಾರಣ, ಈಗ ಸುಪ್ರೀಂ ಕೋರ್ಟ್‌ ಪೀಠವನ್ನು ಪುನಾರಚನೆ ಮಾಡಬೇಕಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next