ನಗರದಲ್ಲಿ ಚಿತ್ರಕಲೆ ಮತ್ತು ಛಾಯಾಚಿತ್ರಗಳ ಪ್ರದರ್ಶನವನ್ನು ಒಂದೇ ಕಡೆ ಸವಿಯಲು ಅನುಕೂಲವಾಗುವ ಹಾಗೆ ಕಾರ್ಯಕ್ರಮವೊಂದು ಏರ್ಪಟ್ಟಿದೆ. ಇಲ್ಲಿ ವನ್ಯಜೀವಿ ಛಾಯಾಗ್ರಾಹಕ ಸಿ.ಆರ್. ಸತ್ಯನಾರಾಯಣ ಅವರ ಫೋಟೋಗ್ರಫಿ ಹಾಗೂ ಕಲಾವಿದ ಯಶಸ್ ವಿಶ್ವನಾಥ್‌ರ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ.
ಮುಂದಿನ ಎರಡು ದಿನಗಳ ಕಾಲ ನಡೆಯುವ ಕಲಾಪ್ರರ್ಶನವನ್ನು ಗ್ರಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕಿ ಕೇಜ್, ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ಆಶಾ ವಿಶ್ವನಾಥ್ ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ಪ್ರದರ್ಶನ ಮತ್ತು ಕಲಾಕೃತಿಗಳ ಖರೀದಿಯಿಂದ ಸಂಗ್ರಹವಾಗುವ ಹಣ ರೋಟರಿ ಆರ್ಚರ್ಡ್ಸ್‌ನ ಚೈತನ್ಯ ವೃದ್ಧಾಶ್ರಮದ ಅಭಿವೃದ್ಧಿಗೆ ಸಂದಾಯವಾಗಲಿದೆ.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ವನ್ಯಜೀವಿ ಛಾಯಾಗ್ರಾಹಕ ಸಿ.ಆರ್.ಸತ್ಯನಾರಾಯಣ, ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕದ ಗೌರವಕ್ಕೆ ಪಾತ್ರರಾದವರು. “ಫ್ರೀಜ್’ ಎಂಬ ಬ್ರ್ಯಾಂಡ್ ನೇಮ್‌ನಿಂದ ಗುರುತಿಸಿಕೊಳ್ಳುವ ಇವರು “ಚೀತಾ ಸತ್ಯ’ ಎಂದೂ ಪರಿಚಿತರು.
ಪ್ರದರ್ಶದಲ್ಲಿರುವ ಕಲಾಕೃತಿಗಳನ್ನು ರಚಿಸಿರುವ ಯಶಸ್ ವಿಶ್ವನಾಥ್ ಅವರು 4ನೇ ವಯಸ್ಸಿನಿಂದಲೇ ಕುಂಚವನ್ನು ಹಿಡಿದವರು. ಚಿತ್ರಕಲೆಯಲ್ಲಿ ಮೊದಲ ಪ್ರಶಸ್ತಿ ಪಡೆಯುವಾಗ ಈತನಿಗೆ ಕೇವಲ 4 ವರ್ಷ ವಯಸ್ಸು. ಇವರ ಅನೇಕ ಪೇಂಟಿಂಗ್‌ಗಳು ಬಹಳಷ್ಟು ಕಡೆಗಳಲ್ಲಿ ಪ್ರದರ್ಶನ ಕಂಡಿವೆ.
ಎಲ್ಲಿ?: ಅಲಾಯನ್ಸ್ ಫ್ರಾಂಸೇಸ್, ತಿಮ್ಮಯ್ಯ ರಸ್ತೆ, ವಸಂತನಗರ
ಯಾವಾಗ?: ಅಕ್ಟೋಬರ್ 28-29, ಬೆಳಿಗ್ಗೆ 10.30 – ರಾತ್ರಿ 8
ಹೆಚ್ಚಿನ ಮಾಹಿತಿಗೆ: 9902349968