Advertisement
ಕೈ ಇದ್ದವರಿಗೆಲ್ಲ ಕಲೆ ಒಲಿಯುವುದಿಲ್ಲ ಎಂಬ ಮಾತಿದೆ. ಎಲ್ಲರೂ ಕಲಾವಿದರಾಗಲು ಸಾಧ್ಯವಿಲ್ಲ ಎಂಬುದು ಆ ಮಾತಿನ ಅರ್ಥ. ಹಾಗಾದರೆ, ಕೈಗಳೇ ಇಲ್ಲದವರು ಕಲಾವಿದರಾಗಬಹುದಾ? ಕಾಲಿನಲ್ಲೋ, ಬಾಯಿಯಲ್ಲೋ ಬ್ರಷ್ ಕಚ್ಚಿಕೊಂಡು ಗೆರೆ ಎಳೆಯಲು, ಕಲ್ಪನೆಗೆ ಬಣ್ಣ ತುಂಬಲು ಸಾಧ್ಯವಾ? ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ಚಿತ್ರಕಲಾ ಪರಿಷತ್‌ಗೆ ಬನ್ನಿ.
Related Articles
Advertisement
ಜನಾರ್ದನ್ ಕೇಶವನ್: ಆಗಿನ್ನೂ ಜನಾರ್ದನ್‌ಗೆ 4 ವರ್ಷ. ಮನೆಯ ಎದುರು ಆಟವಾಡುತ್ತಿದ್ದಾಗ ಹೈಟೆನ್ಶನ್ ವಿದ್ಯುತ್ ಲೈನ್ ತಗುಲಿ, ಬಲಕೈಯನ್ನು ಭುಜದಿಂದಲೇ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಯಿತು. ಅಷ್ಟೇ ಅಲ್ಲ, ಎಡ ಕೈಯನ್ನು ಮೊಣಕೈವರೆಗೆ, ಬಲಗಾಲನ್ನು ಮಂಡಿಯವರೆಗೆ ತೆಗೆದರು. ಪುಟಾಣಿ ಜನಾರ್ದನನ ಬದುಕು ಮುಗಿದೇ ಹೋಯ್ತು ಅನ್ನುವಾಗ, ಆತ ಬಾಯಲ್ಲಿ ಬ್ರಶ್ ಹಿಡಿದು ಚಿತ್ರ ಬಿಡಿಸಲು ಆರಂಭಿಸಿದ. ಕ್ರಮೇಣ, ಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿದ. ಪ್ರಶಸ್ತಿಯನ್ನೂ ಪಡೆದ. ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡಿರುವ ಜನಾರ್ದನ್‌ಗೆ, ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ “ಬೆಸ್ಟ್ ಕ್ರಿಯೇಟಿವ್ ಚೈಲ್ಡ್ ಹಾಗೂ ಬಾಲಶ್ರೀ ಪ್ರಶಸ್ತಿ ನೀಡಿದ್ದರು.
ಬಂದೇನವಾಜ್ ನದಾಫ್: ಬಂದೇನವಾಜ್ ನದಾಫ್ರಿಗೆ ಹುಟ್ಟಿನಿಂದಲೇ ಎಡಗೈ ಇಲ್ಲ. ಕಾಲುಗಳೂ ಬಲಹೀನ. ದೇಹದ ಮೇಲ್ಭಾಗದ ಹಲವು ಅಂಗಗಳು ದೃಢವಾಗಿಲ್ಲ. ಆದರೆ, ಇವರು ಬಿಡಿಸುವ ಚಿತ್ರಗಳು ಮಾತ್ರ ಜೀವಂತಿಕೆಯಿಂದ ನಳನಳಿಸುತ್ತವೆ. ಚಿತ್ರಕಲೆಯಷ್ಟೇ ಅಲ್ಲ, ಈಜುಪಟು, ಬಾಣಸಿಗ, ತಂಬೂರಿ ವಾದಕ, ಸಂಗೀತಗಾರ, ಕರಾಟೆಯಲ್ಲಿ ಯೆಲ್ಲೊ ಬೆಲ್ಟ್… ಹೀಗೆ ಅವರ ಸಾಧನೆಯ ಪಟ್ಟಿ ದೊಡ್ಡದಿದೆ. ವಿಶೇಷ ಚೇತನರ ಮಿನಿ ಒಲಿಂಪಿಕ್ಸ್‌ನಲ್ಲಿ ನದಾಫ್ ಬಹುಮಾನಗಳನ್ನು ಗೆದ್ದಿದ್ದಾರೆ.
ಯಾವಾಗ?: ಫೆ. 22, ಶನಿವಾರ, ಸಂಜೆ 4-7ಎಲ್ಲಿ?: ಕರ್ನಾಟಕ ಚಿತ್ರಕಲಾ ಪರಿಪತ್, ಕುಮಾರಕೃಪಾ ರಸ್ತೆ
ಪ್ರವೇಶ: ಉಚಿತ