Advertisement
ಅವರು ಕಾಸರಗೋಡಿನ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಯಾದ “ರಂಗಚಿನ್ನಾರಿ ಕಾಸರಗೋಡು’ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಹಮ್ಮಿಕೊಂಡ ಹನ್ನೆರಡನೇ ವಾರ್ಷಿಕೋತ್ಸವ-ಪ್ರಶಸ್ತಿ ಪ್ರದಾನ ಸಮಾರಂಭದ ಸಮಾರೋಪ ಭಾಷಣ ಮಾಡಿದರು.
Related Articles
Advertisement
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ| ರಮಾನಂದ ಬನಾರಿ ಅವರು ಕಾಸರಗೋಡು ಪುಣ್ಯ ಭೂಮಿ ಮತ್ತು ಕರ್ಮ ಭೂಮಿ. ಇದು ಸರ್ವ ಸಮೃದ್ಧವಾದ ಸಂಸ್ಕೃತಿಯ ನೆಲ ಎಂದರು. ಚಿತ್ರ ನಟ ಶಿವಧ್ವಜ್ ಮಾತನಾಡಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಕಾಸರಗೋಡಿನಲ್ಲಿ ಕನ್ನಡತನವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಕಾಸರಗೋಡು ಚಿನ್ನಾ ಮತ್ತು ಅವರ ಬಳಗ ನಮ್ಮ ತನವನ್ನು ಉಳಿಸಿಕೊಳ್ಳಲು ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಮಕ್ಕಳ ಸಾಂಸ್ಕೃತಿಕ ಕಲರವ ಕೇಳಿಸುವಂತಾಗಿದೆ ಎಂದರು. ಯುವ ಪ್ರತಿಭೆ ಸಾತ್ವಿಕ್ ರಾಜ್ ಪಟ್ಟಾಜೆ ತನಗಿತ್ತ ಪ್ರಶಸ್ತಿಗಾಗಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹಿಂದಿ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ಸಾಹಸ ನಿದೇರ್ಶಕ ರಾಮ್ ಶೆಟ್ಟಿ, ರಂಗಚಿನ್ನಾರಿ ನಿರ್ದೇಶಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಕೆ.ಸತ್ಯನಾರಾಯಣ, ಮನೋಹರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕ ನುಡಿದು ಸ್ವಾಗತಿಸಿದರು.ಸಮಾರೋಪ ಸಮಾರಂಭಕ್ಕೆ ಮುನ್ನ ದಾಸ ಸಂಕೀರ್ತನೆ ಕಾರ್ಯಕ್ರಮವನ್ನು ಶ್ರೀ ಕೃಷ್ಣಾನುಗ್ರಹ ಪುರಸ್ಕೃತ ಜಯಾನಂದ ಕುಮಾರ್ ಹೊಸದುರ್ಗ ಅವರು ದೀಪ ಪ್ರಜ್ವಲನೆಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆ ಬಳಿಕ ವಾಮಂಜೂರು ಶ್ರೀ ಶಾಸ್ತಾವೇಶ್ವರ ಮಹಿಳಾ ಭಜನಾ ಮಂಡಳಿ, ಮುಳ್ಳೇರಿಯಾ ಹರಿಪ್ರಿಯ ಮಹಿಳಾ ಭಜನಾ ಮಂಡಳಿ, ಅಡೂರು ಶ್ರೀ ಪ್ರಿಯ ಮಹಿಳಾ ಭಜನಾ ಮಂಡಳಿ, ಆರಿಕ್ಕಾಡಿ ಶ್ರೀ ಹನುಮ ಭಕ್ತ ಭಜನಾ ಸಂಘದಿಂದ ಸಂಕೀರ್ತನೆ ನಡೆಯಿತು.
ಯುವ ಪ್ರತಿಭೆಗಳಾದ ಅಸಾವರಿ, ರಚನಾ ಮತ್ತು ಶ್ರಾವ್ಯ ಅವರಿಂದ ಕಥಕ್ ನೃತ್ಯ, ಶಂಕರ್ ಶ್ಯಾನುಭಾಗ್ ಅವರಿಂದ ಭಾವ ಸಿಂಚನ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ರಾಜೇಶ್ ಭಾಗವತ್, ಹಾರ್ಮೋನಿಯಂನಲ್ಲಿ ಸತ್ಯನಾರಾಯಣ ಐಲ ಸಹಕರಿಸಿದರು.