Advertisement
ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಗುರುವಾರ ಕನ್ನಡ ಪುಸ್ತಕ ಪ್ರಾಧಿಕಾರದ ಅನುದಾನಕ್ಕೆ ಆಯ್ಕೆಯಾಗಿ ಪ್ರಕಟಗೊಂಡ ಎಸ್.ಬಿ. ಕುಚಬಾಳ ಅವರುರಚಿಸಿದ “ತಿಳಿದು ನಡೀರಿ ಇನ್ನ’ ಎಂಬ ತತ್ವಾಧಾರಿತ ಕವನ ಸಂಕಲನ ಲೋಕಾರ್ಪಣೆ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಸಾಹಿತ್ಯ ಇಡೀ ದೇಶಕ್ಕೆ ತನ್ನದೆ ಆದ ಕೊಡುಗೆ ನೀಡಿದೆ. ಇಲ್ಲಿ ಎಂಟು ಜನ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಪಡೆದಿರುವುದರಿಂದ ಕನ್ನಡ ಅತ್ಯಂತ ಶ್ರೀಮಂತವಾಗಿದೆ ಎಂದರು.
Related Articles
Advertisement
ಕರ್ನಾಟಕ ಪುಸ್ತಕ ಪ್ರಾಧಿಕಾರದ ಸದಸ್ಯೆ ಜಯದೇವಿ ಗಾಯಕವಾಡ “ತಿಳಿದು ನಡಿರಿ ಇನ್ನ’ ಪುಸ್ತಕ ಕುರಿತು ಮಾತನಾಡಿ, ಈ ವರ್ಷ ಕರ್ನಾಟಕ ಪುಸ್ತಕ ಪ್ರಾ ಧಿಕಾರಕ್ಕೆ ದಲಿತ ಸಾಹಿತ್ಯ ಯೋಜನೆರಯಡಿ 250 ಪುಸ್ತಕಗಳು ದಾಖಲಾಗಿದ್ದವು. ಆದರೆ ಪ್ರಾಧಿಕಾರ ಕೇವಲ 50 ಪುಸ್ತಕಗಳನ್ನು ಆಯ್ಕೆ ಮಾಡಿದೆ.
ಅದರಲ್ಲಿ 20 ಪುಸ್ತಕಗಳು ಹೈದ್ರಾಬಾದ್ ಕರ್ನಾಟಕಕ್ಕೆ ಸಂಬಂಧಿಸಿದ್ದಾಗಿದ್ದರಿಂದಲೇ ಈ ಭಾಗದ ಸಾಹಿತ್ಯಲೋಕ ಶ್ರೀಮಂತಗೊಳ್ಳಲು ಕಾರಣವಾಗಿದೆ. ಬೀದರ್ ಜಿಲ್ಲೆಯಿಂದ ಕುಚಬಾಳ ಅವರು ಬರೆದ “ತಿಳಿದು ನಡಿರಿ ಇನ್ನ’ ಹಾಗೂ ಈಶ್ವರ ತಡೋಳಾ ಅವರು ಬರೆದ “ಸಮತೆಯ ಹಾಡು’ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ತಜ್ಞ ಸಮಿತಿ ಸದಸ್ಯ ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, ಸಾಹಿತ್ಯ ರಚನೆ ಹಾಗೂ ಪುಸ್ತಕ ಓದುವಿಕೆಯಿಂದ ಜ್ಞಾನ ವಿಕಾಸವಾಗುತ್ತದೆ. ಇಲ್ಲಿಯ ಪಶು ವಿಶ್ವವಿದ್ಯಾಲಯದಲ್ಲಿ ಕನ್ನಡ ಪುಸ್ತಕ ಅಧ್ಯಯನ ಕೇಂದ್ರ ಸ್ಥಾಪಿಸಬೇಕು ಹಾಗೂ ವಿವಿಧ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಲ್ಲಿ ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.
ಹಿರೇಮಠ ಸಂಸ್ಥಾನದ ಡಾ| ರಾಜಶೇಖರ ಶಿವಾಚಾರ್ಯರು, ಪರಿಷತ್ ಕಾರ್ಯದರ್ಶಿ ಡಾ| ರಾಜಕುಮಾರ ಹೆಬ್ಟಾಳೆ, ಎಸ್.ಬಿ. ಕುಚಬಾಳ, ಲುಂಬಿಣಿ ಗೌತಮ, ಪ್ರೊ| ಎಸ್.ಬಿ. ಬಿರಾದಾರ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಡಾ| ಧನಲಕ್ಷ್ಮೀ ಪಾಟೀಲ, ರಮೇಶ ಕೊಳಾರ, ಲಕ್ಷ್ಮಣರಾವ್ ಕಾಂಚೆ, ವೀರಣ್ಣ ಕುಂಬಾರ, ನಿಜಲಿಂಗಪ್ಪ ತಗಾರೆ, ಸುನಿತಾ ಕುಡ್ಲಿಕರ್, ಪ್ರಕಾಶ ಕನ್ನಾಳೆ ಇನ್ನಿತರರು ಇದ್ದರು. ಅಖೀಲ ಭಾರತ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ತು ನವದೆಹಲಿ, ಕರ್ನಾಟಕ ಸಾಹಿತ್ಯ ಸಂಘ ಮತ್ತು ಕರ್ನಾಟಕ ಜಾನಪದ ಪರಿಷತ್ತು ಹಾಗೂ ತಾಲೂಕು ಘಟಕಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.