Advertisement

ಪರಿಸರ ಸಂರಕ್ಷಣೆ ಪಾಠ ಹೇಳಲಿವೆ ಕಲಾಕೃತಿಗಳು

12:40 AM Sep 23, 2019 | Lakshmi GovindaRaju |

ಬೆಂಗಳೂರು: ಮಾನವನ ದುರಾಸೆ, ಅಧುನಿಕರಣ, ನಗರೀಕರಣದಂತಹ ದಾಳಿಗೆ ತುತ್ತಾಗಿ ನಾಶವಾಗುತ್ತಿರುವ ಪರಿಸರ ಜಾಗೃತಿ ಮೂಡಿಸಲು ನಗರದಲ್ಲಿ ಈಗ ಸ್ವತಃ ಪ್ರಕೃತಿ ದೇವರು ಅವತರಿಸಲಿದ್ದಾರೆ. ಮನುಷ್ಯ ಪ್ರಕೃತಿ ಮೇಲೆ ನಿರಂತರವಾಗಿ ನಡೆಸುತ್ತಿರುವ ದಾಳಿಯಿಂದ ನೆರೆ ಮತ್ತು ಬರದಂತಹ ಪ್ರಕೃತಿ ವಿಕೋಪಗಳು ಎದುರಾಗುತ್ತಿವೆ. ಜಲ ಮತ್ತು ಅರಣ್ಯ ಸಂಪತ್ತು ಉಳಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ.

Advertisement

ಈ ಹಿನ್ನೆಲೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಸುಮಾರು 29 ಅಡಿ ಎತ್ತರದ ಪ್ರಕೃತಿ ದೇವರ ಪ್ರತಿಮೆಯನ್ನು ಸೌತ್‌ ಎಂಡ್‌ ವೃತ್ತದ “ಪ್ರಕೃತಿವನ’ ಉದ್ಯಾನದಲ್ಲಿ ನಿರ್ಮಿಸುತ್ತಿದೆ. ಈ ಪ್ರತಿಮೆಯ ಕಿವಿ ಮೇಲ್ಭಾಗದಲ್ಲಿ ಜಲಧಾರೆ ಹರಿಯಲಿದೆ. ಇದು ಆಕರ್ಷಣಿಯ ಕೇಂದ್ರ ಬಿಂದು ಮಾತ್ರವಲ್ಲ. ಜನರಿಗೆ ಸಂದೇಶ ನೀಡುವ ಪ್ರತಿಮೆಯಾಗಿದೆ. ಈಗಾಗಲೇ ಶೇ. 95ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಜನರ ವೀಕ್ಷಣೆಗೆ ಅನಾವರಣಗೊಳ್ಳಲಿದೆ.

ಉದ್ಯಾನಕ್ಕೆ ಸಾಮಾನ್ಯವಾಗಿ ಮಕ್ಕಳು, ಮಹಿಳೆಯರು ಹೆಚ್ಚಾಗಿ ಭೇಟಿ ನೀಡುತ್ತಾರೆ. ಹೀಗೆ ಉದ್ಯಾನವನಕ್ಕೆ ಬೇಟಿ ನೀಡುವ ಎಲ್ಲರಿಗೂ ಈ ಕಲಾಕೃತಿ, ಪರಿಸರ ರಕ್ಷಣೆ ಕುರಿತ ಜಾಗೃತಿ ಮೂಡಿಸಲಿದೆ. ನಮ್ಮ ಸುತ್ತಲಿನ ಪರಿಸರ, ನೀರು, ಅರಣ್ಯ ಸಂಪತ್ತನ್ನು ರಕ್ಷಣೆ ಮಾಡುವ ಉದ್ದೇಶದಿಂದಲೇ ಪಾಲಿಕೆ ಇಂತಹ ಸತ್ಕಾರ್ಯಕ್ಕೆ ಕೈಹಾಕಿದೆ. ಸುಮಾರು 50 ಗುಂಟೆ ವಿಸ್ತೀರ್ಣದ ಪ್ರಕೃತಿ ವನದಲ್ಲಿ ಪ್ರಕೃತಿ ದೇವರ ಕಲಾಕೃತಿಗಳು ನಳನಳಿಸಲಿವೆ.

ಜತೆಗೆ ಮುಂದಿನ ಪೀಳಿಗೆಯವರಿಗೆ ಪ್ರಕೃತಿ ಸಂಪತ್ತನ್ನು ರಕ್ಷಿಸುವ ಪಾಠಗಳನ್ನು ಹೇಳಲಿವೆ. ಜತಗೆ “ನಮ್ಮನ್ನು ಉಳಿಸಿ, ನೀವು ಉಳಿಯಿರಿ, “ಮರ ಕಡಿಯಬೇಡಿ’ ಎಂದು ಸಂದೇಶ ಸಾರಲಿವೆ. ಇದರೊಂದಿಗೆ ಉದ್ಯಾನವನದಲ್ಲಿ 18 ಬಣ್ಣದ ಹೂವಿನ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ. ಪಾಲಿಕೆ 1.75 ಕೋಟಿ ರೂ. ವೆಚ್ಚದಲ್ಲಿ ಜನವರಿಯಿಂದ ಕಾಮಗಾರಿ ಆರಂಭಿಸಿದ್ದು, ಅಕ್ಟೋಬರ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಪ್ರಕೃತಿ ನಾಶ ಮಾಡಿದರೆ ಜಗತ್ತು ಯಾವ ರೀತಿ ಇರುತ್ತದೆ. ಪ್ರಕೃತಿ ಉಳಿಸಿದರೆ ಜಗತ್ತು ಹೇಗಿರಲಿದೆ ಎಂಬ 2 ದೃಷ್ಟಾಂತಗಳನ್ನು ವೃತ್ತಾಕಾರದ ಕಲಾಚಿತ್ರವೊಂದು ಕಟ್ಟಿಕೊಡುತ್ತದೆ. ಇದರಲ್ಲಿ ಒಂದು ಭಾಗ ಪ್ರಕೃತಿ ನಾಶದಿಂದ ಅನುಭವಿಸಬೇಕಾದ ಸಮಸ್ಯೆಗಳನ್ನು, ಇನ್ನೊಂದು ಭಾಗದಲ್ಲಿ ಸಂರಕ್ಷಣೆಯಿಂದ ಮನುಷ್ಯನಿಗೆ ಏನೆಲ್ಲ ಉಪಯೋಗ ಎಂಬುದನ್ನು ಚಿತ್ರಗಳಲ್ಲಿಯೇ ಮಾಹಿತಿ ನೀಡಲಾಗಿದೆ. ಇದು ಮಕ್ಕಳನ್ನು ಆಕರ್ಷಿಸಲಿದ್ದು, ಮನಸ್ಸಿನ ಮೇಲೆ ನೇರ ಪರಿಣಾಮ ಬೀರಲಿದೆ.

Advertisement

ಬಿಬಿಎಂಪಿ ಜನರಿಗೆ ಪ್ರಕೃತಿ ಬಗ್ಗೆ ಧ್ವನಿವರ್ಧಕ, ಜಾಥಾ, ಕಾರ್ಯಕ್ರಮ, ಜಾಹೀರಾತು ಮೂಲಕ ಜಾಗೃತಿ ಮೂಡಿಸುತ್ತಿದ್ದು, ಹೊಸ ರೀತಿ ಮತ್ತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಪ್ರಕೃತಿ ದೇವನನ್ನು ಸೃಷ್ಟಿಸಲಾಯಿತು. ಇದಕ್ಕಾಗಿ ಒಂದು ವರ್ಷ ಸಮಯ ಬೇಕಾಯಿತು. ಪ್ರಕೃತಿ, ಜಲ ಮತ್ತು ಅರಣ್ಯ ಸಂಪತ್ತು ನಾಶ ಮಾಡಿದರೆ ಮನುಷ್ಯ ಕುಲ ವಿನಾಶದತ್ತ ಹೋಗುತ್ತದೆ. ಗಣಿಗಾರಿಕೆ ಮಾಡಿ ಪ್ರಕೃತಿ ಮೇಲೆ ದಾಳಿ ಮಾಡಬಾರದು. ಮುಂದಿನ ಪೀಳಿಗೆಗೆ ಅರಣ್ಯ ಸಂಪತ್ತು ಉಳಿಸಬೇಕು ಎಂಬ ಪರಿಕಲ್ಪನೆ ಇಟ್ಟುಕೊಂಡು ಕಲಾಕೃತಿ ನಿರ್ಮಿಸಲಾಗುತ್ತಿದೆ ಎನ್ನುತ್ತಾರೆ ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್‌.

18 ತಳಿಯ ಗಿಡಗಳು: ಸೆಸ್ಟ್ರಮ್‌ ಡೈಯನಮ್‌, ಡೆಸ್ಮೋಡಿಯಂ ಪಲ್ಚೆಲಮ್‌, ಸೀಯೋಲಾ ಟಕಾಡಾ, ಸೆಸ್ಟ್ರಮ್‌ ಎಲಿಗೆನ್ಸ್‌, ಕ್ಯಾಸಿಯಾ ಅಲಾಟಾ, ವಿಟೆಕ್ಸ್‌ ಟ್ರೈಫೋಲಿಯಾ, ಲೀ ಇಂಡಿಕಾ, ಜೆಂಡುರಸ್ಸಾ ವೋಲಾರೀಸ್‌(ಗ್ರೀನ್‌), ಸೆಂಟ್ರಾ ಥೆರಮ್‌ ಪಂಕ್ಟಾಟಮ್‌ ಸೇರಿದಂತೆ 18 ವಿವಿಧ ತಳಿಯ ಹೂವಿನ ಗಿಡಗಳನ್ನು ಪ್ರಕೃತಿವನದಲ್ಲಿ ನೆಡಲಾಗುತ್ತಿದೆ. ಈ ಗಿಡಗಳ ಹೂವುಗಳು ವಿಭಿನ್ನವಾಗಿರಲಿದ್ದು, ಜನರನ್ನು ಹೂವಿನ ಗಿಡ ಬೆಳೆಸಲು ಉತ್ತೇಜಿಸಲಿದೆ.

* ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next