ಕಲೆಯೆನ್ನುವುದು ಎಲ್ಲರಿಗೂ ಒಲಿಯುವಂತದ್ದಲ್ಲ. ಅಂತೆಯೇ ಒಲಿದು ಬರುವ ಕಲೆಯನ್ನು ಉಳಿಸಿಕೊಳ್ಳುವುದು ಕೂಡ ಒಂದು ಸಾಹಸ. ಅದಕ್ಕೆ ಶ್ರದ್ಧೆ, ಭಕ್ತಿ ಮತ್ತು ಪ್ರೀತಿ ಅಗತ್ಯವಾಗಿರುತ್ತದೆ. ಅಂತಹ ಕಲಾ ನೃತ್ಯ ಪ್ರಕಾರಗಳಲ್ಲಿ ನೃತ್ಯ ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಶಾಲೆ, ಕಾಲೇಜುಗಳಲ್ಲಿ ನೃತ್ಯಕ್ಕಾಗಿಯೇ ತರಗತಿಗಳನ್ನು ಆರಂಭಿಸುತ್ತಿದ್ದು, ಇದು ನೃತ್ಯ ಕಲೆಗೆ ವಿಶೇಷ ಮನ್ನಣೆ ನೀಡುವಲ್ಲಿ ಮುನ್ನುಡಿಯಾಗುತ್ತಿದೆ.
ಇತಿಹಾಸ:
1982ರಲ್ಲಿ ಇಂಟರ್‌ನ್ಯಾಶನಲ್ ಥಿಯೇಟರ್ ಇನ್‌ಸ್ಟಿಟ್ಯೂಟ್ (ಐಟಿಐ) ನ ಡ್ಯಾನ್ಸ್ ಕಮಿಟಿ ಅಂತಾರಾಷ್ಟ್ರೀಯ ಡ್ಯಾನ್ಸ್ ಡೇ (ನೃತ್ಯ ದಿನ) ಅನ್ನು ಪ್ರತಿವರ್ಷ ಎಪ್ರಿಲ್ 29ರಂದು ಆಧುನಿಕ ಬ್ಯಾಲೆ ಸೃಷ್ಟಿಕರ್ತ ಜೀನ್‌ಜಾರ್ಜಸ್ ನೊವೆರ್ರಿಯಾ ಜನ್ಮದಿನದ ಅಂಗವಾಗಿ ಆಚರಿಸಲು ಆರಂಭಿಸಿತು. ಐಟಿಐ ಡ್ಯಾನ್ಸ್ ಕಮಿಟಿ ಮತ್ತು ಯುನೆಸ್ಕೋ ಈ ದಿನವನ್ನು ಜಾಗತಿಕವಾಗಿ ಆಚರಿಸುತ್ತಿದೆ.
ಉದ್ದೇಶ:
ಪ್ರಪಂಚದ್ಯಾಂತ ಎಲ್ಲರೂ ನೃತ್ಯ, ಉತ್ಸವದಲ್ಲಿ ಪಾಲ್ಗೊಳ್ಳಬೇಕು, ರಾಜಕೀಯ, ಸಾಂಸ್ಕೃತಿಕ ಹಾಗೂ ಜನಾಂಗೀಯ ಅಡೆತಡೆಗಳನ್ನು ದಾಟಿ ಸಾಮಾನ್ಯ ಭಾಷೆಯೊಂದಿಗೆ ಜನರನ್ನು ಒಟ್ಟು ಸೇರಿಸಬೇಕು, ನೃತ್ಯಕ್ಕೆ ಸಾರ್ವತ್ರಿಕ ಮನ್ನಣೆ ನೀಡಬೇಕು ಎಂಬುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ. ಪ್ರತಿವರ್ಷ ವಿಶ್ವ ಡ್ಯಾನ್ಸ್ ಅಲೈಯನ್ಸ್ ಜತೆಗೆ ಐಟಿಐ ಮತ್ತು ಡ್ಯಾನ್ಸ್ ಕಮಿಟಿ ಪ್ಯಾರಿಸ್‌ನ ಯುನೆಸ್ಕೋದಲ್ಲಿ ಅಂತಾರಾಷ್ಟ್ರೀಯ ನೃತ್ಯದಿನವನ್ನು ನೃತ್ಯ ನಿರ್ದೇಶಕ ಅಥವಾ ನರ್ತಕನ ಸಂದೇಶದೊಂದಿಗೆ ಆಚರಿಸುತ್ತದೆ.
ಡ್ಯಾನ್ಸ್ ಸಮಿತಿ (ಐಡಿಸಿ):
ಅಂತಾರಾಷ್ಟ್ರೀಯ ಉತ್ಸವಗಳಿಗೆ ಪ್ರೋತ್ಸಾಹ ನೀಡಲು ಮತ್ತು ಯುವ ವೃತ್ತಿಪರರಿಗೆ ಕಾರ್ಯಾಗಾರಗಳ ಮೂಲಕ ನೃತ್ಯದ ಬಗ್ಗೆ ತಿಳಿಸಲು ಐಡಿಸಿ ಹುಟ್ಟಿಕೊಂಡಿದೆ. ದೇಶಾದ್ಯಂತ ಇರುವ ನೃತ್ಯ ಸಮುದಾಯಗಳಿಗೆ ಸಂಬಂಧಪಟ್ಟ ಅಂತಾರಾಷ್ಟ್ರೀಯ ಸಂದೇಶವನ್ನು ನೀಡುವುದು ಇದರ ಉದ್ದೇಶವಾಗಿದೆ.
ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಪ್ರತಿ ವರ್ಷ ಒಂದು ಸಂದೇಶದೊಂದಿಗೆ ಆಚರಿಸುತ್ತಿದ್ದು 2019ಕ್ಕೆ ‘ನೃತ್ಯ ಮತ್ತು ಆಧ್ಯಾತ್ಮಿಕತೆ’ ಎಂಬ ಸಂದೇಶವನ್ನು ನೀಡಲಾಗಿದ್ದು ಪ್ರಪಂಚದಾದ್ಯಂತ ನಡೆಯುವ ನೃತ್ಯ ಪ್ರಕಾರಗಳನ್ನು ಹೊಸ ರೀತಿಯಲ್ಲಿ ಪ್ರಸ್ತುತ ಪಡಿಸುವುದು ಇದರ ಉದ್ದೇಶವಾಗಿದೆ.
ವಿಶೇಷ ಥೀಮ್:
ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಪ್ರತಿ ವರ್ಷ ಒಂದು ಸಂದೇಶದೊಂದಿಗೆ ಆಚರಿಸುತ್ತಿದ್ದು 2019ಕ್ಕೆ ‘ನೃತ್ಯ ಮತ್ತು ಆಧ್ಯಾತ್ಮಿಕತೆ’ ಎಂಬ ಸಂದೇಶವನ್ನು ನೀಡಲಾಗಿದ್ದು ಪ್ರಪಂಚದಾದ್ಯಂತ ನಡೆಯುವ ನೃತ್ಯ ಪ್ರಕಾರಗಳನ್ನು ಹೊಸ ರೀತಿಯಲ್ಲಿ ಪ್ರಸ್ತುತ ಪಡಿಸುವುದು ಇದರ ಉದ್ದೇಶವಾಗಿದೆ.
•ಪ್ರೀತಿ ಭಟ್ ಗುಣವಂತೆ