Advertisement
ಜೋಗತಿ ನೃತ್ಯ ಪರಂಪರೆಯ ಉಳಿವಿಗೆ ಹೋರಾಡಿದ ಆಕೆಯ ಸಾಧನೆಯ ಹಿಂದೆ ಕಲ್ಲು ಮುಳ್ಳುಗಳ ಹಾದಿಯಿದೆ. ಮಂಜುನಾಥ ಶೆಟ್ಟಿ,ಮಂಜಮ್ಮ ಜೋಗತಿಯಾದ ಕಥನವೇ ಸೋಜಿಗದ್ದು. ಮಂಗಳಮುಖೀಯೆಂದು ಧೈರ್ಯದಿಂದ ಬದುಕುಕಟ್ಟಿಕೊಂಡ ಮಂಜಮ್ಮ, ನನಗೆ ಆತ್ಮವಿಶ್ವಾಸವಿದೆ. ಮುಂದೊಂದು ದಿನ ಈ ಮಂಗಳಮುಖಿಯೂ ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರಂತೆ ಗೌರವಯುತವಾದ ದಾರಿಯಲ್ಲಿಯೇ ಮುನ್ನಡೆಯುತ್ತಾಳೆ ಎಂದು ತನ್ನ 17ನೇ ವಯಸ್ಸಿನಲ್ಲೇ ಭವಿಷ್ಯ ನುಡಿದಿದ್ದರು.
Related Articles
Advertisement
ಮಾಡಿದರು. ಆಸ್ಪತ್ರೆಯ ವಾರ್ಡನ್, ರೋಗಿಗಳು ಖುಷಿಯಾಗಿ ಹತ್ತಿಪ್ಪತ್ತು ಪೈಸೆ ಭಿಕ್ಷೆ ಹಾಕಿದರು. ತಪ್ಪೋ ಒಪ್ಪೋ ಕುಣಿದರೆ ಹೊಟ್ಟೆ ತುಂಬುತ್ತದೆ ಎಂಬ ಭಾವ ಬಲಿತು ಬಂತು, ಕಾಲಿಗೆ ಗೆಜ್ಜೆ ಕಟ್ಟಿದರು.
ಗುರುವಾಗಿ ಉಡಿತುಂಬಿದ ಕಾಳವ್ವ :
ಕೊಡ ಹೊತ್ತು ಕುಣಿದರೆ ಹೊಟ್ಟೆ ತುಂಬುವುದಿಲ್ಲ ಅನ್ನಿಸಿದಾಗ ಇಡ್ಲಿ ಮಾರಿಯಾಯಿತು. ಟ್ಯೂಶನ್‌ಹೇಳಿಯಾಯಿತು. ದೇವರ ಗುಡಿ ಸಾರಿಸಿ, ದೀಪ ಹಚ್ಚಿ ನೈವೇದ್ಯ ಸಿಗುವುದೆಂದು ಕಾದಿದ್ದೂ ಆಯಿತು. ಒಂದು ದಿನದ ಊಟಕ್ಕೂ ಗತಿ ಇಲ್ಲವಾದಾಗ ಆಸರೆಗೆ ಸಿಕ್ಕಿದ್ದು, ಮರಿಯಮ್ಮನ ಹಳ್ಳಿಯ ಕಾಳವ್ವ ಜೋಗತಿ,
ಆಕೆ ಜಾನಪದ ಜೋಗತಿ ನೃತ್ಯದ ರೇಣುಕಾ ಯಲ್ಲಮ್ಮ ಕಥನ ಗೀತದ ಪ್ರಸಿದ್ಧ ಕಲಾವಿದೆ. ತನ್ನ ನಂತರ ಈ ಕಲೆಯನ್ನು ಉಳಿಸಿ ಬೆಳೆಸುವಉತ್ತರಾಧಿಕಾರಿಗೆ ಹುಡುಕುತ್ತಿರುವಾಗಲೇ ಮಂಜಮ್ಮಜೋಗತಿ ನೃತ್ಯ ಕಂಡು ಮನೆಗೆ ಕರೆದುಕೊಂಡು ಹೋದಳು.
ಕಲಿಯುವ, ಸಾಧಿಸುವ ಹಂಬಲ:
ಜಾತ್ರೆ ಉತ್ಸವ, ಹಬ್ಬ, ಸಮ್ಮೇಳನ, ಸಮಾವೇಶ.. ಎಲ್ಲೇ ಇದ್ದರೂ ಎಲ್ಲಮ್ಮನ ಕೊಡ ಹೊತ್ತು ಕೈ ಬಿಟ್ಟು ಕುಣಿದು ಜಾನಪದ ಜೋಗತಿಯ ಕಲೆ ಕರಗತಮಾಡಿಕೊಂಡರು. ಸುಮಧುರವಾಗಿ ಹಾಡುವಜಾನಪದ ಚೌಡಕಿ ಪದಗಳು ಜನಮನಸೂರೆಗೊಂಡವು. ಎಲ್ಲಮ್ಮನ ಚರಿತೆಗೆ ಜಾನಪದನಾಟಕ ರೂಪ ಕೊಟ್ಟು ನಿರ್ದೇಶಿಸಿದ್ದು, ಮಂಜಮ್ಮ ಜೋಗತಿಯೇ. ರೇಣುಕಾ ಪಾತ್ರ, ಗೌಡಶಾನಿ, ಕಾಮಧೇನು, ಪರಶುರಾಮ ಪಾತ್ರ ನಿರ್ವಹಣೆಹೆಸರು ತಂದಿವೆ. ಈಚೆಗಷ್ಟೇ ಮಂಜಮ್ಮಜೋಗತಿಯವರ ಆತ್ಮಕಥೆ ಕುರಿತು ಎರ ಡು ಪುಸ್ತಕಗಳು ಪ್ರಕಟವಾಗಿವೆ. ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ರಾಜ್ಯದ ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿಗಳು ಮಂಜಮ್ಮ ಅವರಿಗೆ ಒಲಿದುಬಂದಿವೆ.
ರಂಗಭೂಮಿ ಕಲಾವಿದೆ …
ಮಂಗಳಮುಖಿ, ದೇವಿಯ ಪಾತ್ರ ನಿರ್ವಹಿಸಬಾರದೆಂದು ಗೌಡರಹಳ್ಳಿಯಲ್ಲಿ ಅಪಮಾನ ಮಾಡುತ್ತಾರೆ. ಆಗ ಮರಿಯಮ್ಮನಳ್ಳಿ ರಂಗ ಕಲಾವಿದೆ ಡಾ. ನಾಗರತ್ನಮ್ಮ, ಮೋಹಿನಿ ಭಸ್ಮಾಸುರದಲ್ಲಿಮಂಜ ಮ್ಮ ನಿಂದ, ಭಸ್ಮಾಸುರನ ಪಾತ್ರ ಮಾಡಿಸಿದರು. ಅದೇ ಮಂಗಳಮುಖೀಯರ ರಂಗ ಪ್ರವೇಶಕ್ಕೆ ಮುನ್ನುಡಿ. ಪೌರಾಣಿಕ ಪಾತ್ರಗಳಾದ ಕೀಚಕ, ಭಸ್ಮಾಸುರ,ತಾರಾಸುರ, ಬಯಲಾಟದ ಪಾತ್ರಗಳಲ್ಲಿ ಮಂಜಮ್ಮ ವೇಷ ತೊಟ್ಟರೆ ಇಡೀರಂಗಸ್ಥಳವೇ ನಡುಗುತ್ತದೆ. ಭಿಕ್ಷೆ, ಲೈಂಗಿಕ ವೃತ್ತಿಯನ್ನು ತೊರೆದು ಸಾಂಸ್ಕೃತಿಕ ಹಾದಿಯಲ್ಲಿ ಬದುಕು ಕಟ್ಟಿಕೊಳ್ಳಲು ಸಿದ್ಧವಿದ್ಧ 15-20 ಮಂಗಳಮುಖಿಯರೊಳಗೊಂಡ ರಂಗ ತಂಡ ಕಟ್ಟಿದ್ದಾರೆ ಮಂಜಮ್ಮ.
–ವಿದ್ಯಾಶ್ರೀ ಗಾಣಿಗೇರ, ವಿಜಯಪುರ