Advertisement

ಶ್ರದ್ದೆಯಿಂದ ಮಾತ್ರ ಕಲೆ ಅನಾವರಣ

08:24 PM Jan 08, 2022 | Team Udayavani |

ಕಲಬುರಗಿ: ಚಿತ್ರಕಲೆ ಸುಲಭವಾಗಿ ಯಾರಿಗೂ ಒಗ್ಗುವಂತದ್ದಲ್ಲ. ಅತ್ಯಂತ ಸೂಕ್ಷ್ಮ, ಧ್ಯಾನ, ಶ್ರದ್ಧೆಯಿಂದ ಮಾತ್ರ ಕಲೆ ಅನಾವರಣ ಸಾಧ್ಯ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಶರಣಪ್ಪ ಮುಳೆಗಾಂವ ಹೇಳಿದರು.

Advertisement

ನಗರದ ಮಾತೋಶ್ರೀ ನೀಲಗಂಗಮ್ಮ ಜಿ. ಅಂದಾನಿ ಆರ್ಟ್‌ ಗ್ಯಾಲರಿಯಲ್ಲಿ ಶುಕ್ರವಾರ ಸಮೂಹ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಕಲೆಯಲ್ಲೂ ಸ್ವದೇಶಿ ಕಲ್ಪನೆಯನ್ನು ನಾವು ಕಾಣಬಹುದು. ತನ್ನಲ್ಲಿರುವ ಕಲೆಯ ಜ್ಞಾನವನ್ನು ಕಲಾವಿದ ಹಂಚಿಕೊಳ್ಳಬೇಕು ಎಂದರು. ಸಂಗೀತ, ಕ್ರೀಡೆ, ಚಿತ್ರಕಲೆ ಅರ್ಥೈಸಿಕೊಳ್ಳುವುದು ಕಷ್ಟ. ಈ ಬಗ್ಗೆ ವಿಮರ್ಶೆ ಮಾಡುವವರು, ಮಾತನಾಡುವವರ ಅಗತ್ಯವಿದೆ. ಚಿತ್ರಕಲಾ ಕ್ಷೇತ್ರದಲ್ಲಿ ವಿಮರ್ಶಕರು ತಯಾರಾಗಬೇಕು. ಹೊಗಳಿಕೆ, ತೆಗಳಿಕೆ ಏನೇ ಇರಲಿ. ಕಲೆ ಬಗ್ಗೆ ಮಾತನಾಡುವವ ಅಗತ್ಯವಿದೆ. ವಿಮರ್ಶಕರಿಲ್ಲದೇ ನಮ್ಮ ಭಾಗದ ತತ್ವಪದಗಳು ಖ್ಯಾತಿಯಾಗಲಿಲ್ಲ.

ಪ್ರಸ್ತುತ ಕಲೆಯೂ ವಿಮರ್ಶಕರಿಲ್ಲದೆ ಬಡವಾಗಬಾರದು ಎಂದರು. ಖ್ಯಾತ ಕಲಾವಿದ ಡಾ| ವಿ.ಜಿ.ಅಂದಾನಿ ಮಾತನಾಡಿ, ಕಲೆಗಾರರು ನಿಜವಾದ ಚಿಂತಕರು. ಚಿತ್ರಕಲೆಯಲ್ಲಿ ವಿಚಾರವಂತಿಕೆ ಇದ್ದಾಗ ಮಾತ್ರ ಅದ್ಭುತ ಸೃಷ್ಟಿ ಸಾಧ್ಯ. ವಿಭಿನ್ನ ಕಾಲಘಟ್ಟದಲ್ಲಿ ಹಲವು ಶೈಲಿಗಳು ಹುಟ್ಟುತ್ತವೆ. ಯುವ ಕಲಾವಿದ ಪ್ರಯತ್ನ ಶ್ಲಾಘನೀಯ ಎಂದರು. ಕಲಾವಿದರು ಮತ್ತು ಪ್ರಮುಖರಾದ ವಿಜಯಕುಮಾರ, ಅರವಿಂದ ಕಾಂಬಳೆ, ಸಂಗಪ್ಪ ನಾಗೂರೆ, ನಿಂಗಣ್ಣಗೌಡ ಪಾಟೀಲ, ಸಂತೋಷ ಚಿಕ್ಕಣ್ಣ, ಕಾವೇರಿ ಪೂಜಾರ, ಗಂಗಮ್ಮ ವಾಲಿಕಾರ, ಪ್ರಶಾಂತ ಜಿ, ಅಮೀನ್‌ ರೆಡ್ಡಿ ರಾಯಚೂರು, ಜಲಜಾಕ್ಷಿ ಕುಲಕರ್ಣಿ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next