ಉಡುಪಿ: ಧರ್ಮ, ರಾಜಕೀಯಕ್ಕಿಂತ ಕಲೆ ದೊಡ್ಡದು. ಕಲೆ ಸಂವಾದವನ್ನು ಹುಟ್ಟಿಸುತ್ತದೆ ಮತ್ತು ನಾಟಕ, ಸಾಹಿತ್ಯ, ಸಿನೆಮಾದಿಂದ ಇದು ಸಾಧ್ಯ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ಸೋಮವಾರ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ಸಂಸ್ಕೃತಿ ಉತ್ಸವದಲ್ಲಿ “ವಿಶ್ವಪ್ರಭಾ ಪುರಸ್ಕಾರ’ ಸ್ವೀಕರಿಸಿ ಮಾತನಾಡಿದರು.
ವಾದ ಮಾಡುವುದರಿಂದ ಸಾಮಾ ಜಿಕ ತಲ್ಲಣಗಳಿಗೆ ಉತ್ತರ ಸಿಗುವುದಿಲ್ಲ. ಚರ್ಚೆ ಮತ್ತು ಸಂವಾದದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯ. ಮನುಷ್ಯ ಮೂಲತಃ ಕ್ರೂರಿಯಲ್ಲ ಸಂದರ್ಭ ಆತನನ್ನು ಕ್ರೂರಿಯಾಗಿಸುತ್ತದೆ. ಆ ಸಂದರ್ಭವೇ ಮನುಷ್ಯ ಕ್ರೌರ್ಯದ ಜೀವಾಳವಾಗಿದೆ. ಸಂದರ್ಭಗಳ ಹಿನ್ನೆಲೆ ಗಮನಿಸಿ ಸಂವಾದ ನಡೆಯಬೇಕಿದೆ ಎಂದು ವಿಶ್ಲೇಷಿಸಿದರು.
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ, ಕಲೆ ಮತ್ತು ಸಂಸ್ಕೃತಿ ಜೀವನಕ್ಕೆ ಅನಿವಾರ್ಯ. ಕಲೆಯಲ್ಲಿ ತೊಡಗಿಸಿಕೊಂಡರೆ ಅದು ನಮ್ಮನ್ನು ಬೆಳೆಸುತ್ತದೆ ಎಂದರು.
ಇದನ್ನೂ ಓದಿ:ದೇಶದ ಹೊಸ ಸ್ಟಾರ್ಟ್‌ಅಪ್ ಕ್ಯಾಪಿಟಲ್ ಆಗಿ ಹೊರಹೊಮ್ಮಿದ ನವದೆಹಲಿ !
ಉದ್ಯಮಿ ರಘುವೀರ್ ಶೆಣೈ, ಎಂಜಿಎಂ ಪ್ರಾಂಶುಪಾಲ ಡಾ| ದೇವಿದಾಸ್ ನಾಯ್ಕ, ಪ್ರತಿ ಷ್ಠಾನದ ಗೌರವ ಅಧ್ಯಕ್ಷ ವಿಶ್ವನಾಥ್ ಶೆಣೈ, ಪ್ರಭಾವತಿ ದಂಪತಿ, ಸಮಿತಿ ಸಂಚಾಲಕ ಮರವಂತೆ ನಾಗರಾಜ್ ಹೆಬ್ಟಾರ್ ಉಪಸ್ಥಿತರಿದ್ದರು. ಯಕ್ಷಗಾನ ಆಕಾಡೆಮಿ ಸದಸ್ಯ ರಮೇಶ್ ಬೇಗಾರು ಅಭಿನಂದನ ಭಾಷಣ ನೆರವೇರಿಸಿದರು. ಶಿಲ್ಪಾ ಜೋಷಿ ನಿರೂಪಿಸಿದರು. ಸಮಿತಿ ಅಧ್ಯಕ್ಷ ಪ್ರೊ| ಶಂಕರ್ ಸ್ವಾಗತಿಸಿ, ಪ್ರಧಾನ ಕಾರ್ಯ ದರ್ಶಿ ಗಿರೀಶ್ ತಂತ್ರಿ ವಂದಿಸಿದರು.