Advertisement

ಕಲಾವಿದರ ಪ್ರಯತ್ನದಿಂದ ಕಲೆ ಜೀವಂತ

05:30 PM Mar 28, 2021 | Team Udayavani |

ಕೋಲಾರ: ಜಿಲ್ಲೆಯ ಹಿರಿಯ ರಂಗಭೂಮಿ ಕಲಾವಿದರಾದ ಎನ್‌.ಆರ್‌.ಜ್ಞಾನಮೂರ್ತಿ, ಚೇತನ್‌ಪ್ರಸಾದ್‌, ಬಿ.ವಿ.ವಿ.ಗಿರಿ, ಬಿ.ಎನ್‌. ಅಣ್ಣಯ್ಯಪ್ಪ ಹಾಗೂ ನಾಟಕಕಾರ ಕಾ.ಹು. ಚಾನ್‌ಪಾಷಾರಿಗೆ ರಂಗಗೌರವ ನೀಡುವ ಮೂಲಕ ವಿಶ್ವರಂಗಭೂಮಿ ದಿನಾಚರಣೆಯನ್ನು ತಾಲೂಕಿನ ವೇಮಗಲ್‌ ಜೂನಿಯರ್‌ ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

Advertisement

ಕರ್ನಾಟಕ ನಾಟಕ ಅಕಾಡೆಮಿ, ರಂಗ ವಿಜಯಾ ಟ್ರಸ್ಟ್‌ಸಹಯೋಗದೊಂದಿಗೆ ನಡೆದ ವಿಶ್ವರಂಗಭೂಮಿ ದಿನಾಚರಣೆಯನ್ನು ಜಿಲ್ಲೆಯ ಹಿರಿಯ ಕಲಾವಿದ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮದ್ದೇರಿ ಮುನಿರೆಡ್ಡಿ ಉದ್ಘಾಟಿಸಿ, ಕಲೆ ಮತ್ತು ಕಲಾವಿದರಿಗೆ ಅಳಿವಿಲ್ಲ. ಕಲೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಲಕ್ಷಾಂತರ ಮಂದಿ ಕಲಾವಿದರಿದ್ದು, ಅಂತವರೆಲ್ಲರ ಪ್ರಯತ್ನದಿಂದಲೇ ಕಲೆ ಉಳಿದಿದೆ ಎಂದರು.

ಎಲ್ಲರ ಪಾತ್ರವೂ ಮಹತ್ವದ್ದು: ಕುಪ್ಪಂ  ದ್ರಾವಿಡ ವಿಶ್ವವಿದ್ಯಾಲಯದ ಡಾ.ಟಿ.ಎಸ್‌ .ನರಸಿಂಹಪ್ರಸಾದ್‌ ಮಾತನಾಡಿ, ಗ್ರೀಕ್‌ ರಂಗಭೂಮಿಯಿಂದ ಆರಂಭವಾದ ರಂಗಭೂಮಿ ಇತಿಹಾಸವು ಜಗತ್ತಿನಾದ್ಯಂತ ಹರಡಿದ್ದು, ಅನೇಕ ಪ್ರಯೋಗಗಳಿಗೆ ಒಳಪಟ್ಟಿದೆ. ರಂಗಭೂಮಿ ಎಂದರೆ ಕೇವಲ ಕಲಾವಿದರು ಮಾತ್ರವಲ್ಲ. ರಂಗದ ಮೇಲೆ, ತೆರೆ ಮರೆಯಲ್ಲಿ ಕೆಲಸ ಮಾಡುವ ಎಲ್ಲರ ಪಾತ್ರವೂ ಮಹತ್ವದ್ದಾಗಿರುತ್ತದೆ ಎಂದರು.

ರಂಗ ವಿಜಯ ಟ್ರಸ್ಟ್‌ನ ಮಾಲೂರು ವಿಜಿ ಮಾತನಾಡಿ, ವಿಶ್ವರಂಗ ದಿನಾಚರಣೆಯ ಇತಿಹಾಸ ಕುರಿತು ವಿವರಿಸಿ, ಈ ವರ್ಷ ಹೆಲೆನ್‌ ಮಿರೆನ್‌ ಎಂಬ ರಂಗಕಲಾವಿದೆ ದಿನಾಚರಣೆಯ ಸಂದೇಶವನ್ನು ನೀಡುವ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎನ್‌. ಕೃಷ್ಣಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್‌.ಗಣೇಶ್‌, ರಂಗವಿಜಯ ಟ್ರಸ್ಟ್‌ನ ಗೌರವ ಅಧ್ಯಕ್ಷ ಡಾ.ಗೋವಿಂದರಾಜು ಮಾತನಾಡಿದರು.

ಕಲಾವಿದೆ ಕೊಂಡರಾಜನಹಳ್ಳಿ ಮಂಜುಳ ದುರ್ಗಿ ಎಂಬ ಏಕ ವ್ಯಕ್ತಿ ನಾಟಕವನ್ನು ಪ್ರದರ್ಶಿಸಿ ಗಮನ ಸೆಳೆದರು. ಕಲಾವಿದ ಲಕ್ಷ್ಮೀನಾರಾಯಣ ಕಬೀರರ ದೋಹೆಯನ್ನು ಹಾಡಿ ರಂಜಿಸಿದರು.

Advertisement

ಕುಮಾರಿ ರಕ್ಷಿತಾ, ಗಮಕಿ ವೆಂಕಟರಮಣ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ನಟರಾಜ್‌ ಇತರರು ಉಪಸ್ಥಿತರಿದ್ದರು. ಉಪನ್ಯಾಸಕ ಜೆ.ಜಿ.ನಾಗ ರಾಜ್‌ ಕಾರ್ಯಕ್ರಮವನ್ನು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next