ಬೆಂಗಳೂರು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ಬಸವನಗುಡಿಯಲ್ಲಿ “ಆರ್ಟ್ ಗ್ಯಾಲರಿ ಮತ್ತು ಚಿತ್ರಕಲಾ ಪ್ರದರ್ಶನ’ ಆಯೋಜಿಸಲಾಗಿದೆ.
ಈ ಪ್ರದರ್ಶನದಲ್ಲಿ ಪ್ರಾಚೀನತೆ ಮತ್ತು ಹೊಸತನ ವಿಶೇಷ. ಹಳೆಯ ವಿನ್ಯಾಸವಿರುವ ಮರದ ಬಾಗಿಲುಗಳು, ಕೆಂಪು ಗಾರೆ ನೆಲ ಪ್ರಾಚೀನತೆಯ ಸೊಬಗು ನೀಡಿದರೆ, ಹೊಸದಾಗಿ ಆಳವಡಿಸಿರುವ ಫೋಕಸ್ ಟ್ರಾಕ್ ಲೈಟ್ ಮತ್ತು ಅಡ್ಜಸ್ಟಬಲ್-ಹುಕ್ಸ್-ಆನ್- ರೈಲ್ಸ್‌ಗಳು ಆಧುನಿಕತೆಯ ಸೌಕರ್ಯವನ್ನು ಒದಗಿಸುತ್ತಿದೆ. ಆರ್ಟ್ ಗ್ಯಾಲರಿ ಚಿತ್ರಕಲಾ ಪ್ರದರ್ಶನ ನ.14ರ ವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ:- ಹೊಸ ಚರ್ಚೆ ಹುಟ್ಟು ಹಾಕಿದ ರಶ್ಮಿಕಾ ಮಂದಣ್ಣ
ಶುಕ್ರವಾರ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಪ್ರದರ್ಶನ ಉದ್ಘಾಟಿಸಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಂಸ್ಥೆಯು ಕಳೆದ 7 ದಶಕಗಳಿಂದ ಸಮಾಜಮುಖೀ ಸಾಂಸ್ಕೃತಿಕ ಚಟುವಟಿಕೆಯ ನೆಲೆಯಾಗಿ ಗುರುತಿಸಿಕೊಂಡಿದೆ ಪ್ರಶಂಸಿದರು. ಗೌರವ ಕಾರ್ಯದರ್ಶಿ ಅರಕಲಿ ವೆಂಕಟೇಶ್ ಪ್ರಸಾದ್, ಆರ್ಟ್ ಗ್ಯಾಲರಿಯು ಜಗತ್ತಿನ ವಿವಿಧ ಕಲಾ ಪ್ರಕಾರಗಳನ್ನು ಬೆಂಗಳೂರಿನ ಜನತೆಗೆ ಪರಿಚಯಿಸುವ ಉದ್ದೇಶ ಹೊಂದಿದೆ.
ನಗರದ ಕೇಂದ್ರಭಾಗದಲ್ಲಿ ಹಸಿರು ಸಿರಿಯ ಮಧ್ಯೆ ಇರುವುದರಿಂದ ಸಾರ್ವಜನಿಕರ ವೀಕ್ಷಣೆಗೆ ಹೆಚ್ಚಿನ ಅವಕಾಶವಿದೆ ಎಂದು ಹೇಳಿದರು. ಸಂಸ್ಥೆಯ ಚಿತ್ರಕಲಾ ಶಿಕ್ಷಕ ಟಿ.ಕೆ.ಎನ್. ಪ್ರಸಾದ್ ಸಂಜಯ್ ಚಪೋಲ್ಕರ್ ಅವರನ್ನು ಸನ್ಮಾನಿಸಲಾಯಿತು. ಮಕ್ಕಳ ದಿನಾಚರಣೆಯ ಅಂಗವಾಗಿ ಚಿತ್ರಕಲಾ ಸ್ಪರ್ಧೆ ನಡೆಯಿತು.