Advertisement
ನಮ್ಮ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನವನ್ನು ಪಡೆದಿರುವ ಹಾಗೂ ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿರುವ ಗೋವಿನ ಮಹತ್ವವನ್ನು ಸಾರುವ ಸುಮಾರು 30 ವೈವಿಧ್ಯಮಯ ಕಲಾಕೃತಿಗಳನ್ನು ವಿವಿಧ ಕಲಾ ಪ್ರಾಕಾರಗಳಲ್ಲಿ ಈ ಕಲಾಶಾಲೆಯ ಮಕ್ಕಳೇ ರಚಿಸಿದ್ದರು. ಈ ಕಲಾಕೃತಿಗಳಿನ್ನು ಮಾರಿ ಸಂಗ್ರವಾದ ಹಣ ಮತ್ತು ವಿವಿಧ ದಾನಿಗಳ ಉದಾರ ನೆರವಿನಿಂದ ಸಂಚಯನಗೊಂಡ ಸುಮಾರು 50 ಸಾವಿರ ರೂಪಾಯಿಗಳಷ್ಟು ಮೊತ್ತವನ್ನು ಕೊಡಗು ನೆರೆ ಸಂದರ್ಭದಲ್ಲಿ ನಿರಾಶ್ರಿತರಾದ ಶ್ರೀಮತಿ ಅನಿತಾ ರಜೋರಿಯಾ ಮತ್ತು ವಾಜ್ಹಿ ಡಿ’ಸೋಜಾ ದಂಪತಿಗೆ ಹಸ್ತಾಂತರಿಸಲಾಯಿತು. ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢಶಾಲೆಯ ಅಧ್ಯಕ್ಷರಾದ ಶ್ರೀ ನರಸಿಂಹ ಆಚಾರ್ ದಾನಿಗಳ ಪರವಾಗಿ ಚೆಕ್ ಅನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪೋಷಕರಾದ ಸುಬ್ರಹ್ಮಣ್ಯ ಪ್ರಭು, ಅಲಪಾಠಿ ವಿಠಲೇಶ್ವರ, ಸವಿತಾ ನಾಯಕ್, ಮಂಜುಳಾ ಎಸ್., ಭಾವನಾ, ವರಲಕ್ಷ್ಮೀ ಅಲಪಾಟಿ, ಕಲಾ ಶಿಕ್ಷಕಿ ಪವಿತ್ರಾ ಸಿ., ಕಲಾವಿದ ಮತ್ತು ಕಲಾಶಾಲೆಯ ಮುಖ್ಯಸ್ಥರಾಗಿರುವ ಹರೀಶ್ ಸಾಗಾ ಅವರು ಉಪಸ್ಥಿತರಿದ್ದರು.