Advertisement

Art director: ಹೃದಯಾಘಾತದಿಂದ ಕಾಲಿವುಡ್‌ನ ಖ್ಯಾತ ಕಲಾ ನಿರ್ದೇಶಕ ಮಿಲನ್‌ ನಿಧನ

03:32 PM Oct 15, 2023 | Team Udayavani |

ಚೆನ್ನೈ: ಕಾಲಿವುಡ್‌ ಸಿನಿಮಾರಂಗದ ಖ್ಯಾತ ಕಲಾ ನಿರ್ದೇಶಕ ಮಿಲನ್ (54) ಭಾನುವಾರ(ಅ.15 ರಂದು) ಹೃದಯಾಘಾತದಿಂದ ನಿಧನರಾಗಿದ್ದಾರೆ.

Advertisement

ಕಳೆದ ರಾತ್ರಿ ಶೂಟಿಂಗ್‌ ಮುಗಿಸಿ ಹೊಟೇಲ್‌ ನಿಂದ ಮರಳಿದ್ದ ಮಿಲನ್‌ ಅವರು ಭಾನುವಾರ ಮುಂಜಾನೆ ಕೂಡ ಕೆಲಸಕ್ಕಾಗಿ ತನ್ನ ತಂಡದವರನ್ನು ಒಟ್ಟುಗೂಡಿಸಿದ್ದರು. ಆದರೆ ಕೆಲ ಸಮಯದ ಬಳಿಕ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಅತಿಯಾಗಿ ಬೆವರಲು ಆರಂಭಿಸಿದ ಅವರು ಈ ಬಗ್ಗೆ ಅವರ ತಂಡಕ್ಕೆ ಹೇಳಿದ್ದರು. ಕೂಡಲೇ ಪ್ರೊಡಕ್ಷನ್‌ ತಂಡವರು ಕಾರಿನ ವ್ಯವಸ್ಥೆಯನ್ನು ಮಾಡಿ ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ವಿಚಾರ ಕೇಳಿ ನಟ ಅಜಿತ್‌ , ನಿರ್ದೇಶಕ ಮಾಗಿಜ್ ತಿರುಮೇನಿ ಮತ್ತು ಛಾಯಾಗ್ರಾಹಕ ನೀರವ್ ಶಾ ಅವರು ಆಸ್ಪತ್ರೆಗೆ ಧಾವಿಸಿದ್ದಾರೆ. ಆದರೆ ಮಿಲನ್‌ ಅವರು ಆದಾಗಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಕಾಲಿವುಡ್ ಸಿನಿರಂಗದದಲ್ಲಿ ಕಲಾ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಮಿಲನ್‌ ನಟ ಅಜಿತ್‌ ಅವರ  ‘ವಿದಾ ಮುಯರ್ಚಿ’ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದರು.

ಮಿಲನ್‌  ಅಜಿತ್‌ ಅವರ ‘ಬಿಲ್ಲಾ’, ‘ವೇಲಾಯುಧಂ’, ‘ವೀರಂ’ ಮುಂತಾದ 30 ಕ್ಕೂ ಹೆಚ್ಚು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇದಲ್ಲದೆ ಸೂರ್ಯ ಅವರ ಬಹು ನಿರೀಕ್ಷಿತ ‘ಕಂಗುವ’ದಲ್ಲಿ ಸೂರ್ಯ ಅವರೊಂದಿಗೆ ಕೆಲಸ ಮಾಡುವವರಿದ್ದರು.

Advertisement

ಮೃತರು ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next