Advertisement

ಸಂತ ಅಲೋಶಿಯಸ್‌ ಕಾಲೇಜಿಗೆ ಬೆಲ್ಜಿಯಂ ವಿದ್ಯಾರ್ಥಿ ತಂಡದ ಆಗಮನ

11:22 PM Jul 13, 2019 | Sriram |

ಮಹಾನಗರ: ಬೆಲ್ಜಿಯಂನ ಬೇರೆ ಬೇರೆ ವಿಶ್ವವಿದ್ಯಾನಿಲಯಗಳ 14 ವಿದ್ಯಾರ್ಥಿಗಳನ್ನೊಳಗೊಂಡ “ಒಲಿವೆಂಟ್‌ ಎಂಬ ಹೆಸರಿನ ತಂಡ ಇಲ್ಲಿನ ಪ್ರತಿಷ್ಠಿತ ಕಾಲೇಜುಗಳಲ್ಲೊಂದಾದ ಸಂತ ಅಲೋಶಿ ಯಸ್‌ ಕಾಲೇಜಿಗೆ ಆಗಮಿಸಿದೆ.

Advertisement

ವಿಜ್ಞಾನ, ಕಾನೂನು, ಆರ್ಥಿಕತೆ, ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಮೊದಲಾದ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಅಧ್ಯಯನಶೀಲರಾಗಿರುವ ಈ “ಒಲಿವೆಂಟ್‌ ತಂಡ, ವಿದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಂಸ್ಕೃತಿ, ಆಚಾರ -ವಿಚಾರ, ನಂಬಿಕೆ ಆಚರಣೆ, ವಾತಾವರಣಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ವಿದೇಶ ಪ್ರವಾಸವನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ ಈ ತಂಡ ಒಂದು ವಾರದ ಅವಧಿಯ ಪ್ರವಾಸದಲ್ಲಿ ಸಂತ ಅಲೋಶಿಯಸ್‌ ಕಾಲೇಜು ಆವರಣ ಮತ್ತು ಇಲ್ಲಿನ ವೈವಿಧ್ಯಮಯ ಸಕಲ ಸೌಲಭ್ಯಗಳನ್ನು ವೀಕ್ಷಿಸಿ, ಕಾಲೇಜಿನ ಬೇರೆ ಬೇರೆ ಪ್ರಾಧ್ಯಾಪಕರ ವಿಭಿನ್ನ ವಿಷಯಗಳ ಮೇಲಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತು.

ಮಾತ್ರವಲ್ಲದೆ ಈ ವಿದ್ಯಾರ್ಥಿಗಳು ನಗರದ ಆಸುಪಾಸಿನಲ್ಲಿರುವ ಕಂಪೆನಿಗಳು ಮತ್ತು ಕೈಗಾರಿಕಾ ಕೇಂದ್ರಗಳಿಗೆ ಭೇಟಿ ನೀಡಿದರು. ವಿದೇಶದಲ್ಲಿರುವ ತಮ್ಮ ದೇಶದ ಜನರ ರಕ್ಷಣೆಯನ್ನು ನೋಡಿಕೊಳ್ಳಲು ಬೆಲ್ಜಿಯಂ ಸರಕಾರ ನಿಯೋಜಿಸಿದ ಅಧಿಕಾರಿ ಜನರಲ್‌ ವ್ಯಾನ್‌ದೆ ವೆÅಕನ್‌ ಮಾರ್ಕ್‌ ಅವರು ಚೆನ್ನೈಯಿಂದ ಆಗಮಿಸಿ ಈ ತಂಡವನ್ನು ಸೇರಿಕೊಂಡು ಸಂತ ಅಲೋಶಿಯಸ್‌ ಚಾಪೆಲ್‌ನಲ್ಲಿ ನಡೆದ ಪೂಜಾ ಕಾರ್ಯ ಕ್ರಮದಲ್ಲಿ ಭಾಗವಹಿಸಿದರು. ಅಲೋಶಿಯಸ್‌ ಕಾಲೇಜಿನ ವಿದೇಶಿ ಸಹಯೋಗ ಘಟಕದ ಡೀನ್‌ ಆಗಿರುವ ಡಾ| ವಿನ್ಸೆಂಟ್‌ ಮಸ್ಕರೇನ್ಹಸ್‌ ಈ ಕಾರ್ಯಕ್ರಮದ ಸಂಯೋಜಕರಾಗಿದ್ದಾರೆ. ಈ ತಿಂಗಳ 8 ರಂದು ನಗರಕ್ಕೆ ಆಗಮಿಸಿದ ಈ ತಂಡ ದ.ಕ. ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಯವರ ಜತೆ ಸಂವಾದ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next