Advertisement
ಕೆ.ಜಿ.ಹಳ್ಳಿ ನಿವಾಸಿ ಮೊಹಮ್ಮದ್ ಫರ್ಹಾನ್ ಅಲಿ ಯಾಸ್ ಶಹಬಾಜ್(25), ಆರ್.ನಗರ ನಿವಾಸಿ ಉಮೇಶ್(53), ನಾಗವಾರ ಮುಖ್ಯರಸ್ತೆ ನಿವಾಸಿ ಮೊಹಮ್ಮದ್ ಹುಸೇನ್(36), ವೆಂಕಟೇಶ್ವರಪುರ ನಿವಾಸಿ ಮೊಹಮ್ಮದ್ ಆರೀಫ್(36), ಅಂಜುಂ ಅಲಿ ಯಾಸ್ ಅಮ್ಜದ್(34), ಸೈಯದ್ ಅಹಮ್ಮದ್(24) ಹಾಗೂ ಸುಹೇಲ್ ಬೇಗ್ ಅಲಿಯಾಸ್ ಬಾಬು(24) ಬಂಧಿತರು.
Related Articles
Advertisement
ಈ ಮಾಹಿತಿಯನ್ನು ತನ್ನ ಸಹಚರರಾದ ಇತರೆ ಆರೋಪಿಗಳ ಜತೆ ಹಂಚಿಕೊಳ್ಳುತ್ತಿದ್ದ. ಶಹನಾಬ್ ಮತ್ತು ಸುಹೇಲ್ ಇತರೆ ಆರೋಪಿಗಳ ಜತೆ ಸೇರಿಕೊಂಡು ದರೋಡೆ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಇದೇ ರೀತಿಯ ದರೋಡೆಗೆ ವಿಫಲ ಯತ್ನ ನಡೆಸಿದ್ದರು. ನ.19ರಂದು ಚಿನ್ನದ ಗಟ್ಟಿ ಕೊಂಡೊಯ್ಯುತ್ತಿದ್ದ ಚಿನ್ನದ ವ್ಯಾಪಾರಿ ನಗರ್ತ್‌ಪೇಟೆ ನಿವಾಸಿ ಸಿದ್ದೇಶ್ವರ್ ಹರಿಭಾ ಶಿಂಧೆ(32) ಮತ್ತು ಸ್ನೇಹಿತ ಸೂರಜ್ ಶ್ರೀಕಾಂತ್ ಜಾಧವ್ ಜತೆ ಅಟ್ಟಿಕಾ ಗೋಲ್ಡ್‌ನಲ್ಲಿ 2.5 ಕೋಟಿ ರೂ. ಮೌಲ್ಯದ 5.5 ಕೆ.ಜಿ. ಚಿನ್ನದ ಗಟ್ಟಿ ಖರೀ ದಿಸಿದ್ದರು.
ಈ ಮಾಹಿತಿಯನ್ನು ಉಮೇಶ್, ಇತರೆ ಆರೋಪಿಗಳಿಗೆ ನೀಡಿದ್ದಾನೆ. ಹೀಗಾಗಿ 6 ಮಂದಿ 2 ಕಿ.ಮೀ. ದೂರ ಅವರನ್ನು ಹಿಂಬಾಲಿಸಿ, ಕಬ್ಬನ್ ಪೇಟೆ ಮುಖ್ಯ ರಸ್ತೆ 22ನೇ ಕ್ರಾಸ್‌ನಲ್ಲಿ ಹಿಂದಿನಿಂದ ಬಂದು ಮಾರಕಾಸ್ತ್ರಗಳನ್ನು ತೋರಿಸಿ, ದರೋಡೆ ಮಾಡಿದ್ದರು. ಬಳಿಕ ಏಳು ಮಂದಿ ಹಂಚಿಕೊಂಡಿದ್ದರು ಎಂದು ಪೊಲೀಸರು ಹೇಳಿದರು. ಪೊಲೀಸರ ಈ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತರು ಶ್ಲಾ ಸಿ, ತನಿಖಾ ತಂಡಕ್ಕೆ 70 ಸಾವಿರ ಬಹುಮಾನ ಘೋಷಿಸಿ¨ªಾರೆ.
ಫೋನ್ ಸಂಭಾಷಣೆ ಮೂಲಕ ಬಲೆಗೆ
ಇನ್‌ಸ್ಪೆಕ್ಟರ್ ಸಿ.ವಿ.ದೀಪಕ್ ಮತ್ತು ಸಬ್ ಇನ್‌ಸ್ಪೆಕ್ಟರ್ ಎನ್.ಸಿ.ಮಲ್ಲಿಕಾರ್ಜುನ್, ಗೋಪಾಲಕೃಷ್ಣ ನೇತೃತ್ವದ ತಂಡ ಪ್ರಕರಣ ದಾಖಲಿಸಿಕೊಂಡ ವಿಚಾರಣೆ ನಡೆಸಿದಾಗ ಭದ್ರತಾ ಸಿಬ್ಬಂದಿ ಉಮೇಶ್ ಗೊಂದಲದ ಹೇಳಿಕೆ ನೀಡಿದ್ದ. ಅಲ್ಲದೆ, 2ನೇ ಬಾರಿ ಮಳಿಗೆಯ ಸಿಬ್ಬಂದಿ ವಿಚಾರಣೆಗೆ ಹೋದಾಗ, ಮೊಬೈಲ್‌ನಲ್ಲಿ ಉಮೇಶ್, ಆತನ ಸಹಚರರಿಗೆ ಪೊಲೀಸ್ ಬಂದಿದ್ದಾರೆ ಎಂದು ಹೇಳುತ್ತಿದ್ದ.
ಈ ವಿಷಯ ಕೇಳಿಸಿಕೊಂಡ ಸಿಬ್ಬಂದಿ, ಹಿರಿಯ ಅಧಿಕಾರಿಗಳಿಗೆ ಹೇಳಿದ್ದರು. ಬಳಿಕ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಈತನ ಸಿಡಿಆರ್ ಆಧರಿಸಿ ಇತರೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.