3000 ಬ್ಯಾಂಕ್ ಖಾತೆ, ಸರಕಾರದ ವಿವಿಧ ವೆಬ್‌ಸೈಟ್‌ಗಳ ವಿವರ ಪತ್ತೆ
Advertisement
ಬೆಂಗಳೂರು: ಬಾಂಬ್ ತಯಾರಿಕೆ, ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಉಗ್ರ ಸಂಘಟನೆಗಳು ಈಗ ಸೈಬರ್ ಕ್ರೈಂ ಮೂಲಕ ದೇಶವನ್ನು ತಮ್ಮ ಹಿಡಿತಕ್ಕೆ ಪಡೆಯಲು ಹವಣಿಸುತ್ತಿವೆ. ರೈಲ್ವೇ ಟಿಕೆಟ್ ವಂಚನೆ ಪ್ರಕರಣದಲ್ಲಿ ರೈಲ್ವೇ ಪೊಲೀಸರಿಂದ ಬಂಧಿತನಾಗಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ವೇಳೆ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ.
Related Articles
ಸೈಬರ್ ಟೆರರಿಸಂ ಮಾತ್ರವಲ್ಲದೆ, 3,000ಕ್ಕೂ ಅಧಿಕ ಬ್ಯಾಂಕ್ ಖಾತೆಗಳನ್ನು ತನ್ನೊಂದಿಗೆ ಇಟ್ಟುಕೊಂಡು, ವಂಚಿಸಿದ ಹಣವನ್ನು ಈ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಿದ್ದ. ಆದರೆ ಮೂಲ ಖಾತೆದಾರರ ಮಾಹಿತಿ ಲಭ್ಯವಾಗಿಲ್ಲ. ಇದರೊಂದಿಗೆ ಈತ ಹತ್ತಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಹವಾಲ ದಂಧೆಯಲ್ಲಿ ಭಾಗಿಯಾಗಿದ್ದಾನೆ. ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಿಸಿಕೊಂಡು, ಈ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ಸಮಾಜ ಘಾತಕ ವ್ಯಕ್ತಿಗಳಿಗೆ ಹಣದ ವ್ಯವಸ್ಥೆ ಮಾಡಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Advertisement
ಸೈಬರ್ ಭಯೋತ್ಪಾದನೆಗೆ ಸಂಚು“ಡಾರ್ಕ್‌ನೆಟ್’ ಎಂಬ ಸಾಫ್ಟ್ವೇರ್ ಗುಲಾಮಾ ಬಳಿಯಿತ್ತು. ಕೇಂದ್ರ ಸರಕಾರಕ್ಕೆ ಸಂಬಂಧಪಟ್ಟ ವೆಬ್‌ಸೈಟ್‌ಗಳ ವಿವರ, ಬ್ಯಾಂಕ್ ಖಾತೆಗಳ ವಿವರ, ಹಲವಾರು ಸಾಫ್ಟ್ವೇರ್‌ಗಳನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ. ಈ ಮೂಲಕ ದೇಶ ಮತ್ತು ವಿದೇಶಗಳ ಸರಕಾರಿ ಮತ್ತು ಖಾಸಗಿ ಸಾಫ್ಟ್ವೇರ್‌ಗಳನ್ನು ತನ್ನ ಹಿಡಿತಕ್ಕೆ ಪಡೆದುಕೊಳ್ಳಲು ಯತ್ನಿಸಿ “ಸೈಬರ್ ಟೆರರಿಸಂ’ಗೆ ಅಡಿಪಾಯ ಹಾಕುತ್ತಿದ್ದ ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ. ರೈಲ್ವೇ ಇಲಾಖೆಗೆ ವಂಚನೆ
2017ರ ಅಕ್ಟೋಬರ್‌ನಲ್ಲಿ ರೈಲ್ವೇ ಇಲಾಖೆಯಿಂದ ಆನ್‌ಲೈನ್ ಮೂಲಕ ಇ-ಟಿಕೆಟ್‌ಗಳನ್ನು ಕಾಯ್ದಿರಿಸಿಕೊಂಡು ಐಆರ್‌ಸಿಟಿಸಿ ಮಧ್ಯವರ್ತಿ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದಾನೆ. ಬಳಿಕ ತನ್ನ ಸಹಚರರ ಜತೆ ಸೇರಿಕೊಂಡು ಅನಧಿಕೃತ ಮತ್ತು ಅಕ್ರಮವಾಗಿ ರೈಲ್ವೇ ಇಲಾಖೆಗೆ ಸೇರಿದ “ಎಎನ್‌ಎಂಎಸ್’ ಸಾಫ್ಟ್ವೇರ್ ಹ್ಯಾಕ್ ಮಾಡಿಕೊಡು, ನಕಲಿ ಹೆಸರು ಮತ್ತು ವಿಳಾಸಗಳನ್ನು ನೀಡಿ 563ಕ್ಕೂ ಅಧಿಕ ನಕಲಿ ವೈಯಕ್ತಿಕ ಗುರುತಿನ ಚೀಟಿಗಳನ್ನು ಸೃಷ್ಟಿಸಿಕೊಂಡಿದ್ದಾನೆ. ಈ ಮೂಲಕ ಆನ್‌ಲೈನ್ ರೈಲ್ವೇ ಇ-ಟಿಕೆಟ್‌ಗಳನ್ನು ಕಾಯ್ದಿರಿಸಿಕೊಂಡು ನಕಲಿ ಪ್ರತಿ ತೆಗೆದುಕೊಂಡು ಮಾರಾಟ ಮಾಡುತ್ತಿದ್ದ. ಜತೆಗೆ ಎಎನ್‌ಎಂಎಸ್ ಸಾಫ್ಟ್ವೇರ್ ಅನ್ನೇ ಬಾಡಿಗೆ ನೀಡಿ ಅಕ್ರಮ ವ್ಯವಹಾರ ನಡೆಸಿ, ರೈಲ್ವೇ ಇಲಾಖೆಗೆ ಕೋಟ್ಯಂತರ ರೂ. ವಂಚಿಸಿರುವುದು ಗೊತ್ತಾಗಿದೆ. ಬೆಂಗಳೂರಲ್ಲಿ ಎಲ್ಲಿದ್ದ?
ಆರೋಪಿ ನಕಲಿ ಹೆಸರು ಮತ್ತು ವಿಳಾಸಗಳನ್ನು ಉಲ್ಲೇಖೀಸಿ ಗುರುತಿನ ಚೀಟಿಗಳನ್ನು ಸೃಷ್ಟಿಸಿಕೊಂಡಿರುವುದು, ಝಾರ್ಖಂಡ್‌ನಿಂದ ಬೆಂಗಳೂರಿಗೆ ಬಂದಾಗಿ ನಿಂದ ಯಾವ ಸ್ಥಳಗಳಲ್ಲಿ ವಾಸವಿದ್ದ. ಮನೆ ಮಾಲಕರು ಮತ್ತು ಆತನಿಗೆ ನೆರವಾದವರು ಯಾರು? ಅವರೆಲ್ಲರ ವಿಚಾರಣೆ ನಡೆಯ ಬೇಕು. ಕೃತ್ಯಕ್ಕೆ ಬಳಸಿರುವ ಸಾಧನಗಳನ್ನು ಜಪ್ತಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗು ತ್ತಿದೆ ಎಂದು ಮೂಲಗಳು ತಿಳಿಸಿವೆ. ಕಾರ್ಟೊಸ್ಯಾಟ್ ಮಾಹಿತಿ
ಗುಲಾಮಾ ಮುಸ್ತಫಾ ಭಾರತ ಸರಕಾರದ ವೆಬ್‌ಸೈಟ್‌ಗಳ ವಿವರ ಮತ್ತು ಇಸ್ರೋದ ಕಾರ್ಟೊಸ್ಯಾಟ್‌ನ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿಕೊಂಡಿದ್ದಾನೆ. ಈ ವಿಚಾರ ಅತ್ಯಂತ ಅಪಾಯಕಾರಿಯಾಗಿದ್ದು, ಈ ಎಲ್ಲ ಬೆಳವಣಿಗೆಗಳು ಆರೋಪಿ ಉಗ್ರ ಸಂಘಟನೆಗಳು ಹಾಗೂ ಅವುಗಳ ಸದಸ್ಯರ ಜತೆ ನಿಕಟ ಸಂಪರ್ಕ ಹೊಂದಿದ್ದಾನೆ ಎಂಬುದಕ್ಕೆ ಬಲವಾದ ಪುಷ್ಟಿ ನೀಡುತ್ತಿವೆ ಎಂದು ಮೂಲಗಳು ತಿಳಿಸಿವೆ. – ಮೋಹನ್ ಭದ್ರಾವತಿ